Publish Date: Fri, 21 Nov 2014 (14:02 IST)
Updated Date: Fri, 21 Nov 2014 (14:04 IST)
ನೆಲ್ಲಿ ಕಾಯಿಯನ್ನು ಜಜ್ಜಿ ರಸ ತೆಗೆದು ಅದನ್ನು ದಿನಾಲೂ ಅಂಗೈ, ಅಂಗಾಲಿಗೆ ಲೇಪಿಸಿದರೆ ಬೆವರುವುದು ನಿಲ್ಲುತ್ತದೆ
ಚರ್ಮದ ಮೇಲಿನ ಕಲೆಗಳನ್ನು ನಿವಾರಿಸಲು ಹಲವು ಬಾರಿ ಪರಂಗಿ ಹಣ್ಣಿನ ಸಿಪ್ಪೆಯಿಂದ ಚರ್ಮವನ್ನು ತಿಕ್ಕುತ್ತಾ ಬಂದರೆ ಕಲೆಗಳು ಮಾಯವಾಗುತ್ತವೆ.
ಧಡೂತಿ ಶರೀರದವರು ನಾಲ್ಕು ಟೀ ಚಮಚದಷ್ಟು ಜೇನುತುಪ್ಪವನ್ನು ಪ್ರತಿ ದಿನವೂ ಸೇವಿಸುತ್ತಿದ್ದರೆ ದೇಹದ ತೂಕ ಕಡಿಮೆಯಾಗುತ್ತದೆ.
ಚಳಿಗೆ ಮುಖದ ಚರ್ಮ ಒಡೆದರೆ ಹಾಲಿನ ಕೆನೆಯನ್ನು ಹಚ್ಚಿಕೊಂಡರೆ ಗುಣವಾಗುತ್ತದೆ.
ಕೂದಲಿಗೆ ಬೆಣ್ಣೆ ಹಚ್ಚುತ್ತಿದ್ದರೆ ಅಪ್ರಾಪ್ತ ವಯಸ್ಸಿನಲ್ಲಿ ನರೆ ಕೂದಲು ಉಂಟಾಗುವ ಸಾದ್ಯತೆಯನ್ನು ತಪ್ಪಿಸಬಹುದು.