Daily Horoscope
✕

ಹೊಳೆಯುವ ಚರ್ಮ ನಿಮ್ಮದಾಗ ಬೇಕೆ ?

Webdunia
ಸೋಮವಾರ, 17 ನವೆಂಬರ್ 2014 (16:42 IST)
ಹೊಳೆಯುವ ಚರ್ಮ ನಿಮ್ಮದಾಗಲು ಪ್ರತಿದಿನವೂ ಎದ್ದ ಮೇಲೆ ಒಂದು ಲೋಟ ನೀರಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದರಿಂದ ಚರ್ಮ ಹೊಳೆಯುವುದಲ್ಲದೆ, ಆರೋಗ್ಯಯುತವಾಗಿ ನಯವಾಗಿರುತ್ತದೆ.
 
ಪ್ರತಿದಿನವೂ ಸ್ವಲ್ಪ ಹಾಲಿನಲ್ಲಿ ಮುಖವನ್ನು ಮೆತ್ತಗೆ ಮಸಾಜ್ ಮಾಡುತ್ತಿದ್ದರೆ ಚರ್ಮ ತಾಜಾತನದಿಂದ ಕೂಡಿರುತ್ತದೆ. ಒಣ ಚರ್ಮವಿರುವವರಿಗೆ ಇದು ಅತ್ಯುತ್ತಮ.

ಸೌತೆಕಾಯಿಯನ್ನು ತುರಿದು ಅರೆದು ರಸ ತೆಗೆದು ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತೊಳೆದರೆ ಮುಖ ಫ್ರೆಶ್ ಆಗುತ್ತದೆ. ಅಲ್ಲದೆ ಚರ್ಮವನ್ನೂ ಬಿಗಿಗೊಳಿಸುತ್ತದೆ. ಮುಖದ ಕಲೆಗಳನ್ನೂ ಇದು ತೊಡೆದುಹಾಕುತ್ತದೆ.

ಇಡೀ ತೊಗರಿಯನ್ನು ರಾತ್ರಿಯಿಡೀ ನೆನೆಹಾಕಿ ಬೆಳಿಗ್ಗೆ ತೆಗೆದು ಅರೆದು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಬಹುದು.

ಬಾಳೆಹಣ್ಣನ್ನು ಕಿವುಚಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ. ಇದು ಒಣ ಚರ್ಮಕ್ಕೆ ಅತ್ಯುತ್ತಮ.

ಮೂರ್ನಾಲ್ಕು ಹಸಿ ನೆಲಗಡಲೆಯನ್ನು ಹಾಲಿನಲ್ಲಿ ಅರೆದು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ವ ಹೊತ್ತು ಬಿಟ್ಟು ತೊಳೆದರೆ ಇದು ಕೂಡಾ ಮುಖಕ್ಕೆ ಬೇಕಾದ ತೈಲಾಂಶವನ್ನು ನೀಡಿ ಮಾಯ್‌ಶ್ಚರೈಸ್ ಮಾಡುತ್ತದೆ.

ಸ್ವಲ್ಪ ಮುಲ್ತಾನಿ ಮಿಟ್ಟಿಗೆ ಪುದಿನ ಎಲೆ ಸೇರಿಸಿ ಅರೆದು ಪೇಸ್ಟ್ ಮಾಡಿ ಫ್ರಿಜ್ಜಿನಲ್ಲಿಡಿ. ರಾತ್ರಿ ಕಳೆದು ಬೆಳಗಾದ ಮೇಲೆ ಫ್ರಿಜ್ಜಿನಿಂದ ಹೊರತೆಗೆದು ಇದನ್ನು ಮುಖಕ್ಕೆ ಹಚ್ಚಿ. ಮೊಡವೆಯುಕ್ತ ಮುಖಕ್ಕೆ ಇದು ಅತ್ಯುತ್ತಮ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

Show comments