Select Your Language

Notifications

webdunia
webdunia
webdunia
webdunia

ಮುಖದ ಚರ್ಮ ರಂಧ್ರಗಳನ್ನು ತುಂಬಾ ಸುಲಭ ಹಾಗೂ ಪರಿಣಾಮಕಾರಿಯಾಗಿ ಶುದ್ಧೀಕರಿಸಲು ಇಲ್ಲಿದೆ ವಿಧಾನ

ಮುಖದ ಚರ್ಮ ರಂಧ್ರಗಳನ್ನು ತುಂಬಾ ಸುಲಭ ಹಾಗೂ ಪರಿಣಾಮಕಾರಿಯಾಗಿ ಶುದ್ಧೀಕರಿಸಲು ಇಲ್ಲಿದೆ ವಿಧಾನ
ಬೆಂಗಳೂರು , ಶನಿವಾರ, 14 ಏಪ್ರಿಲ್ 2018 (08:30 IST)
ಬೆಂಗಳೂರು : ಹೆಚ್ಚಿನವರ ಮುಖದಲ್ಲಿನ ಚರ್ಮದಲ್ಲಿ ರಂಧ್ರಗಳು ಕಾಣಸಿಗುತ್ತವೆ. ಚರ್ಮದಲ್ಲಿನ ರಂಧ್ರಗಳಲ್ಲಿ ಸತ್ತ ಚರ್ಮದ ಕೋಶ, ಧೂಳು ಮತ್ತು ಕಲ್ಮಶದಿಂದ ತುಂಬಿದಾಗ ಮೊಡವೆ, ಬೊಕ್ಕೆ, ನಿಸ್ತೇಜ ಚರ್ಮ ಮತ್ತು ಇತರ ಹಲವಾರು ಸಮಸ್ಯೆಗಳು ಕಾಣೆಸುವುದು. ಇದರಿಂದ ಚರ್ಮದ ರಂಧ್ರಗಳನ್ನು ಶುದ್ಧೀಕರಿಸುವುದು ಅತೀ ಅಗತ್ಯ. ಚರ್ಮದ ರಂಧ್ರಗಳನ್ನು ತುಂಬಾ ಸುಲಭ ಹಾಗೂ ಪರಿಣಾಮಕಾರಿಯಾಗಿ ತೆರೆಯಲು ಕೆಲವೊಂದು ವಿಧಾನಗಳು ಇಲ್ಲಿವೆ.


*ಮುಖಕ್ಕೆ ಹಬೆಯಾಡಿಸುವುದು : ಮುಖದ ಚರ್ಮದ ರಂಧ್ರಗಳನ್ನು ತೆರೆಯಲು ಇದು ಒಳ್ಳೆಯ ವಿಧಾನ. ಮುಖಕ್ಕೆ ಹಬೆಯಾಡಿಸುವ ಮೂಲಕ ರಂಧ್ರದಲ್ಲಿ ಜಮೆಯಾಗಿರುವ ಕಲ್ಮಶ ಹೊರಹಾಕಬಹುದು. ಇದರಿಂದ ಶುದ್ಧ ಮತ್ತು ಬಿಳಿ ಚರ್ಮವು ನಿಮ್ಮದಾಗುವುದು. ವಾರದಲ್ಲಿ ಎರಡು ಸಲ ಮುಖಕ್ಕೆ ಹಬೆಯಾಡಿಸಿದರೆ ಆಗ ಒಳ್ಳೆಯ ಫಲಿತಾಂಶ ಪಡೆಯಬಹುದು. ಇದು ರಂಧ್ರಗಳನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ, ಕೆಟ್ಟದಾಗಿ ಕಾಣಿಸುವಂತಹ ಮೊಡವೆಗಳನ್ನು ದೂರವಿಡುವುದು.


*ಅಡುಗೆ ಸೋಡಾದ ಪೇಸ್ಟ್ : ಚರ್ಮದ ರಂಧ್ರಗಳನ್ನು ಶುದ್ಧೀಕರಿಸಲು ಇದು ತುಂಬಾ ಪರಿಣಾಮಕಾರಿಯಾಗಿದೆ. ಇದು ರಂಧ್ರಗಳ ಒಳಗಡೆ ಸಾಗಿ ಅಲ್ಲಿರುವ ಕಲ್ಮಶವನ್ನು ಹೊರಹಾಕುವುದು. ಒಂದು ಚಮಚ ಅಡುಗೆ ಸೋಡಾವನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿ.ಇದನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ ಮತ್ತು 5-10 ನಿಮಿಷ ಕಾಲ ಹಾಗೆ ಇರಲಿ.ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಕಡಿಮೆಗೊಳಿಸುವಲ್ಲಿ ಸಹಕಾರಿ ಈ ಸೋರೆಕಾಯಿ