Select Your Language

Notifications

webdunia
webdunia
webdunia
webdunia

ಬೊಕ್ಕ ತಲೆಯಿಂದ ಪಾರಾಗಲು ಕೂದಲು ಕಸಿ

ಬೊಕ್ಕ ತಲೆಯಿಂದ ಪಾರಾಗಲು ಕೂದಲು ಕಸಿ
ಬೆಂಗಳೂರು: , ಮಂಗಳವಾರ, 18 ಮಾರ್ಚ್ 2014 (14:09 IST)
PR
ಪ್ರಸಕ್ತ ದಿನಗಳಲ್ಲಿ ಕೂದಲು ಉದುರುವಿಕೆ ಸಾಮಾನ್ಯ. ಹಿಂದೊಂದು ಕಾಲದಲ್ಲಿ ವೃದ್ಧಾಪ್ಯ ಬಂದರೆ ಮಾತ್ರ ಕೂದಲು ಉದುರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ೨೦ನೇ ವಯಸ್ಸಿಗೇ ಕೂದಲು ಉದುರಲು ಆರಂಭವಾಗುತ್ತದೆ, ತಲೆ ಬಾಲ್ಡ್ ಆಗುತ್ತದೆ. ವಂಶ ಪಾರಂಪರ್ಯತೆ, ಜೀವನಶೈಲಿ ಅಥವಾ ಒತ್ತಡ ಇದಕ್ಕೆ ಕಾರಣವಾಗಿರಬಹುದು. ಈ ಸಮಸ್ಯೆ ಎದುರಿಸುವವರು ಇದಕ್ಕೆ ಶಾಶ್ವತ ಪರಿಹಾರವನ್ನು ಬಯಸುತ್ತಾರೆ. ಇದಕ್ಕಾಗಿ ಈಗ ಬೋಳು ತಲೆಯವರು ಕೂದಲು ಕಸಿ ಕಟ್ಟುವ ಅಥವಾ ಫೋಲಿಕ್ಯುಲರ್ ಯುನಿಟ್ ಎಕ್ಸ್‌ಟ್ರಾಕ್ಷನ್ ಮೂಲಕ ಈ ಸಮಸ್ಯೆ ನಿವಾರಿಸಿಕೊಳ್ಳಬಹುದು.

ಹೇರ್‌ಲೈನ್ ಇಂಟರ್‌ನ್ಯಾಷನಲ್ ರಿಸರ್ಚ್ ಆಂಡ್ ಟ್ರೀಟ್‌ಮೆಂಟ್ ಸೆಂಟರ್‌ನ ಡರ್ಮಟೋ ಸರ್ಜನ್ ಡಾ. ದಿನೇಶ್ ಜಿ. ಗೌಡ ಅವರು ಕೂದಲು ನಾಟಿಯ ಬಗ್ಗೆ ಇರುವ ಸಂದೇಹ, ಹೆದರಿಕೆಯನ್ನು ಈ ಸಂದರ್ಶನದಲ್ಲಿ ನಿವಾರಿಸುತ್ತಾರೆ.

ಕೂದಲು ಕಸಿಕಟ್ಟುವುದು ಅಥವಾ ಕೂದಲು ನಾಟಿ ಎಂದರೇನು?
ಬೋಳಾಗಿರುವ ತಲೆಯ ಭಾಗದಲ್ಲಿ ಕೂದಲು ಬೆಳೆಸುವುದನ್ನು ಕೂದಲು ನಾಟಿ ಎನ್ನುತ್ತಾರೆ. ಒಂದು ಸಾರಿ ಕೂದಲು ನಾಟಿ ಮಾಡಿದರೆ ಕೂದಲು ಶಾಶ್ವತವಾಗಿ ಉಳಿಯುತ್ತದೆ. ಸಾಮಾನ್ಯವಾಗಿ ತಲೆಯ ಹಿಂಭಾಗದ ಕೂದಲನ್ನು ಬಳಸಿ ಕೂದಲು ನಾಟಿ ಮಾಡುತ್ತಾರೆ ಅಥವಾ ಕಸಿ ಕಟ್ಟುತ್ತಾರೆ.

ಕೂದಲು ನಾಟಿ ಮಾಡಿಸಿಕೊಳ್ಳಲು ಸೂಕ್ತ ವ್ಯಕ್ತಿ ಯಾರು?
ತಲೆ ಕೂದಲು ಉದುರಲು ಆರಂಭವಾಗಿರುವ ಅಥವಾ ಈಗಾಗಲೇ ಬೋಳು ತಲೆ ಉಳ್ಳವರು ಕೂದಲು ಕಸಿ ಕಟ್ಟಿಸಿಕೊಳ್ಳಲು ಅರ್ಹರು.

ಕಸಿ ಮಾಡಿದ ಕೂದಲು ನೈಸರ್ಗಿಕವಾಗಿ ಕಾಣಿಸುತ್ತದೆಯೇ.?
ವೈಜ್ಞಾನಿಕವಾಗಿ ಸರಿಯಾಗಿ ಅಥವಾ ನುರಿತ ತಜ್ಞರಿಂದ ಮಾಡಿಸಿಕೊಂಡರೆ ಕೂದಲು ನಾಟಿ ಸ್ವಾಭಾವಿಕ ಕೂದಲಿಂತೆಯೇ ಕಾಣಿಸುತ್ತದೆ. ಹೇರ್ ಸ್ಟೈಲಿಸ್ಟ್‌ಗಳಿಗೂ ವ್ಯತ್ಯಾಸವನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಆದರೆ ಉತ್ತಮ ಫಲಿತಾಂಶಕ್ಕಾಗಿ ಸರಿಯಾದ ತಜ್ಞರು ಹಾಗೂ ಸರಿಯಾದ ಕ್ರಮವನ್ನೇ ಅನುಸರಿಸಬೇಕಾಗುತ್ತದೆ.

ಕೂದಲು ನಾಟಿ ಮಾಡಲು ಎಷ್ಟು ಸಮಯ ಬೇಕಾಗುತ್ತದೆ?
ಒಂದು ಸೆಷನ್ ೧೫೦೦ ರಿಂದ ೩೦೦೦ ಗ್ರಾಫ್ಟ್‌ಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಈ ಸರ್ಜರಿಗೆ ಒಂದು ಇಡೀ ದಿನ ಬೇಕಾಗುತ್ತದೆ ಹಾಗೂ ಔಟ್ ಪೇಷೆಂಟ್ ಆಗಿ ದಾಖಲಾಗಬೇಕಾಗುತ್ತದೆ.

ಕೂದಲು ಕಸಿ ಮಾಡುವ ವಿಧಾನಗಳಿಂದ ನೋವಾಗುವುದೇ..?
ಕೂದಲು ತೆಗೆಯುವ ಹಾಗೂ ಕಸಿ ಮಾಡಬೇಕಾಗಿರುವ ಜಾಗಗಳಿಗೆ ಲೋಕಲ್ ಅನಸ್ತೇಷಿಯಾ ನೀಡುತ್ತಾರೆ. ಇಡೀ ಪ್ರಕ್ರಿಯೆ ನಡೆಯಬೇಕಿದ್ದರೆ ಯಾವುದೇ ನೋವಾಗುವುದಿಲ್ಲ. ಅನಸ್ತೇಷಿಯಾ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಸಣ್ಣ ಮಟ್ಟಿನ ಅಸ್ವಸ್ಥತೆ ಅಥವಾ ಆಯಾಸ ಕಾಣಿಸಬಹುದು.

ಚಿಕಿತ್ಸೆ ಬಳಿಕ ರಿಕವರಿಗೆ ಎಷ್ಟು ಸಮಯ ಬೇಕಾಗುತ್ತದೆ?
ಇಂದು ಚಿಕಿತ್ಸೆಗೆ ಅತ್ಯಾಧುನಿಕ ವ್ಯವಸ್ಥೆ ಬಳಸುತ್ತಿರುವುದರಿಂದ ಅಲ್ಪ ಸಮಯ ಸಾಕಾಗುತ್ತದೆ. ಒಂದು ಅಥವಾ ಎರಡು ದಿನದಲ್ಲಿ ಸಂಪೂರ್ಣ ಗುಣಮುಖವಾಗುತ್ತದೆ. ನಿಶ್ಚೇಷ್ಟಿತಗೊಳಿಸಿದ್ದರ ಪರಿಣಾಮವನ್ನು ಚಿಕಿತ್ಸೆ ಪಡೆದ ಭಾಗದಲ್ಲಿ ಕೆಲ ದಿನಗಳ ಕಾಲ ಕಾಣಬಹುದು.

ಕೂದಲು ಕಸಿ ಮಾಡಿದರೆ ಸುಲಭವಾಗಿ ತಿಳಿಯುವುದೇ?
ಚಿಕಿತ್ಸೆ ಮುಗಿದ ತಕ್ಷಣ ನೋಡಿದಾಗ ಆ ಭಾಗವನ್ನು ಮುಚ್ಚಲು ಯಾವುದೇ ಕೂದಲು ಇರದಿದ್ದರೆ ಚಿಕಿತ್ಸೆ ನೀಡಿರುವುದು ಗೊತ್ತಾಗುತ್ತದೆ. ಆದರೆ ಒಂದು ವಾರದ ಬಳಿಕ ಚಿಕಿತ್ಸೆ ಪಡೆದ ವ್ಯಕ್ತಿಯು ಹ್ಯಾಟ್ ಅಥವಾ ಸ್ಕಾರ್ಫ್ ಇಲ್ಲದೆ ಹೋಗಬಹುದು.

ಕಸಿ ಮಾಡಿದ ಕೂದಲು ಬೆಳೆಯಲು ಎಷ್ಟು ಸಮಯ ಬೇಕಾಗಬಹುದು?
ಸಾಮಾನ್ಯವಾಗಿ ಕೂದಲು ಬೆಳೆಯಲು ೩ರಿಂದ ೫ ತಿಂಗಳು ಬೇಕಾಗಬಹುದು. ಆರಂಭದಲ್ಲಿ ತೆಳುವಾಗಿ ಬೆಳೆಯುವ ಕೂದಲು ಕ್ರಮೇಣ ಪೂರ್ಣ ಪ್ರಮಾಣದಲ್ಲಿ ಬೆಳೆಯುತ್ತದೆ.

ಕೂದಲು ಕಸಿಯ ಅಡ್ಡ ಪರಿಣಾಮಗಳೇನು?
ಕೂದಲು ಕಸಿ ಮಾಡುವುದರಿಂದ ಸಣ್ಣ ಪ್ರಮಾಣದ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಸಣ್ಣ ಪ್ರಮಾಣದ ರಕ್ತಸ್ರಾವ, ಊತ, ತುರಿಕೆ ಅಥವಾ ಕಸಿ ಮಾಡಿದ ಕೂದಲು ಉದುರಿಹೋಗುವ ಸಾಧ್ಯತೆಯೂ ಇದೆ. ಇವೆಲ್ಲವೂ ತಕ್ಷಣ ಶಮನವಾಗುತ್ತದೆ.

ಕೂದಲು ಕಸಿ ಎಷ್ಟು ಸುರಕ್ಷಿತ?
ಕೂದಲು ಕಸಿ ತುಂಬಾ ಸರಳ ಹಾಗೂ ಸುರಕ್ಷಿತ ವಿಧಾನ. ತಂತ್ರಜ್ಞಾನ ಇಂದು ಭಾರೀ ವೇಗದಲ್ಲಿ ಮುಂದುವರೆದಿದೆ. ಯಾವುದೇ ಸಣ್ಣ ಅಡ್ಡಪರಿಣಾಮಗಳಿದ್ದರೂ ತಕ್ಷಣ ಬಗೆಹರಿಸಬಹುದು.

ಕೂದಲು ಕಸಿ ಯಾವ ವಯಸ್ಸಿನವರಿಗೆ ಮಾಡಬಹುದು?
೨೨ ವರ್ಷ ದಾಟಿದ ಯಾರು ಬೇಕಾದರೂ ಕೂದಲು ಕಸಿ ಮಾಡಿಸಿಕೊಳ್ಳಬಹುದು. ಆದರೆ ದಾನಿಯ ತಲೆಯ ಹಿಂಭಾಗದಲ್ಲಿ ಕೂದಲು ಇರಬೇಕು.

ಕಸಿ ಮಾಡಿದ ಕೂದಲು ಎಷ್ಟು ದಿನ ಇರುತ್ತದೆ?
ಕೂದಲು ಕಸಿ ಕಾಯಂ ಕಾಲಾವಾಧಿಗೆ ಆಗುವುದರಿಂದ ಚಿಕಿತ್ಸೆ ಪಡೆದ ವ್ಯಕ್ತಿಯ ಸಾವಿನವರೆಗೂ ಕೂದಲು ಹಾಗೇ ಇರುತ್ತದೆ.

ಕೂದಲು ಕಸಿ ಮಾಡಿದ ಬಳಿಕ ಕೂದಲು ಉದುರಲು ಆರಂಭವಾದರೆ ಮತ್ತೆ ಕೂದಲು ಕಸಿ ಮಾಡಬೇಕಾ?
ಕಸಿ ಮಾಡಿದ ಕೂದಲು ಉದುರುವುದು ತೀರಾ ಅಪರೂಪ. ಒಂದು ವೇಳೆ ಉದುರಿದರೆ ಆ ವ್ಯಕ್ತಿಯು ಎಷ್ಟು ಸೆಷನ್ ಬೇಕಾದರೂ ಚಿಕಿತ್ಸೆ ಪಡೆಯಬಹುದು. ಆದರೆ ಅವರಲ್ಲಿ ಕೂದಲು ಇರಬೇಕು ಎನ್ನುವುದು ಪ್ರಮುಖ ಅಂಶ.

ಕೂದಲು ಕಸಿ ಮಾಡಲು ತಗಲುವ ಸರಾಸರಿ ವೆಚ್ಚ ಎಷ್ಟು?
ಚಿಕಿತ್ಸೆಗೆ ಬಳಸುವ ತಂತ್ರಜ್ಞಾನ ಆಧರಿಸಿ ೫೦ ಸಾವಿರದಿಂದ ೫ ಲಕ್ಷದವರೆಗೂ ವೆಚ್ಚವಾಗುತ್ತದೆ. ಇದಕ್ಕಾಗಿ ಡಿಎಚ್‌ಟಿ, ಬಯೋ ಎಫ್‌ಯುಟಿ, ಬಯ ಎಫ್‌ಯುಇ ತಂತ್ರಜ್ಞಾನ ಬಳಸಲಾಗುತ್ತದೆ.

Share this Story:

Follow Webdunia kannada