Select Your Language

Notifications

webdunia
webdunia
webdunia
webdunia

ಮಹಿಳೆಯರಿಗೆ ಎಂತಹ ಪುರುಷರು ಇಷ್ಟವಾಗುತ್ತಾರೆ ಗೊತ್ತಾ ?

ಮಹಿಳೆಯರಿಗೆ ಎಂತಹ ಪುರುಷರು ಇಷ್ಟವಾಗುತ್ತಾರೆ ಗೊತ್ತಾ ?
, ಗುರುವಾರ, 12 ಡಿಸೆಂಬರ್ 2013 (18:16 IST)
PR
ಆಚಾರ್ಯ ವಾತ್ಸಾಯನ ರಚಿತ ಕಾಮಸೂತ್ರ ಪುಸ್ತಕದಲ್ಲಿ ಮಹಿಳೆಯರು ಎಂತಹ ಪುರುಷರನ್ನು ಇಷ್ಟಪಡುತ್ತಾರೆಂದು ದಾಖಲಿಸಲಾಗಿದೆ. ಪ್ರಾಚೀನ ಕಾಲದ ಸೂತ್ರಗಳು ಆಧುನಿಗೆ ಜಗತ್ತಿಗೆ ಇಷ್ಟವಾಗಬಹುದು. ಅಥವಾ ಇಷ್ಟವಾಗದಿರಬಹುದು. ಆದರೆ, ಹಿಂದಿನ ಜನರ ಲೈಂಗಿಕ ಜೀವನ ಯಾವ ರೀತಿಯಾಗಿತ್ತು ಎನ್ನುವ ಕುತೂಹಲ ಸದಾ ಕೆರಳಿಸುತ್ತದೆ. ಅಷ್ಟಕ್ಕು ಮಹಿಳೆಯರು ಎಂತಹ ಪುರುಷರನ್ನು ಇಷ್ಟಪಡುತ್ತಾರೆ ಎಂದು ತಿಳಿದುಕೊಳ್ಳೋಣ.

ಕಾಮಸೂತ್ರದಲ್ಲಿ ಪುರುಷರ ಕೆಲ ವಿಶೇಷತೆಗಳ ಬಗ್ಗೆ ಬರೆಯಲಾಗಿದೆ. ಇದರಿಂದಾಗಿ ಮಹಿಳೆಯರನ್ನು ಸುಲಭವಾಗಿ ಆಕರ್ಷಿಸುವಲ್ಲಿ ಪುರುಷರು ಯಶಸ್ವಿಯಾಗುತ್ತಾರೆ.

1. ಕಾಮಸೂತ್ರದ ಪ್ರಕಾರ , ಕಾಮಸೂತ್ರವನ್ನು ಪರಿಪೂರ್ಣ ಪ್ರಮಾಣದಲ್ಲಿ ಅರ್ಥಮಾಡಿಕೊಂಡ ಪುರುಷರು ಮಹಿಳೆಯರನ್ನು ಓಲೈಸುವಲ್ಲಿ ಯಶಸ್ವಿಯಾಗುತ್ತಾರೆ.

2. ಸಾಹಸಿ, ಶೂರ ವೀರ, ಪೂರ್ಣಯೌವನ ಮತ್ತು ಶಾರೀರಿಕವಾಗಿ ಸಧೃಡತೆ ಹೊಂದಿರುವ ಪುರುಷರು ಮಹಿಳೆಯರಿಗೆ ಇಷ್ಟವಾಗುತ್ತಾರೆ. ಆರೋಗ್ಯ ಪೂರ್ಣವಾಗಿರುವ ಪುರುಷರು ಸ್ವಾಭಾವಿಕವಾಗಿ ಎಲ್ಲಾ ಮಹಿಳೆಯರಿಗೆ ಇಷ್ಟವಾಗುತ್ತಾರೆ.

3. ಮನಸ್ಸಿನ ಭಾವನೆಗಳೊಂದಿಗೆ ಮತ್ತು ಮಹಿಳೆಯರಿಗಾಗಿ ಹೆಚ್ಚಿನ ಸಮಯ ಮೀಸಲಿಡುವ ಪುರುಷರು ಮಹಿಳೆಯರ ಹೃದಯ ಗೆಲ್ಲುವಲ್ಲಿ ಸಫಲರಾಗುತ್ತಾರೆ.

4. ಮದ್ಯಪಾನ ಮಾಡದಿರುವುದು ಒಳ್ಳೆಯ ಗುಣ. ಇದೊಂದರಿಂದಲೇ ಮಹಿಳೆಯರು ಪುರುಷರಿಂದ ದೂರವಾಗುವುದಿಲ್ಲ.

5. ಹೊರಗಡೆ ಕರೆದುಕೊಂಡು ಹೋಗಿ ಊಟ ತಿಂಡಿ ಕೊಡಿಸುವ ಪುರುಷರು ಮಹಿಳೆಯರಿಗೆ ಇಷ್ಟವಾಗುತ್ತಾರೆ.

6. ಯಾವುದೇ ರೀತಿಯ ಅನುಮಾನ ಪಡದೆ ಮತ್ತು ತಮ್ಮ ಕೆಲಸವನ್ನು ಆರಾಧಿಸುವ ಪುರುಷರನ್ನು ಮಹಿಳೆಯರು ಇಷ್ಟಪಡುತ್ತಾರೆ.

7. ಮಹಿಳೆಯರ ಜೊತೆಗೆ ಸಭ್ಯತೆಯಿಂದ ನಡೆದುಕೊಳ್ಳುವವರನ್ನು ಮಹಿಳೆಯರು ಇಷ್ಟಪಡುತ್ತಾರೆ.

8. ಮಹಿಳೆಯರು ಪುರುಷರನ್ನು ಶಾಶ್ವತವಾಗಿ ಪ್ರೀತಿಸುವ ಇಚ್ಚೆಯನ್ನು ಹೊಂದಿರುತ್ತಾಳೆ.

ಈ ತರಹದ ಗುಣಗಳು ಪುರುಷರಲ್ಲಿ ಇದ್ದರೆ, ಮಹಿಳೆಯರ ಹೃದಯದಲ್ಲಿ ಸ್ಥಾನವನ್ನು ಪಡೆಯಬಹುದು.

Share this Story:

Follow Webdunia kannada