Webdunia - Bharat's app for daily news and videos

Install App

ವೃದ್ಧಾಪ್ಯ ರೋಗಗಳಿಗೆ 'ಅಣಬೆ'- ಚೀನಿಚಿಕಿತ್ಸೆ

ಇಳಯರಾಜ
vishnu
ಅಣಬೆಯನ್ನು ಆಹಾರವಾಗಿ ಬಳಸುವಂತೆ ಆರೋಗ್ಯರಂಗದಲ್ಲಿ ಥೆರಫಿ ಮಾಧ್ಯಮವಾಗಿ ಬಳಸುವುದೂ ಇದೆ. ಪ್ರೋಟೀನ್‌ಯುಕ್ತ ಆಹಾರವಾಗಿ ಕಳೆದ ಎರಡೂವರೆ ದಶಕದಲ್ಲಿ ಬಳಸುತ್ತಿದ್ದ ಅಣಬೆಗೆ ಇಂದು ವಿವಿಧ ಇತರ ಬೇಡಿಕಗಳೂ ಇವೆ.

ವೃದ್ದಾಪ್ಯದಲ್ಲಿ ಬರುವ ವಿವಿಧ ರೋಗಗಳಿಗೆ ಅಣಬೆಯನ್ನು ಬಳಸಿ ಸಮರ್ಪಕ ಪರಿಹಾರ ಕಾಣಬಹುದು ಎಂಬುದನ್ನು ಚೀನಿ ವೈದ್ಯ ತಜ್ಞರು ಕಂಡು ಕೊಂಡಿದ್ದಾರೆ.ಚೀನೀಯರು ಗ್ಯಾನೊ ಎಂಬ ಅಣಬೆ ಪ್ರಬೇಧವನ್ನು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಪಾರವಾಗಿ ಬಳಸುತ್ತಾರೆ.

ರೋಗ ರುಜಿನ ನಿವಾರಣೆಗೆ, ದೇಹದಾರ್ಢ್ಯತೆ ಹೆಚ್ಚಿಸಲು, ರೋಗನಿರೋಧಕ ಶಕ್ತಿ ನಿವಾರಿಸಲು, ಆಯುಷ್ಯವೃದ್ಧಿಗೆ ವಿವಿಧ ಅಣಬೆ ಪ್ರಬೇಧಗಳನ್ನು ಮಾಧ್ಯಮವಾಗಿ ಬಳಸಿ ಔಷಧ ನೀಡುತ್ತಾರೆ. 38 ಸಾವಿರ ಅಣಬೆ ಪ್ರಬೇಧಗಳು ವಿಶ್ವದಲ್ಲಿವೆ. ಇವುಗಳಲ್ಲಿ ಗ್ಯಾನೋಡರ್ಮಾ ಎಂದು ಇಂಗ್ಲಿಷ್‌ ಹೆಸರಿರುವ ಅಣಬೆಯನ್ನು ಚೀನೀಯರು ಲಿಂಗ್‌ಝೀ ಎಂದು ಕರೆಯುತ್ತಾರೆ.

ವೃದ್ಧರಲ್ಲಿ ಸಾಮಾನ್ಯವಾಗಿ ಕಾಣಿಸುವ ವಿವಿಧ ರೋಗಗಳನ್ನು ಸಮರ್ಪಕವಾಗಿ ನಿವಾರಿಸಲು ಗ್ಯಾನೋ ಡರ್ಮಿ ಅಣಬೆಯ ಔಷಧಿಯಿಂದ ಸಾಧ್ಯ ಎಂಬುದು ಮನದಟ್ಟಾಗಿದೆ. ಅಂಗಾಂಗಳ ನಡುಕವಿರುವ ಪಾರ್ಕಿನ್ಸೋನಿಸಮ್‌ ವ್ಯಾಧಿ ನಿಯಂತ್ರಣ, ನಡುಕ ನಿವಾರಿಸಲು ಸಾಧ್ಯ.

ಪಾರ್ಕಿನ್‌ಸನ್‌ ವ್ಯಾಧಿಯೊಂದಿಗೆ ಕಾಣಿಸುವ ಮನಃಕ್ಲೇಷ, ಖಿನ್ನತೆ ಇತ್ಯಾದಿಗಳಿಂದ ಈ ಅಣಬೆ ಚಿಕಿತ್ಸೆಯಿಂದ ನಿವಾರಣೆ ಹೊಂದಲಾಗಿದೆ. ಆಸ್ಟಿಯೊ ಆರ್ಥ್ರೈಟಿಸ್‌ ಎಂಬ ಸಂಧಿನೋವು ನಿಯಂತ್ರಣಕೊಳ್ಳುತ್ತದೆ. ಜರ್ಜರಿತ ದೇಹದಲ್ಲಿ ಬಲ ತುಂಬುವುದು. ಅರ್ಧಾಯುಷ್ಯದ ಬಳಿಕ ಕಾಣಿಸುವ ಎಲುಬು ಸವೆತದ ಕಾಲು ನೋವು ತಹಬಂದಿಗೆ ಬರುತ್ತದೆ.

ಕಿವಿಯಲ್ಲಿ ಗುಂಯ್‌ ಶಬ್ದ ನಿವಾರಣೆಗೂ ಇದರಿಂದ ಚುಕಿತ್ಸೆ ಲಭ್ಯ. ಹಲವಾರು ರೋಗಗಳಿಗೆ ವೃದ್ಧಾಪ್ಯ ದೇಹ ಸಮಸ್ಯೆಗಳಿಗೆ ಗ್ಯಾನೋ ಅಣಬೆ ಔಷಧ ಚಿಕಿತ್ಸೆ ಫಲಪ್ರದವಾಗಿದೆ.

( ವಿಷ್ಣು ಭಾರದ್ವಾಜ್‌)

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ ಈ ಕೆಲಸ ಮಾಡಬೇಡಿ

ಅಂಗಡಿಯಿಂದ ತಂದ ತುಪ್ಪ ಅಸಲಿಯೋ, ನಕಲಿಯೋ ಎಂದು ಪತ್ತೆ ಹಚ್ಚಲು ಹೀಗೆ ಮಾಡಿ