Webdunia - Bharat's app for daily news and videos

Install App

ಪುಟಾಣಿ ಸುಂದರಿ ನನ್ನ ಮಗಳು

Webdunia
ಸ್ನೇಹ ಾ
ND
ಯಾವ ಅಮ್ಮನಿಗೆ ತನ್ನ ಮಗಳು ಚೆನ್ನಾಗಿರಬೇಕೆಂಬ ಇಚ್ಛೆ ಇರವುದಿಲ್ಲ? ಹೆತ್ತ ತಾಯಿಗೆ ಹೆಗ್ಗಣ ಮುದ್ದು ಎಂಬುದು ಹಳೆಯ ಗಾದೆ. ಅದೂ ಹೆಗ್ಗಣವಾಗಿದ್ದರೂ ಮುದ್ದುಮುದ್ದು ಹೆಗ್ಗಣವಾಗಿರಲಿ ಎಂಬುದಾಗಿ ಯಾವ ತಾಯಿ ಬಯಸದಿರುವುದಿಲ್ಲ?

ನಿಮ್ಮ ಅಥವಾ ನಿಮ್ಮ ಮಗಳ ಮುಖ ಸೌಂದರ್ಯ, ಇಲ್ಲವೇ ಚರ್ಮದ ಬಣ್ಣ ಮುಂತಾದ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಬಹಳ ಮುಖ್ಯ ಎಂಬುದನ್ನು ಗಮನಿಸಿ. ಮುಖಕ್ಕೆ ಪೌಡರ್, ಕ್ರೀಂ ಬಳಿಯುವುದು, ಕೇಶವಿನ್ಯಾಸಕ್ಕೆ ಒಂದಷ್ಟು ಹೊತ್ತು ವಿನಿಯೋಗಿಸಿ ದುಬಾರಿ ಉಡುಪು ತೊಡಿಸಿ ಮಗಳನ್ನು ಬೊಂಬೆಯಂತೆ ಸಿಂಗರಿಸುವುದು ಸೌಂದರ್ಯ ಅಂತ ತಿಳಿದುಕೊಂಡಿದ್ದೀರಾದರೆ ಅದು ತಪ್ಪು.

ನಮ್ಮಬಾಹ್ಯ ಸೌಂದರ್ಯದಂತೆ ನಮ್ಮ ಆಂತರಿಕ ಸೌಂದರ್ಯವೂ ಅಷ್ಟೆ ಮುಖ್ಯ. ಮಹಿಳೆಯ ಸೌಂದರ್ಯದ ಬಹು ಮುಖ್ಯ ಅಂಶ ಆಕೆಯ ಆತ್ಮವಿಶ್ವಾಸ. ಒಬ್ಬ ಸುದೃಢ ಮನಸ್ಸಿನ ಮಹಿಳೆ ನೆಟ್ಟಗೆ ನಡೆಯುತ್ತಾಳೆ. ನಡೆಯುವಾಗ ಇಲ್ಲವೆ ಕುಳಿತುಕೊಳ್ಳುವಾಗ ತನ್ನ ಭಂಗಿಯಲ್ಲಿ ಆಲಸ್ಯ ಅಥವಾ ಸೋಮಾರಿತನವನ್ನು ಹೊರಸೂಸುವುದಿಲ್ಲ. ಆಕೆ ಯಾವುದೇ ವಿಚಾರದಲ್ಲಿ ಯಾರೊಂದಿಗೂ ಮಾತಾಡಲು ಶಕ್ತವಾಗಿರುತ್ತಾಳೆ. ಮಾತಿನ ವೇಳೆ ನಿಮ್ಮ ಕಣ್ಣನ್ನು ನೇರವಾಗಿ ದಿಟ್ಟಿಸಲು ಶಕ್ತವಾಗಿರುತ್ತಾಳೆ. ಆಕೆಯ ಬಳಿಕ ಉನ್ನತ ಮಟ್ಟದ ಆತ್ಮಗೌರವ ಹೊರಸೂಸುತ್ತಿರುತ್ತದೆ.

ಈ ಅಂಶಗಳನ್ನು ಹೊಂದಿರುವ ಒಬ್ಬ ಯುವತಿ ಇಲ್ಲವೇ ಬಾಲಕಿ, ಒಂದು ಮುದ್ದಾದ ಮೊಗಹೊಂದಿದ್ದು ಆತ್ಮವಿಶ್ವಾಸವೇ ಇಲ್ಲದ ಹೆಮ್ಮಗಳಿಗಿಂತ ಹೆಚ್ಚು ಸುಂದರಳಾಗಿ ಕಾಣುತ್ತಾಳೆ. ಹಾಗಾಗಿ ಮೊತ್ತಮೊದಲಿಗೆ ನಿಮ್ಮ ಮಗಳಲ್ಲಿ ಆತ್ಮವಿಶ್ವಾಸ ವೃದ್ಧಿಸುವ ಕಾರ್ಯವನ್ನು ಕೈಗೊಳ್ಳಿ. ನಿಮ್ಮ ಮುದ್ದು ರಾಜಕುಮಾರಿಯ ಬಗ್ಗೆ ನಕಾರಾತ್ಮಕ ಟೀಕೆಗಳನ್ನು ಮಾಡದಿರಿ. ಆಕೆಯ ಕೆಟ್ಟ ಅಭ್ಯಾಸಗಳನ್ನು ಆಕೆಯನ್ನು ಟೀಕಿಸದೆಯೇ ಉಪಾಯವಾಗಿ ನಿಲ್ಲಿಸಿ. ಆಕೆಯಲ್ಲಿ ದುರಹಂಕಾರ, ಅನಗತ್ಯ ಜಂಭ ಮೂಡದಂತೆ ಅವಳಲ್ಲಿ ಆತ್ಮವಿಶ್ವಾಸ ತುಂಬುವುದು ನಿಮ್ಮ ಜಾಣ್ಮೆ. ಅಹಂಕಾರವು ವೈಯಕ್ತಿಕ ಟೀಕೆಯ ವೇಳೆ ಸ್ವಯಂರಕ್ಷಣೆ ವಿಧಾನವಾದರೂ ಅದು ಸೀಮಿತ ಅಹಂಕಾರವಾಗಿರಲಿ ವಿನಹ ದುರಹಂಕಾರವಾಗದಿರಲಿ.

ನಿಮ್ಮ ಮಗಳು ಯಾವುದೇ ಕಾರಣಕ್ಕೂ ತನ್ನ ಬಣ್ಣ ಸುಂದರವಿಲ್ಲ. ಮೂಗು ಸರಿಯಿಲ್ಲ ಇಲ್ಲವೇ ಸೊಂಟ ಡುಮ್ಮಕ್ಕಿದೆ ಎಂಬೆಲ್ಲ ಕೀಳರಿಮೆ ಹುಟ್ಟಿಸಿಕೊಳ್ಳಲೇ ಕೂಡದು. ಸೌಂದರ್ಯಕ್ಕೆ ಮಾಟವಾದ ದೇಹಮಾತ್ರ ಕಾರಣವಲ್ಲ ಎಂಬ ಅಂಶವನ್ನು ಆಕೆಯಲ್ಲಿ ಮೂಡಿಸುವುದು ನಿಮ್ಮ ಕರ್ತವ್ಯ. ಚೆಲುವಾಗಿ ಕಾಣಬೇಕಿದ್ದರೆ ಶಾಸ್ತ್ರೀಯ ಲಕ್ಷಣಗಳೇ ಮುಖ್ಯವಲ್ಲ ಎಂಬುದು ಗಮನದಲ್ಲಿರಲಿ. ಆಂತರಿಕ ಚೆಲುವು ತಾನೇತಾನಾಗಿ ಬಾಹ್ಯ ಚೆಲುವನ್ನು ಹೊರಸೂಸುತ್ತದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ ಈ ಕೆಲಸ ಮಾಡಬೇಡಿ

ಅಂಗಡಿಯಿಂದ ತಂದ ತುಪ್ಪ ಅಸಲಿಯೋ, ನಕಲಿಯೋ ಎಂದು ಪತ್ತೆ ಹಚ್ಚಲು ಹೀಗೆ ಮಾಡಿ