Publish Date: Mon, 22 May 2017 (09:15 IST)
Updated Date: Mon, 22 May 2017 (09:18 IST)
ಬೆಂಗಳೂರು: ಹೊಳೆಯುವ ಸುಂದರ ಕೂದಲಿನ ಕನಸು ಯಾರಿಗಿಲ್ಲ. ಆದರೆ ಇಂದಿನ ವಾತಾವರಣ, ನೀರು, ಒತ್ತಡದ ಜಂಜಾಟದಲ್ಲಿ ಅದು ಸುಲಭವಲ್ಲ. ಅದಕ್ಕಾಗಿ ಮನೆಯಲ್ಲೇ ಮದ್ದು ಮಾಡಬಹುದು.
ಕೂದಲಿನ ಆರೈಕೆಗೆ ಮೊಟ್ಟೆ, ನಿಂಬೆ ಹಣ್ಣು, ಈರುಳ್ಳಿ ಬಳಸುವುದನ್ನು ಸಾಕಷ್ಟು ಮಾಡಿದ್ದೇವೆ. ಇದರ ಜತೆಗೆ ಇನ್ನೊಂದನ್ನು ಸೇರಿಸಿಕೊಳ್ಳಬಹುದು. ಅದುವೇ ಜೇನು ತುಪ್ಪ. ಹೌದು. ಜೇನು ತುಪ್ಪ ಬಳಸಿ ಕೂದಲಿಗೆ ಹೊಸ ಮೆರುಗು ನೀಡಬಹುದು.
ಹಚ್ಚುವುದು ಹೇಗೆ?
2 ಟೇಬಲ್ ಸ್ಪೂನ್ ಮೊಸರು ಮತ್ತು ಅಷ್ಟೇ ಪ್ರಮಾಣದ ಜೇನುತುಪ್ಪವನ್ನು ಮಿಕ್ಸ್ ಮಾಡಿಕೊಳ್ಳಿ. ಇದನ್ನು ನಿಮ್ಮ ಕೂದಲುಗಳಿಗೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿ. ತಲೆಗೆ ಬಟ್ಟೆ ಕಟ್ಟಿಕೊಂಡು ಅರ್ಧಗಂಟೆ ಹಾಗೇ ಬಿಡಿ. ನಂತರ ಕೂದಲುಗಳನ್ನು ಚೆನ್ನಾಗಿ ತೊಳೆದುಕೊಂಡು ಒಣಗಿಸಿ ನೋಡಿ. ನಿಯಮಿತವಾಗಿ ಹೀಗೇ ಮಾಡುತ್ತಿದ್ದರೆ, ಕೂದಲುಗಳಿಗೆ ಹೊಸ ಹೊಳಪು ಖಚಿತ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ