Webdunia - Bharat's app for daily news and videos

Install App

ಗಮನವಿರಲಿ ಅಲಂಕಾರದ ಕಡೆಗೆ !

Webdunia
ಶುಕ್ರವಾರ, 10 ಜನವರಿ 2014 (11:46 IST)
PR
ಹೆಣ್ಣುಮಕ್ಕಳು ಅಲಂಕಾರ ಪ್ರಿಯರು. ತಮ್ಮ ರೂಪವನ್ನು ಮತ್ತಷ್ಟು ಸುಂದರವಾಗಿ ಮಾಡುವ ನಿಟ್ಟಿನಲ್ಲಿ ಅವರ ಗಮನ ಇರುತ್ತದೆ. ಆದರೆ ಯಾರೇ ಆಗಿರಲಿ ತಮ್ಮ ರೂಪವನ್ನು ಮತ್ತಷ್ಟು ಸುಂದರವಾಗಿ ಕಾಣಲು ಒಂದಷ್ಟು ಸಂಗತಿಗಳತ್ತ ಗಮನ ನೀಡಲೇ ಬೇಕು. ಆಗ ಸೌಂದರ್ಯ ಮತ್ತಷ್ಟು ಉಜ್ವಲವಾಗುವುದಲ್ಲದೆ, ಚರ್ಮದ ಆರೋಗ್ಯವು ಸಹ ಹಾಳಗದು.

ಮುಖದ ಮೇಲೆ ಇರುವ ಕಪ್ಪು ಕಲೆ ಮಚ್ಚೆಗಳನ್ನು ದೂರ ಮಾಡಲು ಕನ್ಸೀಲರನ್ನು ಬಳಸ ಬೇಕು. ಆದರೆ ಅನೇಕರು ಕನ್ಸೀಲರನ್ನು ಫೌಂಡೇಷನ್ ನಂತೆ ಮುಖಕ್ಕೆಲ್ಲ ಲೇಪಿಸಿಕೊಳ್ಳುತ್ತಾರೆ. ಆದರೆ ಆ ವಿಧಾನ ತಪ್ಪು . ಹಾಗೆ ಮಾಡುವುದರಿಂದ ಚರ್ಮ ಸುತ್ತಂತಾಗುತ್ತದೆ. ಇಲ್ಲವೇ ಒಣಗಿದಂತಾಗಿ ಇದು ಶಾಶ್ವತವಾದ ತೊಂದರೆ ಉಂಟು ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.

ಕಣ್ಣಿನ ಕೆಳಗಿರುವ ಕಪ್ಪು ಮತ್ತು ಮುಖದ ಮೇಲಿರುವ ಮಚ್ಚೆಗಳನ್ನು ದೂರ ಮಾಡಲು ಇದು ಹೆಚ್ಚು ಉಪಯುಕ್ತ.

ಎಣ್ಣೆ ಅಂಶವನ್ನು ಹೆಚ್ಚು ಹೊಂದಿರುವವರು ಆದಷ್ಟು ಕಡಿಮೆ ಪೌಡರ್ ಬಳಸಿ . ಹೆಚ್ಚಾಗಿ ಲೇಪಿಸಿದರೆ ಚರ್ಮವು ನೈಜತೆ ಕಳೆದು ಕೊಂಡಂತೆ ಇರುತ್ತದೆ.

ಸಾಮಾನ್ಯವಾಗಿ ನೀವು ಬಳಸುವ ಲಿಪ್ಸ್ಟಿಕ್ ನಿಮ್ಮ ಸೌಂದರ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಕೆಲವರಿಗೆ ತಮ್ಮ ತುಟಿಗೆ ಡಾಳಾಗಿ ಕೆಂಪು ಬಣ್ಣ ಹಾಕಲು ಇಷ್ಟ. ಆದರೆ ಅವರು ಒಂದು ಸಂಗತಿಯ ಬಗ್ಗೆ ಮರೆತೇ ಹೋಗಿರುತ್ತಾರೆ. ಆ ಬಣ್ಣ ತುಟಿಗೆ ಮಾತ್ರವಲ್ಲ ಹಲ್ಲುಗಳಿಗೂ ಅಂಟಿ ಬಿಟ್ಟಿರುತ್ತದೆ ಇದರಿಂದ ಅವರ ರೂಪ ವಿಕಾರವಾಗಿ ಬಿಡುತ್ತದೆ. ಕೆಲವು ಬಾರಿ ತುಟಿಯಿಂದ ಹೊರಗೂ ಬಂದಿರುತ್ತದೆ . ಅದು ಸಹ ನಿಮ್ಮ ರೂಪದ ಮೇಲೆ ಪರಿಣಾಮ ಬೀರುತ್ತದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ