Select Your Language

Notifications

webdunia
webdunia
webdunia
webdunia

ಚಿರ ಯೌವನಕ್ಕೆ ಚರ್ಮ ಸೌಂದರ್ಯ

ಚಿರ ಯೌವನಕ್ಕೆ ಚರ್ಮ ಸೌಂದರ್ಯ

ಇಳಯರಾಜ

ದೇಹ ಆರೋಗ್ಯದಲ್ಲಿ ಚರ್ಮದ ಬಣ್ಣ, ಗುಣ, ಕಾಂತಿ ಇತ್ಯಾದಿಗಳು ಗಮನಾರ್ಹವಾಗಿವೆ. ಸುಕ್ಕುಗಟ್ಟಿದ, ಕಪ್ಪು ದಬ್ಬೆಗಳೆದ್ದು, ಸುಣುಗು (ಹೊಟ್ಟು) ಏಳುವ ಚರ್ಮ ಹೊಂದಿದ ವ್ಯಕ್ತಿಯು ಅನಾರೋಗ್ಯಪೀಡಿತನಂತೆ ತೋರುತ್ತಾನೆ.

ಮಹಿಳೆಯರಂತೂ ಚರ್ಮದ ಸಂರಕ್ಷಣೆ, ನಿರ್ವಹಣೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಚೈತನ್ಯದಿಂದ ಕೂಡಿದ ಚರ್ಮ ಯೌವನದ ಲಕ್ಷಣ. ಪ್ರಾಯ ಎಷ್ಟೇ ಆಗಿರಬಹುದು ಚರ್ಮದಲ್ಲಿ ಸುಕ್ಕು ಬಿದ್ದಿಲ್ಲವಾದರೆ ಇನ್ನು ಕಿರಿಯವರಾಗಿ ಕಾಣಿಸಿಕೊಳ್ಳಬಹುದು. ಹವಾಮಾನಕ್ಕೆ ತಕ್ಕಂತೆ ಚರ್ಮದ ರಕ್ಷಣೆ, ಶುಚೀಕರಣ, ಇನ್ನಿತರ ವಿಷಯಗಳು ಮಹತ್ವದ್ದಾಗಿರುತ್ತವೆ.

ಮೆದುವಾಗಿರುವ ಶುಭ್ರ ಚರ್ಮ, ಅದರಲ್ಲಿ ನುಣುಪಾದ ರೋಮ ಕೂಪಗಳು ಆರೋಗ್ಯವಂತಿಕೆಯ ಲಕ್ಷಣ. ಚಳಿಗಾಲದಲ್ಲಿ ಚರ್ಮ ಬಿರುಕು ಬೀಳದಂತೆ ತೈಲಾಂಶ ಯುಕ್ತ ಲೇಪಗಳನ್ನು ಬಳಸುವುದು. ಬೇಸಗೆಯಲ್ಲಿ ಸೂರ್ಯನ ಬಿರುಕಿರಣಗಳನ್ನು ತಡೆಯಲು ಸನ್‌ ಸ್ಕ್ರೀನ್‌ಲೇಪಗಳನ್ನು ಬಳಸುವುದು ಉತ್ತಮ.

ಬೇಸಗೆಯಲ್ಲಿ ಬಿಸಿಲು ದಬ್ಬೆಗಳೆದ್ದು ಚರ್ಮ ಅಂದಗೆಡದಂತೆ , ಬೆವರು ಹುಣ್ಣು, ಫಂಗಸ್‌ರೋಗಗಳು ಬಾಧಿಸದಂತೆ ತಡೆಯುವ ಅಗತ್ಯವಿದೆ. ಹತ್ತಿಯ ಶುಭ್ರ ಬಟ್ಟೆಗಳನ್ನು ಧರಿಸುವುದು. ಮಧ್ಯಾಹ್ನದ ಬಿರುಬಿಸಿಲಿಗೆ ಮೈಯೊಡ್ಡದಿರುವುದು, ಛತ್ರಿಗಳ ಬಳಕೆ ಇತ್ಯಾದಿಗಳಿಂದ ಚರ್ಮದ ತಾಜಾ ತನ ಉಳಿಸಲು ಸಾಧ್ಯ. ಚರ್ಮದ ಅಕಾಲ ವೃದ್ಧಾಪ್ಯ ಬಾಧಿಸದಿರಲು ಚರ್ಮ ರಕ್ಷಣೆಯ ಪೋಷಕಾಂಶಗಳ ಸೇವನೆಯೂ ಅನಿವಾರ್ಯ.

Share this Story:

Follow Webdunia kannada