Select Your Language

Notifications

webdunia
webdunia
webdunia
webdunia

ಸೌಂದರ್ಯ ಹಾಳಾಗದಿರಲು ಈ ಅಭ್ಯಾಸಗಳನ್ನು ಬಿಡಿ

ಸೌಂದರ್ಯ ಹಾಳಾಗದಿರಲು ಈ ಅಭ್ಯಾಸಗಳನ್ನು ಬಿಡಿ
, ಗುರುವಾರ, 23 ಜೂನ್ 2016 (14:47 IST)
ಆರೋಗ್ಯವಂತಿಕೆಯ ಮುಖ್ಯ ಲಕ್ಷಣ ಕಾಂತಿಯುಕ್ತ ತ್ವಜೆ. ಸೌಂದರ್ಯ ಯಾರಿಗೆ ಬೇಡ ಹೇಳಿ. ಗಂಡು- ಹೆಣ್ಣನ್ನದೇ ಎಲ್ಲರೂ ತಾವು ಸುಂದರವಾಗಿ ಕಾಣಬೇಕು. ಇತರರನ್ನು ಆಕರ್ಷಿಕಸಬೇಕು ಎಂದು ಬಯಸುತ್ತಾರೆ. ಆದರೆ ದಿನನಿತ್ಯದ ಕೆಲವು ಅಭ್ಯಾಸಗಳು ಅರಿವಿಲ್ಲದೇ ಸೌಂದರ್ಯ ಹಾಳಾಗಲು ಕಾರಣವಾಗುತ್ತವೆ. ಹೀಗಾಗಿ ಅವುಗಳನ್ನು ತ್ಯಜಿಸುವುದೊಳಿತು. 
 
ತ್ವಜೆ ರಕ್ಷಣೆಗೆ ನೀವು ಬಿಡಲೇಬೇಕಾದ ಕೆಲವು ಕೆಟ್ಟ ಅಭ್ಯಾಸಗಳು-
 
*ಬಿಸಿ ನೀರಿನ ಸ್ನಾನ: ಬಿಸಿ ನೀರಿನ ಸ್ನಾನ ಪ್ರತಿಯೊಬ್ಬರಿಗೂ ಇಷ್ಟ. ಇದು ಆರಾಮದಾಯಕ ಅನುಭವ ನೀಡುವುದಂತೂ ಸತ್ಯ. ಆದರೆ
ಸೂಕ್ಷ್ಮ ತ್ವಜೆಗೆ ಇದು ಅಡ್ಡ ಪರಿಣಾಮವನ್ನು ಬೀರುತ್ತದೆ. ಬಿಸಿ ನೀರಿನಿಂದ ತ್ವಜೆಯ ಸೂಕ್ಷ್ಮಗೃಂಥಿಗಳು ದುರ್ಬಲಗೊಂಡು ತ್ವಜೆ ಕೆಂಪು ಬಣ್ಣಕ್ಕೆ ತಿರುಗುತ್ತದೆ ಅಥವಾ ಡ್ರೈ ಆಗಬಹುದು.
 
*ಶುಚಿಗೊಳಿಸದ ಮೇಕಪ್ ಬ್ರಷ್: ನಿಮ್ಮ ಮೇಕಪ್ ಬ್ರಷ್‌ನ್ನು ಶುಚಿಗೊಳಿಸದೇ ಬಳಸುವುದು ನಿಜಕ್ಕೂ ಅಪಾಯಕಾರಿ. ಅದರಲ್ಲಿ ಬ್ಯಾಕ್ಟಿರಿಯಾಗಳು ಬೆಳೆದು ತ್ವಜೆಯ ಮೇಲೆ ಅಡ್ಡ ಪರಿಣಾಮ ಬೀರಬಹುದು. ಜತೆಗೆ ಮೊಡವೆಗಳಿಗೂ ಆಹ್ವಾನ ನೀಡಬಹುದು. ಹೀಗಾಗಿ ವಾರಕ್ಕೊಮ್ಮೆ ಅದನ್ನು ಶಾಂಪು ನೀರಿನಿಂದ ತೊಳೆದು ಒಣಗಿಸಿ.

* ಸಾಕಷ್ಟು ನಿದ್ದೆ ಮಾಡದಿರುವುದು: ನಿದ್ರಾ ಹೀನತೆ ಅಥವಾ ಕಡಿಮೆ ನಿದ್ರೆ ತ್ವಜೆಯ ಆರೋಗ್ಯಕ್ಕೆ ಉತ್ತಮವಲ್ಲ. ದಿನವೆಲ್ಲ ಬಳಲಿದ್ದ ತ್ವಜೆ ನಿದ್ದೆಯಲ್ಲಿ ತನ್ನನ್ನು ಸರಿ ಮಾಡಿಕೊಳ್ಳುತ್ತದೆ. ದಣಿವನ್ನು ನಿವಾರಿಸಿಕೊಳ್ಳುತ್ತದೆ. ನೀವು ಸರಿಯಾಗಿ ನಿದ್ದೆ ಮಾಡದಿರುವುದು ಕೋಮಲ ತ್ವಜೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. 
 
* ಮೊಡವೆಗಳನ್ನು ಕೀಳುವುದು: ಚೂಪಾದ ತುದಿಯನ್ನು ಹಿಡಿದು ಮೊಡವೆಯನ್ನು ಕೀಳುವುದು ಪ್ರಚೋದನಾಕಾರಿಯಾಗುತ್ತದೆ. ಆದರೆ ಹೀಗೆ ಮಾಡುವುದರಿಂದ ಬ್ಯಾಕ್ಟಿರಿಯಾಗಳು ಮತ್ತಷ್ಟು ಆಳಕ್ಕೆ ಮೊಡವೆಗಳು ಹೆಚ್ಚಬಹುದು.
 
*ಹೆಚ್ಚು ಕಾಲ ಫೋನಿನಲ್ಲಿ ಮಾತನಾಡುವುದು: ಫೋನಿನಲ್ಲಿ ಹೆಚ್ಚು ಕಾಲ ಮಾತನಾಡುವುದು ಸಹ ತ್ವಜೆಗೆ ಒಳ್ಳೆಯದಲ್ಲ. ಮೊಬೈಲ್ ಎಷ್ಟರ ಮಟ್ಟಿಗೆ ಶುಚಿಯಾಗಿರುತ್ತದೆ. ಎಷ್ಟರ ಮಟ್ಟಿಗೆ ಬ್ಯಾಕ್ಟಿರಿಯಾ ಮುಕ್ತವಾಗಿರುತ್ತದೆ ಎಂಬುದು ನಮಗರಿವಿರುವುದಿಲ್ಲ.  ಮಾತನಾಡುವಾಗ ಮೊಬೈಲ್‌ನ್ನು ತ್ವಜೆಗೆ ಒತ್ತಿ ಹಿಡಿಯುವುದರಿಂದ ತ್ವಜೆಗೆ ಹಾನಿಯಾಗುತ್ತದೆ. 
 
ದಿನಕ್ಕೆ ಎರಡು ಬಾರಿ ಫೇಸ್ ವಾಸ್ ಬಳಸಿ ತೊಳೆಯುವುದು ತ್ವಜೆಗೆ ಉತ್ತಮ, ಜತೆಗೆ ಆರೋಗ್ಯಕರ ಆಹಾರ ಕ್ರಮ ಇರಲಿ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ತ್ವಜೆಗೆ ಹಾನಿ ಮಾಡದೆ ಮೇಕಪ್ ತೆಗೆಯಿರಿ