Publish Date: Wed, 31 May 2017 (09:23 IST)
Updated Date: Wed, 31 May 2017 (09:25 IST)
ಬೆಂಗಳೂರು: ಡಾರ್ಕ್ ಸರ್ಕಲ್ ಅಥವಾ ಕಪ್ಪು ವರ್ತುಲ ಸಮಸ್ಯೆ ಹದಿಹರೆಯದವರಿಗೆ ಬಿಡಲಾರದ ತಲೆನೋವು ತಂದಿಡುತ್ತದೆ. ಸೌಂದರ್ಯಕ್ಕೆ ಒಂದು ಕಪ್ಪು ಚುಕ್ಕೆ ಅಡ್ಡಿ ಬಂದರೆ ಅದನ್ನು ನಿವಾರಿಸುವುದು ಹೇಗೆ?
ಸಿಂಪಲ್ ಕಣ್ರೀ.. ನಿಮ್ಮ ಅಡುಗೆ ಮನೆಯಲ್ಲಿ ಆಲೂಗಡ್ಡೆ ಮತ್ತು ಸೌತೇಕಾಯಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇಷ್ಟೇ ಸಾಕು. ಕಣ್ಣಿನ ಸುತ್ತ, ಕಂಕುಳಿನಲ್ಲಿ ಉಂಟಾಗುವ ಡಾರ್ಕ್ ಸರ್ಕಲ್ ಹೋಗಲಾಡಿಸಲು.
ಅದಕ್ಕೆ ಮಾಡಬೇಕಾದ್ದು ಇಷ್ಟೇ. ಆಲೂಗಡ್ಡೆ ಮತ್ತು ಸೌತೇಕಾಯಿ ರಸವನ್ನು ಮಿಕ್ಸ್ ಮಾಡಿಕೊಂಡು ಡಾರ್ಕ್ ಸರ್ಕಲ್ ಇರುವ ಕಡೆಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಇದನ್ನು ತೊಳೆದುಕೊಳ್ಳಿ. ನಿಯಮಿತವಾಗಿ ಹೀಗೇ ಮಾಡುತ್ತಿದ್ದರೆ, ಖಂಡಿತವಾಗಿ ಉತ್ತಮ ಫಲಿತಾಂಶ ದೊರಕುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ