ದೇಹಸೌಂದರ್ಯಕ್ಕಾಗಿ ಪಾದಗಳ ಆರೈಕೆ
ಇಡೀ ದೇಹದ ಭಾರವನ್ನು ಹೊತ್ತುಕೊಂಡು ತಿರುಗುವುದು ನಿಮ್ಮ ಕಾಲುಗಳು. ಆದರೆ ಹೆಚ್ಚು ನಿರ್ಲಕ್ಷ್ಯಕ್ಕೊಳಗಾಗುವ ಅಂಗವೂ ಕಾಲುಗಳೇ. ಆದರೆ ಪಾದಗಳ ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಪಾದಗಳ ಆರೈಕೆ ಬಹುಮುಖ್ಯವಾಗಿದೆ.ಪಾದಗಳ ಚರ್ಮ ತುಂಬ ಸೂಕ್ಷ್ಮವಾಗಿದ್ದು ನಿಯಮಿತ ಆರೈಕೆ ಅತ್ಯಗತ್ಯ. ಕೆಲವು ಸರಳ ವಿಧಾನಗಳಿಂದ ಕಾಲು ಹಾಗೂ ಪಾದಗಳ ಆರೈಕೆ ಮಾಡಬಹುದು.ಹಿಮ್ಮಡಿಗಳಲ್ಲಿ ದಡ್ಡುಗಟ್ಟಿದ ಚರ್ಮವನ್ನು ತೆಗೆದು ಹಾಕಿ. ಇದಕ್ಕಾಗಿ ಪ್ಯೂಮಿಕ್ ಸ್ಟೋನ್‌ಗಳನ್ನು ಬಳಸಬಹುದು. ಅಥವಾ ಯಾವುದಾದರೂ ಸ್ಕಿನ್ ಲೋಶನ್‌ಅನ್ನು ಧಾರಾಳವಾಗಿ ಬಳಸಿ ಮೃದುವಾಗಿ ಮಸಾಜ್ ಮಾಡಿ. ಒಂದು ಬಕೆಟ್ ಅಥವಾ ಟಬ್‌ನಲ್ಲಿ ಪಾದಗಳು ಮುಳುಗುವಷ್ಟು ಪ್ರಮಾಣದಲ್ಲಿ ಬಿಸಿನೀರು ತೆಗೆದುಕೊಂಡು ಅದಕ್ಕೆ ಒಂದು ಟೀಸ್ಪೂನ್ ಉಪ್ಪು ಸೇರಿಸಿ. ಒಂದೆರಡುತೊಟ್ಟು ಡೆಟ್ಟಾಲ್ ಮತ್ತು ಸ್ವಲ್ಪ ಶಾಂಪೂ ಸೇರಿಸಿ ಪಾದಗಳನ್ನು ಈ ನೀರಿನಲ್ಲಿಡಿ. ಹತ್ತು ನಿಮಿಷದ ಬಳಿಕ ಪಾದಗಳನ್ನು ನೀರಿನಿಂದ ತೆಗೆದು ಶುಭ್ರ ಬಟ್ಟೆಯಿಂದ ಬೆರಳುಗಳ ನಡು ಸೇರಿದಂತೆ ಚೆನ್ನಾಗಿ ಒಣಗಿಸಿ. ಕಾಲುಗುರುಗಳನ್ನು ಕತ್ತರಿಸಿ. ಶೇಪ್ ಕೊಡಿ. ಫೂಟ್ ಸ್ಕಿನ್ ಅಥವಾ ಯಾವುದಾದರೂ ಕ್ರೀಮ್ ಬಳಸಿ ಮೃದುವಾಗಿ ಮಸಾಜ್ ಮಾಡಿ. ಬಳಿಕ ಬೇಕಿದ್ದರೆ ನೇಲ್ ಪಾಲಿಶ್ ಹಚ್ಚಿ. ನೇಲ್ ಪಾಲಿಶ್ ಹಚ್ಚುವ ಮುನ್ನ ಉಗುರಿನಲ್ಲಿ ನೀರಿನ ಪಸೆ ಅಥವಾ ಕ್ರೀಂ ಉಳಿಯದಂತೆ ಶುಚಿಗೊಳಿಸಿ.ವಾರಕ್ಕೊಂದಾವರ್ತಿ ಅಥವಾ ಹದಿನೈದು ದಿನಗಳಿಗೊಮ್ಮೆ ಈ ಕ್ರಮವನ್ನು ಅನುಸರಿಸುವ ಮೂಲಕ ಪಾದಗಳ ಆರೋಗ್ಯ ಕಾಪಾಡಬಹುದು.