Select Your Language

Notifications

webdunia
webdunia
webdunia
webdunia

ಸುಂದರ ಚರ್ಮಕ್ಕಾಗಿ ಸೌತೇಕಾಯಿ ಉಪಚಾರ!

ಸುಂದರ ಚರ್ಮಕ್ಕಾಗಿ ಸೌತೇಕಾಯಿ ಉಪಚಾರ!
, ಭಾನುವಾರ, 5 ಜನವರಿ 2014 (11:19 IST)
PR
ಆರೋಗ್ಯದ ದೃಷ್ಟಿಯಿಂದ ಸೌತೇಕಾಯಿಅತ್ಯುತ್ತಮ ತರಕಾರಿ. ಅದೇ ರೀತಿ ಅದು ರಕ್ತದೊತ್ತಡ ದೂರ ಮಾಡುತ್ತದೆ. ಅದರಲ್ಲಿ ಇರುವ ಪೊಟಾಷಿಯಂ ರಕ್ತದೊತ್ತಡವನ್ನು ಸಮಸ್ಥಿತಿಯಲ್ಲಿ ಇಡುತ್ತದೆ. ಸೌತೇಕಾಯಿ ಯಲ್ಲಿ ಇರುವ ಲವಣಗಳು ಉಗುರು ಆರೋಗ್ಯವಾಗಿ ಬೆಳೆಯುವಂತೆ ಮಾಡುತ್ತದೆ.

ಜೊತೆಗೆ ಸುಂದರ ಆಕಾರ ಇರುವಂತೆ ಕಾಪಾಡುತ್ತದೆ. ಕಣ್ಣಿನ ಕೆಳಗೆ ಉಂಟಾದ ಕಪ್ಪು ವರ್ತುಲಗಳನ್ನು ಸೌತೇಕಾಯಿ ದೂರ ಮಾಡುತ್ತದೆ. ಅದನ್ನು ಬಿಲ್ಲೆಯಂತೆ ಕತ್ತರಿಸಿ ಕಣ್ಣಿನ ಮೇಲಿತ್ತು ಇಪ್ಪತ್ತು ನಿಮಿಷಗಳ ಬಳಿಕ ತೆಗೆಯ ಬೇಕು ಪ್ರತಿದಿನ ಹೀಗೆ ಮಾಡಿದರೆ ಸಮಸ್ಯೆ ದೂರವಾಗುತ್ತದೆ. ಬಿಲ್ಲೆಗಳನ್ನು ಇಡಲು ಇಷ್ಟ ಪದದವರು ತುರಿದು ಅದಕ್ಕೆ ಸ್ವಲ್ಪ ಮೊಸರು ಬೆರಸಿ ಕಣ್ಣಿನ ಮೇಲೆ ಇಟ್ಟು ಕೊಳ್ಳ ಬಹುದಾಗಿದೆ.
ಕಂಫ್ನ್ನ ಕೆಳಗೆ ಉಬ್ಬಿದಂತೆ ಇದ್ದಾರೆ ಸೌತೇಕಾಯಿ ಚೂರುಗಳನ್ನು ಅದರ ಮೇಲಿಟ್ಟು ಸ್ವಲ್ಪ ಕಾಲ ಹಾಗೆ ಇದ್ದಾರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದರೆ ಅದಕ್ಕೆ ಹತ್ತಿ ಸುತ್ತಿ ಅದನ್ನು ಅಗತ್ಯವಿರುವ ಸ್ಥಳದಲ್ಲಿ ಇಟ್ಟುಕೊಳ್ಳ ಬೇಕು.

ಕೂದಲ ಬೆಳವಣಿಗೆಗೂ ಸಹ ಇದು ಹೆಚ್ಚು ಉಪಯುಕ್ತ . ಇದರಲ್ಲಿರುವ ಸಲ್ಫರ್, ಸಿಲಿಕಾನ್ , ಕೂದಲ ಆರೋಗ್ಯವನ್ನು ಕಾಪಾಡುತ್ತದೆ. ಸೌತೇಕಾಯಿರಸವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ.

Share this Story:

Follow Webdunia kannada