Select Your Language

Notifications

webdunia
webdunia
webdunia
webdunia

ಆಕರ್ಷಕವಾದ ಕಣ್ಣುಗಳಿಗಾಗಿ ಈ ಐ ಮೇಕಪ್ ಟ್ರೈ ಮಾಡಿ

ಆಕರ್ಷಕವಾದ ಕಣ್ಣುಗಳಿಗಾಗಿ ಈ ಐ ಮೇಕಪ್ ಟ್ರೈ ಮಾಡಿ
ಬೆಂಗಳೂರು , ಸೋಮವಾರ, 10 ಜುಲೈ 2017 (15:31 IST)
ಬೆಂಗಳೂರು:ಆಕರ್ಷಕವಾಗಿ ಕಾಣಲು, ಮುಖದ ಅಂದವನ್ನು  ಇಮ್ಮಡಿಗೊಳಿಸಲು ಯುವತಿಯರು ಕಣ್ಣಿನ ಸೌಂದರ್ಯದ ಬಗ್ಗೆ, ಅದರ ಮೇಕಪ್ ಬಗ್ಗೆ ತುಂಬಾನೆ ತಲೆ ಕೆಡಿಸಿಕೊಳ್ಳುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮೇಕಪ್ ಅಂದಾಕ್ಷಣ ಐ ಮೇಕಪ್ ಬಗ್ಗೆನೇ ಹೆಚ್ಚಿನ ಚರ್ಚೆಗಳು ನಡೆಯುತ್ತಿದೆ. ಕಣ್ಣಿಗೆ ಎಷ್ಟು ಅಲಂಕಾರಗಳನ್ನು ಮಾಡಿದರೂ ಇನ್ನೂ ಏನೋ ಕಮ್ಮಿ ಅನ್ನೋ ಭಾವನೆ. ನಿಮ್ಮ ಕಣ್ಣುಗಳು ಆಕರ್ಷಕವಾಗಿ ಕಾಣಲು ಯಾವೆಲ್ಲ ರೀತಿಯ ಮೇಕಪ್ ಮಾಡಬಹುದು, ಹೊಸ ಬಗೆಯ ಐ ಮೇಕಪ್ ಟ್ರೆಂಡ್ ಯಾವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
 
ಸ್ಮೋಕಿ ಐ : ಸ್ಮೋಕಿ ಐ ಮೇಕಪ್ ಇದು ಯಾವತ್ತಿದ್ದರೂ ಟ್ರೆಂಡಿ ಮೇಕಪ್. ಎಲ್ಲರಿಗೂ ಇಷ್ಟವಾಗುವ ಹಾಟ್ ಫೇವರೆಟ್. ಇದು ಒಂದು ಕಪ್ಪು  ಅಥವಾ ಕಂದು ಬಣ್ಣಕ್ಕೆ ಹೆಚ್ಚು ಪ್ರಾಶ್ಯಸ್ತ ನೀಡಿ. ಸ್ಮೋಕಿ ಐ ಮೇಕಪ್‌ ನಲ್ಲಿ ನೀಲಿ ಬಣ್ಣ ಕೂಡ ಆಕರ್ಷಕವಾಗಿ ಕಾಣುತ್ತೆ. ಇನ್ನು ಲೈಟ್ ಪಿಂಕ್, ಬಿಚ್, ಗೋಲ್ಡ್, ಸಿಲ್ವರ್ ಜತೆ ಕೂಡ ಕಾಂಬಿನೇಷನ್ ಸಖತ್ ಲುಕ್ ನೀಡುತ್ತದೆ.
 
webdunia
ಗೋಲ್ಡ್ ಐ ಲ್ಯಾಶ್ : ಬಂಗಾರ ಬಣ್ಣದ ಐ ಶ್ಯಾಡೋ ನಿಮ್ಮನ್ನು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಅದ್ಧೂರಿತನವನ್ನು ಹೆಚ್ಚಿಸುವುದರ ಜತೆ ಸಾಂಪ್ರದಾಯಿಕ ಉಡುಪುಗಳ ಮೇಲೂ ನಿಮ್ಮ ಸೌಂದರ್ಯ ಹೆಚ್ಚಿಸುತ್ತದೆ. ಸಾಫ್ಟ್ ರೋಸಿ ಸ್ಮೋಕಿ ಐ ಮೇಕಪ್ ಸಾಮಾನ್ಯವಾಗಿ ಎಲ್ಲರಿಗೂ ಸಖತ್ ಸೂಟ್ ಆಗುತ್ತೆ. ಬಂಗಾರದ ಬಣ್ಣದ ಜತೆ ಲೈಟ್ ಆಗಿ ಇತರ ಬಣ್ಣಗಳನ್ನು ಸ್ಮೋಕಿಯಾಗಿ ಬಳಸಬಹುದು. 
 
ಡಲ್ಟಿ : ಎರಡು ರೀತಿಯ ಬಣ್ಣಗಳನ್ನು ಬಳಸುವ ಐ ಮೇಕಪ್ ನ್ನು ಡಲ್ಟಿ ಐ ಮೇಕಪ್ ಎನಬಹುದು. ಇದರಲ್ಲಿ ಒಂದು ಗಾಢ, ಒಂದು ತಿಳಿ ಬಣ್ಣ ಬಳಸಿದರೆ ಹೆಚ್ಚು ಉತ್ತಮ. ನಿಮ್ಮ ಬಟ್ಟೆಗೆ ಮ್ಯಾಚಿಂಗ್ ಆಗುವಂತೆಯೂ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
 
webdunia
ಮಲ್ಟಿ ಹ್ಯೂಡ್ : ಇನ್ನು ಮಲ್ಟಿಕಲರ್ ಬಣಗಳನ್ನು ಐ ಮೇಕಪ್ ನಲ್ಲಿ ಬಳಸುವುದರಿಂದ ರಾತ್ರಿಯ ಪಾರ್ಟಿಗೆ ಹೆಚ್ಚು ಲುಕ್ ಎನಿಸುತ್ತದೆ. ಈ ಟ್ರೆಂಡ್ ಬೇರೆಯವರ ಗಮನ ನಿಮ್ಮತ್ತ ಸೆಳೆಯುತ್ತದೆ. ಈ ಕೆಲ ಐ ಮೆಕಪ್ ಟಿಪ್ಸ್ ಗಳನ್ನು ನೀವೂ ಒಮ್ಮೆ ಟ್ರೈಮಾಡಿ ನೋಡಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಬೇಳೆ ಕಾಳುಗಳು ಬೇಯಿಸಿದಾಗ ಗ್ಯಾಸ್ಟ್ರಿಕ್ ಆಗದಂತೆ ತಡೆಯಲು ಏನು ಮಾಡಬೇಕು ಗೊತ್ತಾ?