Webdunia - Bharat's app for daily news and videos

Install App

ಪಿಗ್ಮೆಂಟೇಷನ್ ಸಮಸ್ಯೆಗೆ ಸರಳ ಪರಿಹಾರಗಳು

Webdunia
ಗುರುವಾರ, 9 ಜನವರಿ 2014 (11:07 IST)
PR
ಸಾಮಾನ್ಯವಾಗಿ ನಾವು ಕಂಡಿರುವಕೇಳಿರುವ ಹಾಗೂ ಅನುಭವಿಸಿತ್ತಿರುವ ಸಮಸ್ಯೆ ಎಂದರೆ ಚರ್ಮ ಕಪ್ಪಾಗುವುದು. ಅದು ಶರೀರದ ಕೆಲವು ಭಾಗಗಳಲ್ಲಿ ಮಾತ್ರ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಅದರಲ್ಲೂ ಮುಖದ ಮೇಲೆ ಈ ಸಮಸ್ಯೆ ಉಂಟಾದರೆ ತುಂಬಾ ಕಿರಿಕಿರಿ ಅನ್ನಿಸುತ್ತದೆ. ಈ ಸಮಸ್ಯೆಯನ್ನು ಮಂಗು , ಬಂಗು ಎನ್ನುತ್ತಾರೆ. ಇದನ್ನು ಆಂಗ್ಲ ಭಾಷೆಯಲ್ಲಿ ಪಿಗ್ಮೆಂಟೇಷನ್ ಎಂದು ಕರೆಯುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಕಟ್ಟು ಕಥೆಗಳು ಪ್ರಚಲಿತದಲ್ಲಿವೆ. ಆದರೆ ವಿಷಯ ಏನೇ ಇರಲಿ ಈ ಸಮಸ್ಯೆಯಿಂದ ನಮಗೆ ಕಿರಿಕಿರಿ ಉಂಟಾಗುವುದು ಸಹಜ. ಪಿಗ್ಮೆಂಟೇಷನ್ ಆದ ಸ್ಥಳದಲ್ಲಿ ಇರುವ ಕಪ್ಪು ನಾವು ಬಿಸಿಲಿಗೆ ಹೋದ ತಕ್ಷಣ ಮತ್ತಷ್ಟು ಕಪ್ಪಾಗಿ ಕಾಣುತ್ತದೆ. ಇದರಿಂದ ಮಾನಸಿಕವಾಗಿ ಕುಗ್ಗುವ ಮಂದಿಯೂ ಹೇರಳವಾಗಿದ್ದಾರೆ. ಈ ಸಮಸ್ಯೆಯು ವಿಟಮಿನ್ ಸಿ ಕೊರತೆಯಿಂದ ಉಂಟಾಗುತ್ತದೆ. ದೇಹಕ್ಕೆ ಸೂಕ್ತ ಪ್ರಮಾಣದಲ್ಲಿ ಸಮತೋಲನದ ಆಹಾರ ಅಳಕೆ ಮಾಡಿ ಸಮಸ್ಯೆಯಿಂದ ದೂರಾಗ ಬಹುದಾಗಿದೆ.


ಹಾರ್ಮೋನ್ ನಲ್ಲಿ ಏರುಪೇರು, ಥೈರಾಯಿಡ್ ಗೆ ಸಂಬಂಧ ಪಟ್ಟ ಸಮಸ್ಯೆಗಳು, ದೀರ್ಘ ಕಾಲದಿಂದ ಬಳಕೆ ಮಾಡುತ್ತಿರುವ ಕೆಲವು ಬಗೆಯ ಔಷಧಗಳು ಕೂದಲಿಗೆ ಅನಿಯಮಿತವಾಗಿ ಕಲರಿಂಗ್ ಮಾಡಿಕೊಳ್ಳುವ ಅಭ್ಯಾಸ ಹೀಗೆ ಅನೇಕ ಕಾರಣಗಳು ಈ ಸಮಸ್ಯೆಯ ಉದ್ಭವಕ್ಕೆ ದಾರಿ ಮಾಡಿ ಕೊಡುತ್ತದೆ. ಇಲ್ಲಿ ಸರಳವಾದ ಕೆಲವು ಸೌಂದರ್ಯದ ಉಪಚಾರಗಳಿವೆ . ನಿಮ್ಮ ಚರ್ಮದ ತತ್ವಕ್ಕೆ ಹೊಂದುವಂತಹುದನ್ನು ಅನುಸರಿಸಿ ಸಮಸ್ಯೆಗೆ ಪರಿಹಾರ ಪಡೆದು ಕೊಳ್ಳಿ. ಒಂದು ಸಂಗತಿ ತಿಳಿದಿರಲಿ ನೀವು ನಿರಂತರವಾಗಿ ಸೌಂದರ್ಯದ ಉಪಚಾರವನ್ನು ಮಾಡಿಕೊಂಡಾಗ ಮಾತ್ರ ಫಲಿತಾಂಶ ಸಿಗುತ್ತದೆ.

- ಕಬ್ಬಿನ ರಸವನ್ನು ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ಬಳಿಕ ಸ್ವಚ್ಛ ಗೊಳಿಸಿ ಕೊಳ್ಳಿ
- ಕಿತ್ತಳೆ ಹಣ್ಣಿನ ರಸವನ್ನು ಅರ್ಧ ಗಂಟೆ ಲೇಪಿಸಿ.
- ಕಿತ್ತಳೆ ಸಿಪ್ಪೆಯ ಪುಡಿ ಅಂಗಡಿಗಳಲ್ಲಿ ದೊರಕುತ್ತದೆ. ಆ ಪುಡಿಗೆ ಮೊಸರು ಸೇರಿಸಿ, ಆ ಪ್ಯಾಕ್ ಅರ್ಧ ಗಂಟೆ ಅಗತ್ಯ ಇರುವ ಸ್ಥಳಕ್ಕೆ ಲೇಪಿಸಿ. ಅದನ್ನು ಉಗುರು ಬೆಚ್ಚಗಿರುವ ನೀರನ್ನು ಬಳಸಿ ಸ್ವಚ್ಚಗೊಳಿಸಿ.
- ಆದಷ್ಟು ಹೊರಗೆ ಹೋಗುವಾಗ ಸೂರ್ಯನ ಕಿರಣಗಳು ಪಿಗ್ಮೆಂಟೇಷನ್ ಇರುವ ಜಾಗದಲ್ಲಿ ಬೀಳದಂತೆ ಎಚ್ಚರ ವಹಿಸಿ.
- ದಿಕ್ಕೆರದು ಬಾರಿ ತಪ್ಪದೆ ಮುಖವನ್ನು ತೊಳೆದು ಕೊಂಡು ಉತ್ತಮ ಕಂಪನಿಯ ಮಾಯಿಶ್ಚರೈಸರ್ ಲೇಪಿಸಿ .

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ