Select Your Language

Notifications

webdunia
webdunia
webdunia
webdunia

ವ್ಯಕ್ತಿಯ ಚಂದ ಹೆಚ್ಚಿಸುವ ಕಣ್ಣುಗಳು

ವ್ಯಕ್ತಿಯ ಚಂದ ಹೆಚ್ಚಿಸುವ ಕಣ್ಣುಗಳು
, ಸೋಮವಾರ, 3 ಫೆಬ್ರವರಿ 2014 (10:41 IST)
PR
ಕಣ್ಣುಗಳು ಕಾಂತಿಯುಕ್ತವಾಗಿ ಆರೋಗ್ಯಪೂರ್ಣವಾಗಿದ್ದರೆ ವ್ಯಕ್ತಿಯ ಸೌಂದರ್ಯ ಇಮ್ಮಡಿಸುತ್ತದೆ. ಕಣ್ಣು ಹಾಗೂ ಅದರ ಸುತ್ತಲಿನ ಭಾಗಗಳು ಸುಂದರವಾಗಿರುವಂತೆ ನೋಡಿಕೊಳ್ಳುವುದು ಆರೋಗ್ಯ ಪರಿರಕ್ಷೆಯಲ್ಲಿ ಅಗತ್ಯ.

ಬಣ್ಣಗೆಟ್ಟ ಕಣ್ಣುಗಳು ರೋಗಿಯ ಮುಖದ ಅಂದ ಕೆಡಿಸುತ್ತವೆ. ಮುಖದಲ್ಲಿ ಮೊದಲು ಗಮನ ಸೆಳೆಯುವ ಕಣ್ಣುಗಳು ಆಕರ್ಷಕವಾಗಿ ಕಾಣುವಂತೆ ಮಾಡಲು ನೈಸರ್ಗಿಕ ಚಿಕಿತ್ಸಾ ವಿಧಾನಗಳಿವೆ. ಕಣ್ಣಿನ ಪೇಲವತನಕ್ಕೆ ದೇಹದೊಳಗಿನ ಅನಾರೋಗ್ಯ, ವ್ಯಕ್ತಿ ರೂಢಿಸಿದ ವ್ಯಸನಗಳು ಕಾರಣವಾಗಬಹುದು.

ಹೊಗೆಬತ್ತಿ ಅಥವಾ ಧೂಮಪಾನ, ತಂಬಾಕು ಸೇವನೆ ಮಾಡುವವರ ಕಣ್ಣುಗಳು ಕಾಂತಿಯನ್ನು ಕಳೆದುಕೊಳ್ಳುತ್ತವೆ. ರಕ್ತಹೀನತೆಯಿಂದ ನರಳುವವರು, ನಿದ್ದೆಯಿಲ್ಲದೆ ಬಳಲುವವರು, ಯಕೃತುವಿನ ರೋಗದಂತಹ ದೈಹಿಕ ಆನಾರೋಗ್ಯಗಳಿಂದ ನರಳುವವರ ಕಣ್ಣುಳು ಕಾಂತಿರಹಿತವಾಗಿರುತ್ತವೆ.

ಇಂತಹದ್ದೇ ಇನ್ನೊಂದು ಸಮಸ್ಯೆ ಎಂದರೆ ಕಣ್ಣಿನ ಸುತ್ತಲಿನ ಕಪ್ಪುವರ್ತುಲಗಳು. ಕಣ್ಣಿನ ಸುತ್ತಲಿನ ಕಲೆಗಳಿಗೆ ಪ್ರಮುಖ ಕಾರಣವೆಂದರೆ ಚಿಂತೆ ಹಾಗೂ ನಿದ್ದೆಯ ಕೊರತೆ ರೋಗಗಳು. ಹೆಚ್ಚಿನ ನಿದ್ದೆ ಹಾಗೂ ರೋಗಗಳ ಚಿಕಿತ್ಸೆಯಿಂದ ಇದನ್ನು ನಿವಾರಿಸಬಹುದು.

ಈ ಎಲ್ಲಾ ವಿಧಾನಗಳಿಂದ ಕಣ್ಣಿನ ಸೌಂದರ್ಯ ಹೆಚ್ಚಿಸುವುದರೊಂದಿಗೆ ಆರೋಗ್ಯ ಹಿತಕಾರಿ ಸೌಂದರ್ಯ ಸಾಮಗ್ರಿಗಳನ್ನು ಬಳಸುವುದರಲ್ಲೂ ಗಮನಹರಿಸಬಹುದು.

Share this Story:

Follow Webdunia kannada