Webdunia - Bharat's app for daily news and videos

Install App

ಕೂದಲಿನ ಆರೋಗ್ಯಕ್ಕಾಗಿ ಕೆಲವು ಸಲಹೆಗಳು

Webdunia
ರಶ್ಮಿ.ಪೈ

1. ನಿಮ್ಮ ಕೂದಲನ್ನು ವಾರಕ್ಕೆರಡು ಬಾರಿ ಮಾತ್ರ ತೊಳೆಯಿರಿ.ತೊಳೆಯಲು ಬಿಸಿನೀರನ್ನು ಬಳಸುವುದು ಬೇಡ.ತೊಳೆಯಲು ಶ್ಯಾಂಪು ಬಳಸುತ್ತಿದ್ದರೆ, ಸೌಮ್ಯವಾದ
ಶ್ಯಾಂಪೂಗಳನ್ನು ಬಳಸುವುದು ಉತ್ತಮ.

ಉನ್ನತ ಗುಣಮಟ್ಟದ ಬ್ರಷ್ ಅಥವಾ ಬಾಚಣಿಗೆಯನ್ನು ಬಳಸಿ. ಕೂದಲು ತೊಳೆದ ನಂತರ ಹತ್ತು ಹದಿನೈದು ನಿಮಿಷಗಳ ಕಾಲ ಕೂದಲು ಬುಡಗಳನ್ನು ಬೆರಳಿನಿಂದ ಮಸಾಜ್ ಮಾಡಿ.ಇದು ರಕ್ತಸಂಚಲನೆ ಸುಗಮವಾಗಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೇರುಗಳಿಗೆ ಶಕ್ತಿಯನ್ನು ನೀಡುತ್ತದೆ.

2. ಕೂದಲಿನ ಬುಡಕ್ಕೆ ಮತ್ತು ಕೂದಲಿಗೆ ತೆಂಗಿನ ಹಾಲನ್ನು ಹಾಕಿ ಮಸಾಜ್ ಮಾಡಿ. ಅರ್ಧಗಂಟೆ ಕಳೆದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆ ಮೂರು ಬಾರಿ ಇದನ್ನು ಆವರ್ತಿಸಿ.

3. ಮೊಟ್ಟೆಯ ಹಳದಿಯನ್ನು ಜೇನಿನೊಂದಿಗೆ ಬೆರೆಸಿ ಮಸಾಜ್ ಮಾಡಿ ಅರ್ಧಗಂಟೆಯನಂತರ ತೊಳೆದರೆ ಕೂದಲು ದಟ್ಟವಾಗುತ್ತದೆ.

3. ಬಾದಾಮಿ ಎಣ್ಣೆಯಿಂದ ಮೂರು ನಾಲ್ಕು ಬಾರಿ ನೆತ್ತಿಯನ್ನು ಮಸಾಜ್ ಮಾಡಿದರೆ ಕೂದಲುದುರುವಿಕೆಯು ಕಡಿಮೆಯಾಗುತ್ತದೆ.

4. ಬೊಕ್ಕತಲೆಯಿದ್ದರೆ ಅಲ್ಲಿಗೆ ನೀರುಳ್ಳಿ ರಸವನ್ನು ಚೆನ್ನಾಗಿ ತಿಕ್ಕಿ, ತದನಂತರ ಜೇನನ್ನು ಲೇಪಿಸುವುದರಿಂದ ಕೂದಲು ಬೆಳೆಯುವುದು.

5. ಸಮಾನ ಪ್ರಮಾಣದಲ್ಲಿ ಬೆಚ್ಚಗಿನ ಹರಳೆಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಬೆರೆಸಿ ವಾರಕ್ಕೊಂದು ಬಾರಿ ಹಚ್ಚಿ ಮಸಾಜ್ ಮಾಡಿದರೆ ಕೂದಲು ಉದ್ದವಾಗುವುದು.

6. ನೆಲ್ಲಿಕಾಯಿಯ ಹುಡಿಯೊಂದಿಗೆ ಮೊಟ್ಟೆಯನ್ನು ಸೇರಿಸಿ ಹಚ್ಚಿ ಅರ್ಧಗಂಟೆಯ ನಂತರ ತೊಳೆದರೆ ಕೂದಲು ನಯವಾಗುತ್ತದೆ.

7. ಲಿಂಬೆಹಣ್ಣಿನ ರಸವನ್ನು ನೆತ್ತಿಗೆ ಹಚ್ಚಿ ಮಸಾಜ್ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

8. ಲಿಂಬೆ ಬೀಜ ಮತ್ತು ಕರಿಮೆಣಸಿನ ಕಾಳನ್ನು ಸಮ ಪ್ರಮಾಣದಲ್ಲಿ ಪುಡಿಮಾಡಿ, ಅಲ್ಪ ನೀರು ಸೇರಿಸಿ ನೆತ್ತಿಗೆ ಹಚ್ಚುವುದರಿಂದ ಬೊಕ್ಕತಲೆ ನಿವಾರಣೆಯಾಗುತ್ತದೆ.

9. ಬಿಸಿ ಆಲಿವ್ ಎಣ್ಣೆ, ಜೇನು ಮತ್ತು ಒಂದು ಟೀ ಚಮಚ ದಾಲ್ಚೀನಿ ಹುಡಿಯನ್ನು ನೀರಿನೊಂದಿಗೆ ಮಿಶ್ರಮಾಡಿ ತಲೆಗೆ ಹಚ್ಚಿದರೆ ಕೂದಲು ಕಪ್ಪಾಗುತ್ತದೆ.

10. ಕೊತ್ತಂಬರಿ ಸೊಪ್ಪಿನ ರಸವನ್ನು ನೆತ್ತಿಗೆ ಹಚ್ಚುವುದರಿಂದ ನೆತ್ತಿಗೆ ತಂಪಾಗಿ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

11. ನಾಲ್ಕು ಟೀ ಚಮಚ ಮದರಂಗಿ ಎಲೆಯೊಂದಿಗೆ 1 ಕಪ್ ಸಾಸಿವೆ ಎಣ್ಣೆಯನ್ನು ಕುದಿಸಿ.ತಣಿದ ನಂತರ ಅದನ್ನು ಸೋಸಿ ಬಾಟಲಿಯಲ್ಲಿ ಹಾಕಿಡಿ. ಇದನ್ನು ದಿನಾ ಹಚ್ಚುವುದರಿಂದ ಕೂದಲು ದಟ್ಟವಾಗಿ ಮತ್ತು ಕಪ್ಪಾಗಿ ಬೆಳೆಯುತ್ತದೆ.

12. ಬಾಳೆಹಣ್ಣಿನ ರಸಾಯನ,ಜೇನು ,ಮೊಸರು, ಮತ್ತು ಕೆನೆಹಾಲನ್ನು ಸೇವಿಸಿದರೆ ಕೂದಲು ಬೆಳೆಯುತ್ತದೆ.

13. ದಿನವೂ ಜೀರಿಗೆ ಅಥವಾ ಕೊತ್ತಂಬರಿ ನೀರಿನ ಸೇವನೆ ಕೂದಲಿನ ಪೋಷಣೆಗೆ ಅತ್ಯುತ್ತಮ.

14. ಕೂದಲು ಬಣ್ಣಗೆಟ್ಟಿದ್ದರೆ ಅಥವಾ ಅತಿಯಾಗಿ ಉದುರುತ್ತಿದ್ದರೆ ಕ್ಯಾರೆಟ್ ರಸವನ್ನು ಸೇವಿಸುವುದು ಒಳ್ಳೆಯದು.

15. ಮದರಂಗಿಯನ್ನು ಮೊಟ್ಟೆಯೊಂದಿಗೆ ಮಿಶ್ರಮಾಡಿ ತಲೆಗೆ ಹಚ್ಚುವುದರಿಂದ ಕೂದಲಿಗೆ ಹೊಳಪು ಮತ್ತು ಶಕ್ತಿ ದೊರೆಯುತ್ತದೆ.


ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ ಈ ಕೆಲಸ ಮಾಡಬೇಡಿ

ಅಂಗಡಿಯಿಂದ ತಂದ ತುಪ್ಪ ಅಸಲಿಯೋ, ನಕಲಿಯೋ ಎಂದು ಪತ್ತೆ ಹಚ್ಚಲು ಹೀಗೆ ಮಾಡಿ