Publish Date: Fri, 21 Nov 2014 (14:09 IST)
Updated Date: Fri, 21 Nov 2014 (14:13 IST)
ಹಸಿ ಕೊಬ್ಬರಿಯಿಂದ ಹಾಲು ತೆಗೆದು ಗ್ಲಿಸರಿನ್‌ನೊಂದಿಗೆ ಬೆರೆಸಿ ಚರ್ಮಕ್ಕೆ ಹಚ್ಚಿದರೆ ಚರ್ಮ ಮೆದುವಾಗುತ್ತದೆ.
ಅಕ್ಕಿ ತೊಳೆದ ನೀರಿನಿಂದ ಬೆವರು ಗುಳ್ಳೆಗಳ ಭಾಗವನ್ನು ತೊಳೆಯುತ್ತಿದ್ದರೆ ಗುಳ್ಳೆಗಳು ಮಾಯವಾಗುವವು.
ನೀರಿಗೆ ಉಪ್ಪು ಬೆರೆಸಿ ಆ ನೀರಿನಿಂದ ತಲೆಯನ್ನು ತೊಳೆದುಕೊಂಡರೆ ಕೂದಲು ಉದುರುವದಿಲ್ಲ.
ಅರಿಶಿನ ಪುಡಿಯನ್ನು ಶರೀರಕ್ಕೆ ತಿಕ್ಕಿಕೊಂಡು ಸ್ನಾನ ಮಾಡಿದರೆ ಮೈ ಕಾಂತಿಯುಕ್ತ ವಾಗುವುದು ಮತ್ತು ಬೇಡವಾದ ಕೂದಲುಗಳು ಉದುರಿಹೋಗಿ ಮತ್ತೆ ಬೆಳೆಯದಂತಾಗುವುದು.
ಕಡಲೆ ಹಿಟ್ಟನ್ನು ಸೋಪಿಗೆ ಬದಲಾಗಿ ಬಳಸಿದರೆ ಚರ್ಮದ ಕಾಂತಿ ಹೆಚ್ಚುತ್ತದೆ ಮತ್ತು ಮೆದುವಾಗುತ್ತದೆ.
ಟೊಮೆಟೋ ಹಣ್ಣಿನ ತಿರುಳನ್ನು ಮೊಡವೆಗಳಿಗೆ ಹಚ್ಚಿಕೊಂಡರೆ ಒಂದು ವಾರದಲ್ಲಿ ಮೊಡವೆ ಮಾಯವಾಗುತ್ತವೆ.