Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ಕೂದಲು ರಕ್ಷಣೆ

ಚಳಿಗಾಲ
, ಮಂಗಳವಾರ, 7 ಜನವರಿ 2014 (11:18 IST)
PR
ಚಳಿಗಾಲದಲ್ಲಿನ ಶುಷ್ಕ ವಾತಾವರಣವು ನಿಮ್ಮ ಕೂದಲ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದರಿಂದ ದೂರಾಗಲು ಅನೇಕ ಬಗೆಯಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದರೂ ಹೇಳಿಕೊಳ್ಳುವಂತಹ ಫಲಿತಾಂಶ ನಮಗೆ ದೊರಕುವುದಿಲ್ಲ. ಕೆಲವೊಮ್ಮೆ ಉಪಯೋಗಕ್ಕಿಂತ ಅನಾಹುತಗಳೆ ಆಗುವ ಸಂಭವ ಇರುತ್ತದೆ.

ಉತ್ತಮ ರೀತಿಯಲ್ಲಿ ನಮ್ಮ ಕೂದಲಿಗೆ ಉಪಚಾರ ಮಾಡಿದರೆ ಒಳ್ಳೆಯ ಫಲಿತಾಂಶಗಳನ್ನು ಹೊಂದ ಬಹುದಾಗಿದೆ. ಮುಖ್ಯವಾಗಿ ಈ ವಾತಾವರಣದಲ್ಲಿ ಮಾಯಿಶ್ಚರೈಸರ್ ಅಂಶವು ಕಡಿಮೆ ಇರುತ್ತದೆ.ಆದ್ದರಿಂದ ವಾತಾವರಣವು ಸದಾ ಮೋಡ ಕವಿದಂತೆ ಇರುತ್ತದೆ. ಅಲ್ಲದೇ ಧೂಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುತ್ತದೆ. ಇದು ಕೂದಲ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲದೇ ಅದರ ಬುಡವನ್ನು ದುರ್ಬಲಗೊಳಿಸುತ್ತದೆ. ಜೊತೆ ಕೂದಲ ಕೊನೆಗಳಲ್ಲಿ ಸೀಳಿಕೆ ಉಂಟಾಗುತ್ತದೆ. ಇವುಗಳಿಂದ ದೂರ ಆಗಲು ಕೆಲವೊಂದು ಹೇರ್ ಪ್ಯಾಕ್ ಗಳನ್ನು ನೀಡಲಾಗಿದೆ. ಅದನ್ನು ಬಳಸಿ ನಿಮ್ಮ ಕೂದಲನ್ನು ಕಾಪಾಡಿಕೊಳ್ಳಿ.

ಸ್ಟ್ರಾಬೆರ್ರಿ ಪ್ಯಾಕ್ :

ಅಗತ್ಯವಿರುವ ಸಾಮಗ್ರಿಗಳು:
ಹಣ್ಣಾದ ಸ್ಟ್ರಾಬೆರ್ರಿ ತಿರುಳು ಒಂದು ಬಟ್ಟಲು, ಅರ್ಧ ಬಟ್ಟಲು ರೋಸ್ ಮೆರ್ರಿ, ಒಂದು ಟೇಬಲ್ ಸ್ಪೂನ್ ವೆನಿಗರ್.ಮೇಲೆ ತಿಳಿಸಿರುವ ಸಾಮಗ್ರಿಗಳನ್ನು ಒಂದು ಪಾತ್ರೆಗೆ ಹಾಕಿಕೊಂಡು ಮಿಶ್ರ ಮಾಡಿ. ಅದನ್ನು ಕೂದಲ ಬುಡ ಸೇರಿದಂತೆ ಇಡೀ ಕೂದಲಿಗೆ ಹಚ್ಚಿರಿ. ಒಂದರಿಂದ ಒಂದೂವರೆ ಗಂಟೆಗಳ ಬಳಿಕ ಚನ್ನಾಗಿ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಮೊಟ್ಟೆ -ಬಾಳೆಹಣ್ಣಿನ ಪ್ಯಾಕ್:
ಬಾಳೆಹಣ್ಣು ಅತ್ಯುತ್ತಮ ಕೂದಲ ಕಂಡೀಷನರ್ . ಇದರ ನಿಯಮಿತ ಬಳಕೆಯಿಂದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ.

ಬೇಕಾದ ಸಾಮಗ್ರಿಗಳು:
ಕಳಿತ ಕಿವಿಚಿರುವ ಬಾಳೆ ಹಣ್ಣು ಎರಡು, ಎರಡು ಮೊಟ್ಟೆ ,ಒಂದು ನಿಂಬೆ ಹಣ್ಣು ಮತ್ತು ಒಂದು ಶವರ್ ಕ್ಯಾಪ್ .ಮೇಲೆ ತಿಳಿಸಿರುವ ಸಾಮಗ್ರಿಗಳನ್ನು ಮಿಶ್ರ ಮಾಡಿ ತಲೆಗೆ ಲೇಪಿಸಿಕೊಳ್ಳಿ. ಶವರ್ ಕ್ಯಾಪ್ ಧರಿಸಿ.ಅದನ್ನು ಸುಮಾರು ಅರ್ಧ ಗಂಟೆಗಳ ಕಾಲ ತಲೆಯಲ್ಲಿಟ್ಟು ನಂತರ ಶಾಂಪೂ ಬಳಸಿ ಉಗುರು ಬೆಚ್ಚಗಿರುವ ನೀರಿನಲ್ಲಿ ಸ್ವಚ್ಛ ಗೊಳಿಸಿ ಕೊಳ್ಳಿ, ವಾರಕ್ಕೆರಡು ಬಾರಿ ಈ ಪ್ಯಾಕ್ ಬಳಸಿ.

ಮುಲ್ತಾನಿ ಮಿಟ್ಟಿ ಪ್ಯಾಕ್ :
ಬೇಕಾಗುವ ಸಾಮಗ್ರಿಗಳು;
ಮುಲ್ತಾನಿ ಮಿಟ್ಟಿ ಎರಡು ಸ್ಪೂನ್, ಎರಡು ಚಮಚೆ ಕಡಲೆ ಹಿಟ್ಟು, ಅರ್ಧ ಕಪ್ ವೆನಿಗರ್. ಮೇಲೆ ತಿಳಿಸಿರುವ ಸಾಮಗ್ರಿಗಳ ಮಿಶ್ರಣವನ್ನು ತಲೆಗೆ ಲೇಪಿಸಿ ಅರ್ಧ ಗಂಟೆಯ ಬಳಿಕ ಬೆಚ್ಚಗಿರುವ ನೀರಿನಲ್ಲಿ ತೊಳೆದು ಕೊಳ್ಳಿ.ಅಕಸ್ಮಾತ್ ನಿಮ್ಮದು ತುಂಬಾ ಒಣಗಿದ ಕೂದಲಾಗಿದ್ದರೆ ಮೊದಲು ತಲೆಗೆ ಎಣ್ಣೆ ಹಚ್ಚಿ ಆ ಬಳಿಕ ಈ ಮಿಶ್ರಣವನ್ನು ಉಪಯೋಗಿಸಿ.

Share this Story:

Follow Webdunia kannada