Select Your Language

Notifications

webdunia
webdunia
webdunia
webdunia

ಯೋಗ ಅಂದ್ರೆ ಈ ನಟಿಯರಿಗೆ ಎಷ್ಟು ಇಷ್ಟ ನೋಡಿ.......

ಯೋಗ ಅಂದ್ರೆ ಈ ನಟಿಯರಿಗೆ ಎಷ್ಟು ಇಷ್ಟ ನೋಡಿ.......
, ಮಂಗಳವಾರ, 19 ಜೂನ್ 2018 (14:09 IST)
ಸ್ಯಾಂಡಲ್‌ವುಡ್, ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗದ ನಟ-ನಟಿಯರ ಫಿಟ್ನೆಸ್ ಗುಟ್ಟು "ಯೋಗ". ಫಿಟ್‌ನೆಸ್‌ಗಾಗಿ ಯೋಗದ ಮೊರೆ ಹೋಗಿರುವ ಚಿತ್ರತಾರೆಯ ಪಟ್ಟಿಯೇ ಇದೆ. ಇವರಲ್ಲಿ ಬಾಲಿವುಡ್ ತಾರೆಯರು ಹೆಚ್ಚು ಮುಂಚೂಣಿಯಲ್ಲಿದ್ದಾರೆ. 

* ಶಿಲ್ಪಾ ಶೆಟ್ಟಿ: ಶಿಲ್ಪಾ ಶೆಟ್ಟಿ ಭಾರತದ ಯೋಗ ಐಕಾನ್ ಅಗಿದ್ದಾರೆ. ಬಳ್ಳಿಯಂತೆ ಬಳುಕುವ, ಅಂದವಾದ ದೇಹವನ್ನು ಪಡೆಯಲು ಯೋಗ ಸಹಕಾರಿಯಾಯಿತು ಎನ್ನುತ್ತಾರೆ. 
 
* ಬಿಪಾಶಾ ಬಸು: ನಮ್ಮ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಯೋಗ ಕಾರ್ಯಾಗಾರವನ್ನು ಇವರು ಮಾಡಿದ್ದಾರೆ. ತಮ್ಮ ಪತಿ ಕರಣ್‌ ಸಿಂಗ್ ಗ್ರೋವರ್ ಅವರಿಗೂ ಕೂಡಾ ಬಿಪಾಶಾ ಯೋಗ ಹೇಳಿಕೊಡುತ್ತಾರಂತೆ.
 
* ಲಾರಾ ದತ್: ಮಾಜಿ ವಿಶ್ವಸುಂದರಿಯಾದ ಬಾಲಿವುಡ್‌ನ ಮತ್ತೋರ್ವ ಸುಂದರಿ ಲಾರಾ ದತ್ ಕಳೆದ 12 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದಾರಂತೆ. ಗರ್ಭಿಣಿ ಹೆಂಗಸರು ಯೋಗ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎನ್ನುತ್ತಾರೆ ಲಾರಾ ದತ್.
 
* ಮಲೈಕಾ ಅರೋರಾ: ಮಲೈಕಾ ಅರೋರಾ ಅವರನ್ನು ನೋಡಿದ್ರೆ 15 ವರ್ಷದ ಮಗುವಿನ ತಾಯಿ ಎನ್ನುವಂತೆ ಕಾಣುವುದಿಲ್ಲ. ಅಷ್ಟರ ಮಟ್ಟಿಗೆ ಯೌವನ ಕಾಪಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಯೋಗ ಎನ್ನುತ್ತಾರೆ ಅವರು.
 
* ಕರೀನಾ ಕಪೂರ್: ಕರೀನಾ ಕಪೂರ್ ಅವರು ತಮ್ಮ ಮಗುವಿಗೆ ಜನ್ಮ ನೀಡಿದ ನಂತರ ದಪ್ಪಗಾಗಿದ್ದರು. ಈಗ ಯೋಗ ಮಾಡುವುದರ ಮೂಲಕ ಮತ್ತೆ ಸ್ಲಿಮ್ ಅಗ್ತಿದ್ದಾರಂತೆ. 
 
* ದೀಪಿಕಾ ಪಡುಕೋಣೆ: ದೀಪಿಕಾ ಪಡುಕೋಣೆ ಅವರಿಗೆ ಯೋಗ ಜೀವನದ ಭಾಗವಾಗಿದೆಯಂತೆ. ದೀಪಿಕಾ ಅವರು ಖಿನ್ನತೆಗೆ ಒಳಗಾಗಿದ್ದಾಗ ಯೋಗದ ಮೂಲಕವೇ ಚೇತರಿಸಿಕೊಂಡರಂತೆ.
 
* ಸೋನಮ್ ಕಪೂರ್:  ಸೋನಮ್ ಕಪೂರ್ ಮೊದಲು ತುಂಬಾ ದಪ್ಪಗಿದ್ದರಂತೆ. ಸಿನಿಮಾ ಪ್ರವೇಶ ಮಾಡಬೇಕೆಂಬ ಆಸೆಯಿಂದ ಯೋಗ ಮಾಡಿ ಸ್ಲಿಮ್ ಆದ್ರಂತೆ.
 
* ಆಲಿಯಾ ಭಟ್: ಬಾಲಿವುಡ್‌ನ ಯುವತಾರೆ ಆಲಿಯಾ ಭಟ್ ಇತ್ತೀಚೆಗಷ್ಟೇ ತಾವು ಯೋಗ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದರು. ಹೀಗಾಗಿ, ಆಲಿಯಾ ಭಟ್ ಯೋಗಾಭ್ಯಾಸದಲ್ಲಿ ಪರಿಣತಿ ಹೊಂದಿದ್ದಾರೆ ಎನ್ನುವುದು ಸಾಬೀತಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾರೆಟ್‌ನಲ್ಲಿದೆ ಹಲವಾರು ಆರೋಗ್ಯಕರ ಲಾಭಗಳು