Select Your Language

Notifications

webdunia
webdunia
webdunia
webdunia

ಕೂದಲು ಉದುರಲು ಕಾರಣಗಳೇನು ಗೊತ್ತೇ ?

ಕೂದಲು ಉದುರಲು ಕಾರಣಗಳೇನು ಗೊತ್ತೇ ?
, ಬುಧವಾರ, 7 ಮೇ 2014 (15:10 IST)
ನೀವು ಕೂದಲ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದರೆ ನಿಮ್ಮ ಕೂದಲು ಶಕ್ತಿಹೀನವಾಗಿದೆ ಮತ್ತು 
 
ಕೂದಲ ಅಂಚು ಟಿಸಿಲೊಡೆದಿದೆ ಎಂದು ಅರ್ಥ. ಆ ಸಮಯದಲ್ಲಿ ನೀವು ಮಾಡ ಬೇಕಾದ ಮೊದಲ 
 
ಕೆಲಸವೇನೆಂದರೆ ಮೊದಲು ನೀವು ಬಳಸುತ್ತಿರುವ ಶಾಂಪೂ ವನ್ನು ಬದಲಾಯಿಸಿ. ಮತ್ತು ಬೇರೆಯದನ್ನು 
 
ಬಳಸಿ. ಆ ಶಾಂಪೂ ವಿನಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಾಗಿರ ಬೇಕು ಮತ್ತು ಕೂದಲ ಆರೋಗ್ಯಕ್ಕೆ 
 
ಅಗತ್ಯವಾದ ಪೋಷಕ ತತ್ವಗಳನ್ನು ಹೊಂದಿರ ಬೇಕು.
 
 
ಕೆಲವು ಬಾರಿ ನೀವು ಕೂದಲ ಸ್ಟ್ರೈಟ ನಿಂಗ್ ಗೆ ಬಳಸುವ ರಾಸಾಯನಿಕಗಳು ಅ, ಹೇರ್ ಸ್ಪ್ರೇಗಳು 
 
ಕೂದಲ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಕೇಶದಲ್ಲಿ ಇರುವ ಸಹಜ ತತ್ವವನ್ನು 
 
ದೂರ ಮಾಡುತ್ತದೆ. ಇದು ಸಹ ಕೂದಲು ಶಕ್ತಿಹೀನವಾಗಲು ಕಾರಣವಾಗುತ್ತದೆ. ನೀವು ಆ ಸಮಯದಲ್ಲಿ 
 
ಕಳೆದು ಕೊಂಡಿರುವ ಮಾಯಿಶ್ಚರೈಸರನ್ನು ಮತ್ತೆ ಬರುವಂತೆ ಮಾಡ ಬೇಕು. ಅದಕ್ಕಾಗಿ ಸೂಕ್ತ 
 
ಕ್ರಮಗಳನ್ನು ತೆಗೆದುಕೊಳ್ಳ ಬೇಕು. ಒಳ್ಳೆಯ ಕಂಡೀಶನರ್ ಬಳಕೆ ಮಾಡುವುದು ಅತ್ಯಗತ್ಯ. ನೀವು 
 
ವಿಟಮಿನ್ ಲೋಪದಿಂದ ಬಳಲುತ್ತಿದ್ದಾರೆ ಆ ಸಮಯದಲ್ಲಿ ಸಹ ಕೂದಲ ಮೇಲೆ ಕೆಟ್ಟ ಪರಿಣಾಮ 
 
ಉಂಟಾಗುತದೆ. ಅಂತಹ ಸಮಯದಲ್ಲಿ ತಪ್ಪಸ್ದೆ ನೀವು ತಜ್ಞ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆರ್ 
 
ಮಾಡಿಸಿ ಕೊಳ್ಳ ಬೇಕು. ನೀವು ಸದಾ ಕೇಶ ಶೈಲಿಯನ್ನು ಮಾಡಿಕೊಳ್ಳುವುದಕ್ಕೆ ಆದ್ಯತೆ 
 
ನೀಡುವವರಾಗಿದ್ದರೆ ಆಗ ಸಹ ಕೂದಲು ಉದುರುತ್ತದೆ. 

 
ಆದ್ದರಿಂದ ಅಂತಹ ಅಭ್ಯಾಸವನ್ನು ಪದೇಪದೇ ಮಾಡದೆ ಇರುವುದು ಕೂದಲ ಆರೋಗ್ಯದ ದೃಷ್ಟಿಯಿಂದ 
 
ಒಳ್ಳೆಯದು . 

Share this Story:

Follow Webdunia kannada