Publish Date: Thu, 25 May 2017 (16:12 IST)
Updated Date: Thu, 25 May 2017 (16:19 IST)
ಬೆಂಗಳೂರು:ಸ್ಥೂಲಕಾಯದವರು ಅಥವಾ ಸ್ವಲ್ಪ ದಪ್ಪಗಿರುವವರು ಫ್ಯಾಶನೇಬಲ್ ಡ್ರೆಸ್ ಹಾಕಕ್ಕಾಗಲ್ಲ ಎಂದು ಬೇಸರಮಾಡಿಕೊಳ್ಳಬೇಕಾಗಿಲ್ಲ. ಡ್ರೆಸ್ ಡಿಸೈನ್ ಗಳನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ದಪ್ಪ ದೇಹಾಕಾರಕ್ಕೂ ಹೊಂದಿಕೊಳ್ಳುವಂತಹ ಹಾಗೂ ಸುಂದರವಾಗಿ ಕಾಣುವಂತಹ ಉಡುಪುಗಳು ಸಿಗುತ್ತೆ. ಅಂಥಹ ಕೆಲ ಡಿಸೈನ್ ಡ್ರೆಸ್ ಗಳ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.
ಸ್ಮೋಕಿ ಡ್ರೆಸ್ ಅಥವಾ ಸ್ಮೋಕಿ ಡಿಸೈನ್ ಇರುವ ಫ್ರಾಕ್ , ಸ್ಟ್ರೈಪ್ಸ್ ಡ್ರೆಸ್, ರೆಟ್ರೊ ಪ್ರಿಂಟ್, ಮೊಟೊ ಎಂಬ್ರೈಡರಿ ಸ್ಮೋಕಿ ಡ್ರೆಸ್, ಲೈಟ್ ಕಲರ್ ಡ್ರೆಸ್ ಗಳನ್ನು ಹಾಕುವುದರಿಂದ ದಪ್ಪಗಿರುವವರೂ ಸುಂದರವಾಗಿ ಕಾಣುವಂತೆ ಮಾಡುತ್ತೆ. ಈ ಥರದ ಡಿಸೈನ್ ಗಳಿವ ಡ್ರೆಸ್ ದಪ್ಪಕಾಯದವರಿಗೆ ಹೆಚ್ಚು ಸೂಟೆಬಲ್ ಆಗಿ ಕಾಣುತ್ತದೆ.
ಈ ಡಿಸೈನಲ್ಲೊ ಸುಂದರವಾದ ಫ್ರಾಕ್ ಕೂಡ ಸಿಗುತ್ತೆ. ಅದಕ್ಕೆ ನಡುವನ್ನು ಬಿಗಿದ ಬೆಲ್ಟ್ ಗಳಿದ್ದರೆ ಇನ್ನಷ್ಟು ಆಕರ್ಷಣೀಯವಾಗಿ ಕಾಣುತ್ತೆ. ದೇಹದ ಆಕಾರ ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನ. ವಿದೇಶಗಳ ಐಡಿಯಲ್ ಬಾಡಿಸೈಜನ್ನೇ ನಾವೂ ಅನುಸರಿಸಬೇಕು ಅಂತೇನೂ ಇಲ್ಲ. ಇಂಥ ವಿಶೇಷವಾದ ಡಿಸೈನ್ ಇರುವ ಡ್ರೆಸ್ ಗಳನ್ನು ನಿವೂ ಕೂಡ ಟ್ರೈಮಾಡಿ. ಇದ್ರಲ್ಲಿ ದಪ್ಪ ಇದ್ರೂ ನಿಮ್ಮ ದೇಹದ ದಪ್ಪ ಹೈಲೈಟ್ ಆಗಲ್ಲ. ದೇಹಕ್ಕೆ ತೀರಾ ಬಿಗಿಯಾಗಿ ನಿಲ್ಲದ ಕಾರಣ ಕೆಟ್ಟದಾಗಿಯೂ ಕಾಣಲ್ಲ,