Select Your Language

Notifications

webdunia
webdunia
webdunia
webdunia

ತ್ವಜೆಗೆ ಹಾನಿ ಮಾಡದೆ ಮೇಕಪ್ ತೆಗೆಯಿರಿ

ತ್ವಜೆ
ಬೆಳಿಗ್ಗೆದ್ದು ಹೊರಹೋಗುವಾಗ ಮಾಡಿಕೊಂಡು ಹೋಗುವ ಮೇಕಪ್‌ನ್ನು ವಾಪಸ್ ಬಂದ ಮೇಲೆ ತೆಗೆಯುವುದು ದೊಡ್ಡ ಸಮಸ್ಯೆಯೆನಿಸಿ ಬಿಡುತ್ತದೆ. ನೀವು ಮೇಕಪ್ ತೆಗೆಯುವಾಗ ತ್ವಜೆಯ ಸುರಕ್ಷತೆ ಕಡೆ ಕೂಡ ಗಮನ ವಹಿಸಬೇಕಾಗುತ್ತದೆ. ಇಲ್ಲಿದೆ ಮೇಕಪ್ ಕಳಚಲು ನೈಸರ್ಗಿಕ ವಸ್ತುಗಳ ಪಟ್ಟಿ:

*ಕೊಬ್ಬರಿ ಎಣ್ಣೆ: ಸುಲಭವಾಗಿ ಕೈಗೆ ಸಿಗುವ ಕೊಬ್ಬರಿ ಎಣ್ಣೆ ಬಳಸಿ ನಿಮ್ಮ ಮೇಕ್ ಅಪ್‌ನ್ನು ಸುಲಭವಾಗಿ ರಿಮೂವ್ ಮಾಡಬಹುದು. 
ಇದರಿಂದ ವೇಗವಾಗಿ ಮೇಕ್ ಅಪ್ ರಿಮೂವ್ ಮಾಡಬಹುದಲ್ಲದೇ ಸೈಡ್ ಇಫೆಕ್ಟ್ ಕೂಡ ಇರುವುದಿಲ್ಲ. 
 
*ಆಲಿವ್ ಎಣ್ಣೆ: ಮೇಕಪ್ ತೆಗೆಯಲು ಹತ್ತಿಗೆ ಆಲಿವ್ ಎಣ್ಣೆ ಸೋಕಿಸಿ ಒರೆಸಿ. ಸೂಕ್ಷ್ಮ ಮತ್ತು ಡ್ರೈ ಸ್ಕಿನ್ ಹೊಂದಿರುವವರಿಗೆ ಇದು ಅತ್ಯುತ್ತಮವಾಗಿದೆ. ಆಲಿವ್ ಆಯಿಲ್ ಚಿಕಿತ್ಸಾ ಗುಣಗಳನ್ನು ಒಳಗೊಂಡಿರುವುದರಿಂದ ಮೇಕಪ್‌ನಿಂದ ಉಂಟಾಗುವ ಯಾವುದೇ ಕಿರಿಕಿರಿಗೆ ಇದು ತಕ್ಕ ಔಷಧವಾಗಿದೆ. ಜತೆಗೆ ರಿಲಾಕ್ಸ್ ಫೀಲ್ ನೀಡುತ್ತದೆ.
 
*ಸೌತೆಕಾಯಿ: ಕಣ್ಣಿನ ಸುತ್ತ ಇರುವ ಕಪ್ಪು ಮಾರ್ಕ್ ತೆಗೆಯಲು ಸೌತೆಕಾಯಿ ಬಳಸುವುದು ನಿಮಗೆ ಗೊತ್ತೇ ಇರಬಹುದು. ಆರೋಗ್ಯಕ್ಕೂ ಉತ್ತಮವಾದ ಸೌತೆಕಾಯಿಯನ್ನು ನೀವು ಮೇಕಪ್ ತೆಗೆಯಲು ಸಹ ಬಳಸಬಹುದು
 
*ಮೊಸರು: ಮೊಸರು ಸಹ ಮೇಕಪ್ ತೆಗೆಯಲು ಸಹಾಯಕಾರಿ.
 
* ಬಾದಾಮಿ ಎಣ್ಣೆ: ತ್ವಜೆಗೆ ನ್ಯೂಟ್ರಿಷನ್ ಒದಗಿಸುವ ಬಾದಾಮಿ ಎಣ್ಣೆ ಮೇಕಪ್ ತೆಗೆಯಲು ಸಹ ಅನುಕೂಲವಾಗಿದೆ. 
ಇದು ಮುಖದ ಸುಕ್ಕು ತೆಗೆಯಲು ಸಹಾಯ ಮಾಡುತ್ತದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಉದ್ದ ಕೂದಲು ಪಡೆಯಲು ಹೀಗೆ ಮಾಡಿ