Select Your Language

Notifications

webdunia
webdunia
webdunia
webdunia

ಮುಖದ ಕೆಂಪು ಕಲೆಗೆ

ಮುಖ
ಮುಖದಲ್ಲಿ ಮೊಡವೆಯ ನಂತರ ಕೆಂಪು ಕಲೆಗಳು ಹಾಗೆ ಉಳಿದಿದ್ದರೆ, ದಿನವೂ ಮುಖ ತೊಳೆದ ಮೇಲೆ ಒಮ್ಮೆ ಐಸ್ ತುಂಡನ್ನು ಉಜ್ಜುವುದನ್ನು ರೂಢಿಸಿಕೊಳ್ಳಿ. ಇದು ಕೆಂಬಣ್ಣವನ್ನು ಕೊಂಚ ತಿಳಿಯಾಗಿಸುತ್ತದೆ.
 
ಆಲೂಗಡ್ಡೆ ತುಂಡನ್ನು ದಿನವೂ ಮುಖಕ್ಕೆ ಉಜ್ಜುತ್ತಾ ಬಂದಲ್ಲಿ ಮುಖದ ಕಲೆಗಳು ಮಾಯವಾಗುತ್ತವೆ.
 
ಆಲಿವ್ ಆಯಿಲ್ ಚರ್ಮಕ್ಕೆ ತುಂಬಾ ಒಳ್ಳೆಯದು. ದಿನವೂ ಮುಖಕ್ಕೆ ಆಲಿವ್ ಆಯಿಲ್‌ನಿಂದ ಮಸಾಜ್ ಮಾಡುತ್ತಾ ಬಂದಲ್ಲಿ ಮುಖ ನುಣುಪಾಗಿ, ಕಲೆಗಳು ಮಾಯವಾಗುತ್ತವೆ.
 
ಸ್ವಲ್ಪ ಗಂಧದ ಪುಡಿ, ಸ್ವಲ್ಪ ಮೊಸರು, ರೋಸ್ ವಾಟರ್ ಎರಡು ಹನಿ, ಚಿಟಿಕೆಯಷ್ಟು ಹಳದಿ ಪುಡಿ ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ. ದಿನವೂ ಹೀಗೆ ಮಾಡಿದಲ್ಲಿ ಕಲೆಗಳು ಕಡಿಮೆಯಾಗುತ್ತದೆ.
 
ದಿನವೂ ಜೇನುತುಪ್ಪ ಮುಖಕ್ಕೆ ಹಚ್ಚಿ 25 ನಿಮಿಷ ಬಿಟ್ಟು ತೊಳೆದರೆ ಕಲೆಗಳಿಗೆ ಉತ್ತಮ ಪ್ರಯೋಜನ ದೊರೆಯುತ್ತದೆ.

Share this Story:

Follow Webdunia kannada