Select Your Language

Notifications

webdunia
webdunia
webdunia
webdunia

ಮೊಡವೆ ನಿವಾರಣೆಗೆ ಸಲಹೆಗಳು

Beauty Tips
ಕಹಿಬೇವಿನ ಎಲೆಯನ್ನು ನೀರಿನಲ್ಲಿ ಕುದಿಸಿ ಆನೀರಿನಿಂದ ಮುಖ ತೊಳೆಯಿರಿ. ಇದು ಮೊಡವೆ, ಕಪ್ಪುಚುಕ್ಕೆಗಳನ್ನು ಹೋಗಲಾಡಿಸುತ್ತದೆ.
 
ಮೊಡವೆಗಳಿಂದಾಗಿ ಮುಖದಲ್ಲಿ ಕಲೆಗಳಾಗಿದ್ದರೆ ತುಳಸಿಯ ಪೇಸ್ಟ್ ಮಾಡಿ ದಿನವೂ ಮುಖಕ್ಕೆ ಹಚ್ಚಿ. ಕಲೆಗಳು ನಿವಾರಣೆಯಾಗುತ್ತದೆ.
 
ಮೊಡವೆಗಳಿದ್ದರೆ ದಿನವೂ ಸೌತೆಕಾಯಿ ರಸ, ಲಿಂಬೆ ರಸ, ಹಾಲು ಸಮಪ್ರಮಾಣದಲ್ಲಿ ಸೇರಿಸಿ, ಅದರಲ್ಲಿ ಹತ್ತಿ ತುಂಡು ಮುಳುಗಿಸಿ ಆ ಮೂಲಕ ಮುಖಕ್ಕೆ ಉಜ್ಜಿ.
 
ಮುಖದಲ್ಲಿ ಬ್ಲ್ಯಾಕ್ ಹೆಡ್‌ಗಳಿದ್ದಲ್ಲಿ ಅದನ್ನು ನಿವಾರಣೆ ಮಾಡಲು ಮುಖಕ್ಕೆ ಮೊಸರಿನ ಜೊತೆಗೆ ಅಕ್ಕಿ ಪುಡಿಯನ್ನು ಸೇರಿಸಿ ದಿನವೂ ಹಚ್ಚಬೇಕು. ನಂತರ ಮೃದುವಾಗಿ ಮಸಾಜ್ ಮಾಡಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಬೇಕು.
 
ಮುಖ ತುಂಬ ತೈಲಯುಕ್ತವಾಗಿ ಕಾಣುತ್ತಿದ್ದರೆ, ಮುಲ್ತಾನಿ ಮಿಟ್ಟಿಯನ್ನು ರೋಸ್‌ವಾಟರ್‌ನಲ್ಲಿ ಕಲಸಿ ಮುಖಕ್ಕೆ ಹಚ್ಚಬೇಕು. ಸ್ವಲ್ಪ ಹೊತ್ತು ಬಿಟ್ಟು ತೊಳೆಯಬೇಕು.
 

Share this Story:

Follow Webdunia kannada