Select Your Language

Notifications

webdunia
webdunia
webdunia
webdunia

ಒಣ ಚರ್ಮಕ್ಕೆ ಸಲಹೆಗಳು

ಒಣ ಚರ್ಮ
ಚರ್ಮ ಒಣಗಿದಂತೆಯೇ ಯಾವಾಗಲು ಇದ್ದು ಕಳಾಹೀನವಾಗಿದ್ದರೆ ಬಾಳೆಹಣ್ಣು, ಪಪ್ಪಾಯಿ ಹಾಗೂ ಬೆಣ್ಣೆಹಣ್ಣನ್ನು ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷದ ನಂತಹ ತೊಳೆಯಿರಿ.
 
ಜೇನುತುಪ್ಪ, ಮೊಟ್ಟೆಯ ಲೋಳೆ ಹಾಗೂ ಹಾಲಿನ ಪುಡಿಯನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 25 ನಿಮಿಷದ ನಂತರ ತೊಳೆಯಿರಿ. ಇದು ಒಣಚರ್ಮಕ್ಕೆ ಅತ್ಯುತ್ತಮ.
 
ತುರಿದ ಸೌತೆಕಾಯಿಯನ್ನು ಕಣ್ಣಿನ ಸುತ್ತಲೂ ಸೇರಿದಂತೆ ಮುಖಕ್ಕೆ ಹಚ್ಚಿ. ಇದು ಒಣಗಿದಂತಿದ್ದ ಚರ್ಮಕ್ಕೆ ಮತ್ತೆ ತಾಜಾತನ ತರುತ್ತದೆ.
 
ಪಪ್ಪಾಯಿಯನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಇದು ಕಳಾಹೀನ ಮುಖಕ್ಕೆ ತೇಜಸ್ಸು ನೀಡುತ್ತದಲ್ಲದೆ, ಮುಖವನ್ನು ಕ್ಲೀನ್ ಮಾಡಿ ಸತ್ತ ಚರ್ಮದ ಪದರವನ್ನು ತೆಗೆದುಹಾಕುತ್ತದೆ.
 
ಸೌಂದರ್ಯ ಯಾರಿಗೆ ತಾನೇ ಬೇಡ ಹೇಳಿ. ಹೀಗೆ ಪ್ರಜ್ವಲಿಸುವ ಸಂದರ್ಯಕ್ಕೆ ಕೆಲವು ಫೇಸ್‌ಪ್ಯಾಕ್‌ಗಳೂ ಪೂರಕ. ದ್ರಾಕ್ಷಿ ಮಾಸ್ಕ್ ಮಾಡಿ ಬಳಸಿ ನೋಡಿ. ದ್ರಾಕ್ಷಿ ಹಣ್ಣಿನ ಬೀಜ ತೆಗೆದು ಚೆನ್ನಾಗಿ ಪೇಸ್ಟ್ ಮಾಡಿ. ಇದನ್ನು ಚೆನ್ನಾಗಿ ಮುಖಕ್ಕೆ ಹಚ್ಚಿ ತೊಳೆಯಿರಿ.
 
ಸೌಂದರ್ಯ ಯಾರಿಗೆ ತಾನೇ ಬೇಡ ಹೇಳಿ. ಹೀಗೆ ಪ್ರಜ್ವಲಿಸುವ ಸಂದರ್ಯಕ್ಕೆ ಕೆಲವು ಫೇಸ್‌ಪ್ಯಾಕ್‌ಗಳೂ ಪೂರಕ. ಬಾದಾಮಿ ಎಣ್ಣೆ, ಹಾಲು ಫೇಸ್ ಪ್ಯಾಕ್ ಮಾಡಿ ಬಳಸಿ. ಬಾದಾಮಿ ಎಣ್ಣೆ, ಸ್ವಲ್ಪ ಸಕ್ಕರೆ ಹಾಗೂ ಬಿಸಿ ಮಾಡದ ತಾಜಾ ಹಾಲನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮುಖ, ಕತ್ತಿಗೆ ಲೇಪಿಸಿ 15 ನಿಮಿಷ ಬಿಟ್ಟು ತೊಳೆಯಿರಿ.
 
ಸೌಂದರ್ಯ ಯಾರಿಗೆ ತಾನೇ ಬೇಡ ಹೇಳಿ. ಹೀಗೆ ಪ್ರಜ್ವಲಿಸುವ ಸಂದರ್ಯಕ್ಕೆ ಕೆಲವು ಫೇಸ್‌ಪ್ಯಾಕ್‌ಗಳೂ ಪೂರಕ. ಕ್ಯಾರೆಟ್- ಜೇನಿನ ಮಾಸ್ಕ್ ಮಾಡಿ ಬಳಸಿ. ಕ್ಯಾರೆಟನ್ನು ತುರಿದು ಪೇಸ್ಟ್ ಮಾಡಿ. ಅದಕ್ಕೆ ಜೇನು ಸೇರಿಸಿ. ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.
 
ಸೌಂದರ್ಯ ಯಾರಿಗೆ ತಾನೇ ಬೇಡ ಹೇಳಿ. ಹೀಗೆ ಪ್ರಜ್ವಲಿಸುವ ಸಂದರ್ಯಕ್ಕೆ ಕೆಲವು ಫೇಸ್‌ಪ್ಯಾಕ್‌ಗಳೂ ಪೂರಕ. ತೆಂಗಿನ ಹಾಲಿನ ಮಾಸ್ಕ್ ಮಾಡಿ ಬಳಸಿ. ತೆಂಗಿನಕಾಯಿ ತುರಿದು ಅದನ್ನು ರುಬ್ಬಿ ರಸ ತೆಗೆಯಿರಿ. ಹಾಗೇ ಆ ರಸವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿ 15 ನಿಮಿಷ ಬಿಟ್ಟು ತೊಳೆಯಿರಿ.

Share this Story:

Follow Webdunia kannada