Webdunia - Bharat's app for daily news and videos

Install App

ಕಪ್ಪು ವರ್ತುಲಗಳಿಗೆ ಕೆಲವು ಮನೆ ಮದ್ದು

Webdunia
ಭಾನುವಾರ, 16 ಜುಲೈ 2017 (06:34 IST)
ಬೆಂಗಳೂರು: ಮುಖದಲ್ಲಿ ಕಪ್ಪು ವರ್ತುಲಗಳಿದ್ದರೆ ಎಷ್ಟು ಮೇಕಪ್ ಮಾಡಿಕೊಂಡರೂ ಅಷ್ಟೇ. ಕಪ್ಪು ಕಲೆ ಎದ್ದು ಕಾಣುತ್ತದೆ. ಹಾಗಾದರೆ ಇದನ್ನು ಹೋಗಲಾಡಿಲು ಸಿಂಪಲ್ ಉಪಾಯಗಳೇನು ಗೊತ್ತಾ?


ನಿಂಬೆ ಹಣ್ಣು

ನಿಂಬೆ ಹಣ್ಣನ್ನು ಕಟ್ ಮಾಡಿಕೊಂಡು ಮುಖಕ್ಕೆ ಉಜ್ಜಿಕೊಳ್ಳಬಹುದು. ಹೀಗೇ ನಿಯಮಿತವಾಗಿ ಮಾಡುತ್ತಿರುವುದರಿಂದ ಕಪ್ಪು ವರ್ತುಲಗಳು, ಮೊಡವೆ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ ಸೆನ್ಸಿಟಿವ್ ಚರ್ಮ ಹೊಂದಿರುವವರು ಎಚ್ಚರಿಕೆಯಿಂದ ಬಳಸುವುದು ಒಳಿತು.

ಹಸಿ ಆಲೂಗಡ್ಡೆ
ಆಲೂ ಗಡ್ಡೆಯನ್ನು ನಿಂಬೆ ಹಣ್ಣಿನಂತೇ ಉಜ್ಜಿಕೊಳ್ಳಬಹುದು. ಹಸಿ ಆಲೂಗಡ್ಡೆಯಲ್ಲಿ ಚರ್ಮವನ್ನು ಕಾಂತಿಯುತವಾಗಿ ಮಾಡುವ ಗುಣವಿದೆ.

ಅರಸಿನ
ಅರಸಿನ ಹಚ್ಚುತ್ತಿದ್ದರೆ ಮುಖದಲ್ಲಿರುವ ಕಲೆಗಳು ಶಾಶ್ವತವಾಗಿ ನಿರ್ಮೂಲನೆಯಾಗುತ್ತವೆ. ಶುದ್ಧ  ಅರಸಿನವನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬಹುದು.

ಅಲ್ಯುವೀರಾ
ಅಲ್ಯುವೀರಾದಲ್ಲಿರುವ ಜೆಲ್ ಮುಖದಲ್ಲಿರುವ ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸಲು ಪರಿಣಾಮಕಾರಿ. ಇದು ಸತ್ತ ಜೀವ ಕಣಗಳನ್ನು ಕಿತ್ತು ಹಾಕಿ, ಹೊಸ ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೆಲವು ಬಿಂದು ಜೇನು ತುಪ್ಪದ ಜತೆಗೂ ಇದನ್ನು ಹಚ್ಚಿಕೊಳ್ಳಬಹುದು.

ಇದನ್ನೂ ಓದಿ.. ನಟಿಯ ಅಶ್ಲೀಲ ಫೋಟೋಗಳಿದ್ದ ಮೊಬೈಲ್ ದಿಲೀಪ್ ವಶದಲ್ಲಿ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ