Select Your Language

Notifications

webdunia
webdunia
webdunia
Tuesday, 4 March 2025
webdunia

ಬಾಹುಬಲಿಯಿಂದ ಮತ್ತೆ ಬಂತು ಬಾಜುಬಂಧ್ ಕ್ರೇಜ್

ಬಾಹುಬಲಿಯಿಂದ ಮತ್ತೆ ಬಂತು ಬಾಜುಬಂಧ್ ಕ್ರೇಜ್
ಬೆಂಗಳೂರು , ಶುಕ್ರವಾರ, 30 ಜೂನ್ 2017 (12:20 IST)
ಬೆಂಗಳೂರು:ಈ ಸಿನಿಮಾಗಳಿಗೂ ಹಾಗೂ ಜನರ ಫ್ಯಾಶನ್ ಗಳಿಗೂ ನಂಟು ಹೊಸತಲ್ಲ. ಸಿನಿಮಾ ನೋಡಿ ಜನ ಹೊಸ ಹೊಸ ಫ್ಯಾಶನ್ ಗಳನ್ನು ಅನುಸರಿಸುತ್ತಲೇ ಇರುತ್ತಾರೆ. ಈಗ ಈ ವಿಷಯ ಯಾಕೆ ಅಂದ್ರೆ ಬಾಹುಬಲಿ ಚಿತ್ರ ತೆರೆಕಂಡು ಸಿನಿಲೋಕದಲ್ಲಿ ಇತಿಹಾಸವನ್ನೇ ಸೃಷ್ಟಿ ಮಾಡಿದ್ದು ಗೊತ್ತಿದೆ. ಅದೇ ಬಾಹುಬಲಿ ಚಿತ್ರದ ಆಭರಣ, ಸೀರೆ ಬಾಜುಬಂಧಿಗಳು ಮಹಿಳೆಯರಲ್ಲಿ ಪ್ಯಾಷನ್ ಕ್ರೇಜ್ ನ್ನು ಹೆಚ್ಚಿಸಿರುವುದು ವಿಶೇಷ.
 
ಮಹಿಳೆಯರು ತಮ್ಮ ತೋಳಿಗೆ ಧರಿಸುವ ಈ ಬಾಜುಬಂಧ್ ಈಗ ಗೃಹಿಣಿಯರ ಅಚ್ಚುಮೆಚ್ಚು. ಅಲ್ಲದೇ ಬಾಹುಬಲಿ ಚಿತ್ರದಲ್ಲಿನ ಸೀರೆ ಡಿಸೈನ್ ಕೂಡ ಈಗ ಮಹಿಳೆಯಯರ ಮನಸೆಳೆದಿರುವುದು ವಿಶೇಷ. ಮಹಿಳೆಯರು ಬಾಜುಬಂಧ್ ಧರಿಸುವ ಸ್ಟೈಲ್ ಹೊಸದೇನಲ್ಲಬಿಡಿ. ಆದರೆ ಫ್ಯಾಷನ್ ಜಗತ್ತಿನಲ್ಲಿ ಹಳೆಯ ಸ್ಟೈಲ್ ಗಳೆ ಮತ್ತೆ ಹೊಸ ರೂಪದಲ್ಲಿ ಹೊಸ ಡಿಸೈನ್ ಗಳಲ್ಲಿ ವಿನ್ಯಾಸವಾಗುತ್ತಾ ಹೋಗುತ್ತೆ. 
 
ಅಂದಹಾಗೆ ಬಾಹುಬಲಿಯಲ್ಲಿ ಅನುಷ್ಕಾ ಶೆಟ್ಟಿ ಹಾಗೂ ರಮ್ಯಕೃಷ್ಣ ಧರಿಸಿರುವ ಬಾಜುಬಂಧ್ ಮಹಿಳೆಯರಲ್ಲಿ ಹೊಸ ಸ್ಟೈಲ್ ನ್ನು ಹುಟ್ಟುಹಾಕಿದೆ.  ಆಂಟಿಕ್ ವಿನ್ಯಾಸದ ಬಾಜುಬಂಧ್ ಟೆಡಿಷನ್ಲ್ ಉಡುಪಿಗೆ ಸಖತ್ ಸೂಟ್ ಆಗುವುದರಿಂದ ನೋಡಲು ಚೆನ್ನಾಗಿ, ಆಕರ್ಷಣೀಯವಾಗಿ ಕಾಣುತ್ತೆ. ಒಟ್ಟಿನಲ್ಲಿ ಬಾಹುಬಲಿ ಚಿತ್ರ ಮಹಿಳೆಯರಲ್ಲಿ ಬಾಜುಬಂಧ್ ಕ್ರೇಜ್ ನ್ನು ಹುಟ್ಟುಹಾಕಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಲಬದ್ಧತೆಯೇ? ಹಾಗಾದರೆ ಈ ಆಹಾರ ಸೇವಿಸಲೇಬೇಡಿ!