Select Your Language

Notifications

webdunia
webdunia
webdunia
webdunia

ಮಾನ್ಸೂನ್ ನಲ್ಲಿ ಯಾವ ಥರದ ಡ್ರೆಸ್ ಹಾಕ್ಕೋಳ್ಳೋದು ಅಂತ ಚಿಂತೆನಾ..? ಯೋಚ್ನೆ ಬಿಡಿ ಈ ಸ್ಟೋರಿ ನೋಡಿ

ಮಾನ್ಸೂನ್ ನಲ್ಲಿ ಯಾವ ಥರದ ಡ್ರೆಸ್ ಹಾಕ್ಕೋಳ್ಳೋದು ಅಂತ ಚಿಂತೆನಾ..? ಯೋಚ್ನೆ ಬಿಡಿ ಈ ಸ್ಟೋರಿ ನೋಡಿ
ಬೆಂಗಳೂರು , ಬುಧವಾರ, 28 ಜೂನ್ 2017 (10:22 IST)
ಮಾನ್ಸೂನ್‌ ಬಂತೆಂದರೆ ಯಾವ ಬಟ್ಟೆ ಹಾಕೋದು ಅನ್ನೋದೆ ಒಂದು ದೊಡ್ಡ ಚಿಂತೆಯಾಗತ್ತೆ.  ಬಿಳಿ ಬಟ್ಟೆ, ಉದ್ದವಾದ ಸ್ಕರ್ಟ್ ಧರಿಸಿದೆ ಕೊಳೆಯಾಗುತ್ತೆ ಎಂಬ ಭಯ, ತೆಳುವಾದ ಬಟ್ಟೆಗಳು ಮಲೆಯಲ್ಲಿ ಒದ್ದೆಯಾದ್ರೆ ಪಾರದರ್ಶಕವಾಗಿ ಕಾಣತ್ತೆ ಎಂಬ ಚಿಂತೆ. ನೋಡೂಕೂ ಸ್ಟೈಲೀಶ್ ಆಗಿ ಕಾಣ್ಬೇಕು, ಮಳೆಗಾಲಕ್ಕೂ ಒಗ್ಗುವಹಾಗಿರಬೇಕು ಅನ್ನೋದು ಸಮಸ್ಯೆ ಅಲ್ವಾ. ಈ ಯೋಚ್ನೆ ಬಿಡಿ ಇಲ್ಲಿದೆ ಮಾನ್ಸೂನ್ ನಲ್ಲಿ ಯಾವ ಡ್ರೆಸ್ ಹಾಕೋಬಹುದು ಎಂಬ ಸಲಹೆ.
 
* ವೃತ್ತಿಪರರು, ಕಾಲೇಜಿಗೆ ಹೋಗುವವರು ಹೀಗೆ ಯಾರೇ ಆಗಿರಲಿ ಮಳೆಗಾಲದಲ್ಲಿ ಬಿಳಿಬಟ್ಟೆ, ಬಣ್ಣ ಬಿಡುವಂತ ಬಟ್ಟೆ, ಲಾಂಗ್ ಸ್ಕರ್ಟ್ ಅಥವಾ ಪ್ಯಾಂಟ್ ಗಳನ್ನು ಅವಾಯ್ಡ್ ಮಾಡೋದು ಒಳ್ಳೆದು. ಮಾನ್ಸೂನಲ್ಲಿ ಹೆಚ್ಚಾಗಿ ಗ್ರೇಕಲರ್, ಬ್ಲ್ಯಾಕ್, ರೆಡ್, ಬ್ಲ್ಯೂ, ಆರೆಂಜ್ ಹೀಗೆ ಡಾರ್ಕ್ ಕಲರ್ ಬಟ್ಟೆಗಳನ್ನು ಧರಿಸುವುದು ಉತ್ತಮ. 
 
* ಸ್ವಲ್ಪ ಕಲರ್ ಫುಲ್ ಆಗಿಯೂ ಕಾಣಬೇಕು ಅಂದ್ರೆ ದಟ್ಟವಾದ ಹೂಗಳ ಡಿಸೈನ್, ಚೆಕ್ಸ್ ಚೆಕ್ಸ್ ಡಿಸೈನ್ ಗಳಂತ ಬಟ್ಟೆಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು. 
 
* ಇನ್ನು ಲಾಂಗ್ ಸ್ಕರ್ಟ್ ಗಳ ಬದಲಿಗೆ ಸ್ಮಾರ್ಟ್ ಫಾರ್ಮಲ್ ಸ್ಕರ್ಟ್ ಉತ್ತಮ. ಅಥವಾ ಶಾರ್ಟ್ ಅಥವಾ ನೀ ಲೆಂಥ್ ಪೆನ್ಸಿಲ್ ಕಟ್ ಸ್ಕರ್ಟ್ ಗಳನ್ನು ಧರಿಸಬಹುದು. ಪ್ಯಾಂಟ್ ನಿಮ್ಮ ಆಯ್ಕೆಯಾಗಿದ್ದರೆ ಶಾರ್ಟ್ ಅಥವಾ ನೀ ಲೆಂಥ್ ಪ್ಯಾಂಟ್ ಹಾಗೂ ಕ್ಯಾಪ್ರೀಸ್ ಗಳನ್ನು ಕೂಡ ಧರಿಸಬಹುದು.
 
* ಇನ್ನು ಮಾನ್ಸೂನ್ ನಲ್ಲಿ ಜಾಕೆಟ್ ಇಷ್ಟವಿದ್ದರೆ ನೀವು ಖಂಡಿತಾ ಜಾಕೆಟ್ ಟ್ರೈಮಾಡಬಹುದು. ಟ್ರೆಂಡಿಯಾಗಿರುವ ಮಾನ್ಸೂನ್ ಜಾಕೆಟ್ ಕೂಡ ಪ್ರಯತ್ನಿಸಬಹುದು
 
* ನಿಮಗೆ ಕುರ್ತಿ ಇಷ್ಟವಾದಲ್ಲಿ ಶಾರ್ಟ್ ಕುರ್ಥೀಸ್ ಮತ್ತು ಡಾರ್ಕ್ ಕಲರ್ ಲೆಗ್ಗೀನ್ಸ್ ಧರಿಸಬಹುದು.
 
* ಒಂದು ವೇಳೆ ನೀವು ಸಾರಿಪ್ರಿಯರಾಗಿದ್ದರೆ ಲೈಟ್ ವೇಟ್ ಪ್ರಿಂಟೆಂಡ್ ಸಾರಿಗಳನ್ನು ಧರಿಸುವುದು ಉತ್ತಮ.
 

Share this Story:

Follow Webdunia kannada

ಮುಂದಿನ ಸುದ್ದಿ

ನಿದ್ದೆ ಕಡಿಮೆನಾ..? ಜಂಕ್ ಫುಡ್ ತಿನ್ಬೇಕು ಅನ್ಸತ್ತಾ..? ಯಾಕ್ ಹೀಗೆ ಗೊತ್ತಾ..?