Publish Date: Fri, 21 Nov 2014 (14:04 IST)
Updated Date: Fri, 21 Nov 2014 (14:06 IST)
ಬೆಣ್ಣೆಯಿಂದ ತಯಾರಿಸಿದ ಕಾಡಿಗೆಯನ್ನು ನೇತ್ರದ ಹುಬ್ಬುಗಳಿಗೆ ಹಚ್ಚುವುದರಿಂದ ಕಣ್ಣು ಕಾಂತಿಯುತವಾಗಿ ಕಾಣುತ್ತವೆ.
ಸೇಬು ಹಣ್ಣನ್ನು ಹಲ್ಲಿನಿಂದ ಕಚ್ಚಿ ಸಿಪ್ಪೆ ಸಹಿತ ಊಟವಾದ ನಂತರ ತಿನ್ನುವುದರಿಂದ ದೈಹಿಕ ಬೆಳವಣಿಗೆ ಚೆನ್ನಾಗಿ ಆಗುತ್ತದೆ.
ಸೀಬೆಯ ಎಲೆಗಳನ್ನು ನುಣ್ಣಗೆ ಅರೆದು ಮುಖಕ್ಕೆ ಲೇಪಿಸಿಕೊಂಡರೆ ಒಂದು ವಾರದೊಳಗೆ ಮೊಡವೆಗಳು ನಿವಾರಣೆಯಾಗುವವು.
ನೆಲ್ಲಿಕಾಯಿಯನ್ನು ತೈಲದೊಡನೆ ಬೆರೆಸಿ ತಲೆಗೆ ಹಚ್ಚಿಕೊಳ್ಳುವುದರಿಂದ ಕೇಶದ ಬೆಳವಣಿಗೆ ಹೆಚ್ಚಾಗುತ್ತದೆ.
ಎಳೆನೀರಿನಿಂದ ಕೆಲವು ವಾರಗಳು ಮುಖ ತೊಳೆಯುತ್ತಿದ್ದರೆ ಮೊಡವೆಗಳು ಮಾಯವಾಗುತ್ತವೆ. ಕಪ್ಪು ಕಲೆಗಳು ದೂರವಾಗಿ ಮುಖ ಕಾಂತಿಯುಕ್ತವಾಗುತ್ತದೆ.