ಸುಂದರ ಚರ್ಮಕ್ಕಾಗಿ ಗ್ರೀನ್ ಟೀ
, ಗುರುವಾರ, 16 ಜನವರಿ 2014 (13:10 IST)
ಪ್ರತಿದಿನ ತಪ್ಪದೆ ಗ್ರೀನ್ ಟೀಯನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬು ದೂರವಾಗುತ್ತದೆ. ಶರೀರದ ವ್ಯರ್ಥಗಳು ದೂರವಾಗುತ್ತದೆ.ಅದರಿಂದ ಚರ್ಮಕ್ಕೂ ಸಹ ಲಾಭ ಆಗುತ್ತದೆ. * ಮೊಡವೆಗಳು ಮತ್ತು ಅದರಿಂದ ಆಗುವ ಮಚ್ಚೆಗಳು ದೂರವಾಗಲು ಮುಖದ ಮೇಲೆ ಗ್ರೀನ್ ಟೀ ಹಚ್ಚಿರಿ. ಈ ರೀತಿ ಮಾಡುವುದರಿಂದ ಈ ಸಮಸ್ಯೆಗೆ ಬೈ ಹೇಳ ಬಹುದಾಗಿದೆ.ಟೀ ದ್ರಾವಣದಲ್ಲಿ ಮೃದುವಾದ ಬಟ್ಟೆಯಿಂದ ಅದ್ದಿ ಇಡಿ ಮುಖಕ್ಕೆ ನಿಧಾನವಾಗಿ ಹಚ್ಚಿರಿ. *ಎರಡು ಟೀ ಸ್ಪೂನ್ ಟೀ ಪುಡಿಯನ್ನು ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ ಅದನ್ನು ಮುಖಕ್ಕೆ ಲೇಪಿಸಿ ಒಂದು ಗಂಟೆ ಬಳಿಕ ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ. *ಚರ್ಮ ತಾಜಾವಾಗಿರಲು ಮೂರು ಚಮಚೆ ಗ್ರೀನ್ ಟೀ ಪುಡಿಗೆ ಸ್ವಲ್ಪ ಮೊಟ್ಟೆಯ ಬಿಳಿಯ ಭಾಗ , ಸ್ವಲ್ಪ ನಿಂಬೆ ರಸ ಮತ್ತು ಜೇನು ಮಿಶ್ರ ಮಾಡಿ ಇದನ್ನು ಮುಖ ಮತ್ತು ಕುತ್ತಿಗೆಗೆ ಲೇಪಿಸಿ ಸ್ವಲ್ಪ ಸಮಯದ ಬಳಿಕ ಸ್ವಚ್ಚಗೊಳಿಸಿ. *ಜೇನು ಮತ್ತು ಟೀ ಪುಡಿಯ ಮಿಶ್ರಣದಲ್ಲಿ ಮುಖಕ್ಕೆ ನಿಧಾನವಾಗಿ ಮಸಾಜ್ ಮಾಡಿ ಇದರಿಂದ ಸತ್ತ ಮೃತ ಕಣಗಳು ದೂರವಾಗುತ್ತದೆ. * ತಲೆ ಸ್ನಾನ ಆದ ಬಳಿಕ ಸ್ವಲ್ಪ ಗ್ರೀನ್ ಟೀ ದ್ರಾವಣವನ್ನು ತೆಗೆದುಕೊಂಡು ಕೂದಲನ್ನು ತೊಳೆದರೆ ಕೇಶದ ಆರೋಗ್ಯ ಸುಸ್ಥಿರವಾಗಿರುತ್ತದೆ.