Publish Date: Sat, 10 Jun 2017 (09:15 IST)
Updated Date: Sat, 10 Jun 2017 (09:17 IST)
ಬೆಂಗಳೂರು: ಹೇರ್ ರಿಮೂವರ್ ಕ್ರೀಂ ಎಂದು ನೂರಾರು ರೂಪಾಯಿ ಖರ್ಚು ಮಾಡುವ ಬದಲು ಮನೆಯಲ್ಲೇ ಸುಲಭವಾಗಿ ಕಡಿಮೆ ವೆಚ್ಚದಲ್ಲಿ ಮಾಡಬಹುದು. ಅದು ಹೇಗೆ? ನೋಡೋಣ.
ಬೇಕಾಗುವ ಸಾಮಗ್ರಿಗಳು
ಸಕ್ಕರೆ 1 ಕಪ್
ನೀರು ¼ ಕಪ್
ನಿಂಬೆ ಹಣ್ಣಿನ ರಸ
ಮಾಡೋದು ಹೀಗೆ
ಒಂದು ಪಾತ್ರೆಯಲ್ಲಿ ಸಕ್ಕರೆ, ನೀರು ಹಾಗೂ ನಿಂಬೆ ಹಣ್ಣಿನ ರಸ ಬೆರೆಸಿ ಒಲೆಯ ಮೇಲೆ ಹದ ಉರಿಯಲ್ಲಿ ಇಡಿ. ಇದನ್ನು ಗೋಲ್ಡನ್ ಬಣ್ಣ ಬರುವವರೆಗೂ ತಿರುವುತ್ತಿರಿ. ನಂತರ ಒಂದು ಗ್ಲಾಸ್ ಜಾರ್ ಗೆ ಇದನ್ನು ಹಾಕಿ 10 ನಿಮಿಷದ ನಂತರ ಹದ ಬಿಸಿಯಾದಾಗ ನಿಮ್ಮ ಕೈಗಳಿಗೆ ಹಚ್ಚಿಕೊಳ್ಳಿ. ವ್ಯಾಕ್ಸ್ ಸ್ಟ್ರಿಪ್ ಬಳಸಿ ಕೂದಲು ತೆಗೆಯಿರಿ. ಇದು ಸುರಕ್ಷಿತ ಮತ್ತು ಸರಳ ವಿಧಾನವಾಗಿದೆ.