Webdunia - Bharat's app for daily news and videos

Install App

ಆರೋಗ್ಯ-ಸುಂದರ ತ್ವಚೆಗೆ ಹಣ್ಣು ತರಕಾರಿ ಸಹಕಾರಿ

Webdunia
ಶನಿವಾರ, 21 ಜನವರಿ 2012 (11:10 IST)
PR
ನೀವು ತೆಗೆದುಕೊಳ್ಳುವ ಆಹಾರವು ನಿಮ್ಮ ಮುಖದಲ್ಲಿ ಪ್ರತಿಬಿಂಬಿತವಾಗುವುದರಿಂದ ಹಣ್ಣು ಹಾಗೂ ತರಕಾರಿಗಳನ್ನು ನಿಮ್ಮ ಆರೋಗ್ಯಕ್ಕಾಗಿ ಹಾಗೂ ಹೊಳೆಯುವ ಚರ್ಮಕ್ಕಾಗಿ ಬಳಸುವುದು ತುಂಬಾ ಅವಶ್ಯಕ. ದೇಹದ ಮೆಟಬೋಲಿಸಮ್‌ನ ಚಟುವಟಿಕೆಗೆ ಹಣ್ಣುಗಳು ಮತ್ತು ತರಕಾರಿಗಳು ಸಹಕಾರಿ ಅಲ್ಲದೆ ಇವುಗಳು ಮನುಷ್ಯನು ಆರೋಗ್ಯವಾಗಿರುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಹೊಳೆಯುವ ಚರ್ಮಕ್ಕಾಗಿ ನಿಮ್ಮ ಆಹಾರವು ಮಿನರಲ್ಸ್ ಹಾಗೂ ವಿಟಮಿನ್‌ಗಳಾದ ಎ,ಸಿ ಹಾಗೂ ಇ ಗಳನ್ನು ಯಥೇಚ್ಛವಾಗಿ ಒಳಗೊಂಡಿರಲೇಬೇಕು. ನೀವು ತೆಗೆದುಕೊಳ್ಳುವ ಹಣ್ಣುಗಳನ್ನು ಹಾಗೂ ಕೆಲವೊಂದು ತರಕಾರಿಗಳನ್ನು ನಿಮ್ಮ ಮುಖದ ಸೌಂದರ್ಯಕ್ಕೂ ಬಳಸಬಹುದು.

ಉದಾ: ಪಪ್ಪಾಯಿ-ಇದು ವಿಟಮಿನ್ ಎ ಅನ್ನು ಯಥೇಚ್ಛವಾಗಿ ಒಳಗೊಂಡಿರುವ ಹಣ್ಣು. ಇದು ಮುಖವನ್ನು ಸ್ವಚ್ಛವಾಗಿಸುವಲ್ಲಿ ಸಹಕಾರಿ ಮತ್ತು ಚರ್ಮಕ್ಕೆ ಉತ್ತಮ ಹೊಳಪನ್ನು ನೀಡುತ್ತದೆ.

ದ್ರಾಕ್ಷಿ ಹಣ್ಣುಗಳು- ನಿಮ್ಮ ಕಣ್ಣಿನ ಕೆಳಗಿ ಕಪ್ಪು ವರ್ತುಲಕ್ಕೆ ದ್ರಾಕ್ಷಿಯ ರಸ ಉತ್ತಮ ಪರಿಹಾರ.
ಆಪಲ್-ಇದನ್ನು ನಿಮ್ಮ ಮುಖಕ್ಕೆ ಫೇಸ್ ಪ್ಯಾಕ್ ಆಗಿ ಬಳಸಬಹುದು.
ಪೈನಾಪಲ್, ಆರೆಂಜ್-ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಇದು ಒಂದು ಅತ್ಯುತ್ತಮ ಫೇಶಿಯಲ್ ಆಗಿದೆ.

ಕ್ಯಾರೆಟ್ ತನ್ನಲ್ಲಿ ಯಥೇಚ್ಛವಾದ ವಿಟಮಿನ್ ಸಿ ಹಾಗೂ ಬೇಟಾ-ಕ್ಯಾರೆಟೀನ್ ಅಂಶಗಳನ್ನು ಒಳಗೊಂಡಿದೆ ಇದು ನಿಮ್ಮ ತ್ವಚೆಯನ್ನು ತಾರುಣ್ಯಭರಿತವಾಗಿ ಮಾಡುವಲ್ಲಿ ಸಹಕಾರಿ.

ಸೂರ್ಯಕಾಂತಿ ಬೀಜಗಳು ಹೇರಳವಾದ ವಿಟಮಿನ್ ಇ ಹಾಗೂ ಸಾಕಷ್ಟು ಸ್ವಾಭಾವಿಕ ಕೊಬ್ಬಗಳನ್ನು ಒಳಗೊಂಡಿದ್ದು ಇದು ಚರ್ಮವನ್ನು ಮೃದುವಾಗಿಡುತ್ತದೆ.

ಟೊಮೆಟೋ ಹಣ್ಣಿನ ರಸವನ್ನು ಮುಖಕ್ಕೆ ಲೇಪಿಸಿ 15 ನಿಮಿಷದ ನಂತರ ತೊಳೆಯಿರಿ. ಇದು ತ್ವಚೆಯನ್ನು ಹೊಳಪಾಗಿಡುತ್ತದೆ.
ಆರೆಂಜ್ ವಿಟಮಿನ್ ಸಿಯನ್ನು ಒಳಗೊಂಡಿದೆ. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ಇದು ಶುಭ್ರಕಾರಿಯಾಗಿ ಕೆಲಸ ಮಾಡುವುದರಿಂದ ತ್ವಚೆಯನ್ನು ಅಭಿವೃದ್ಧಿಗೊಳಿಸುತ್ತದೆ ಹಾಗೂ ದೇಹದ ನಿರೋಧಕ ವ್ಯವಸ್ಥೆಯನ್ನು ವ್ಯವಸ್ಥಿತವಾಗಿಡುವಲ್ಲಿ ಇದು ಸಹಕಾರಿ.

ಬಾಳೆಹಣ್ಣು ವಿಟಮಿನ್‌ಗಳನ್ನು ಮಿನರಲ್ಸ್‌ಗಳನ್ನು ಕಾರ್ಬೊಹೈಡ್ರೇಟ್ಸ್‌ಗಳನ್ನು ಧಾರಾಳವಾಗಿ ಒಳಗೊಂಡಿದೆ. ಇದು ದೇಹದ ನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.

ಖರ್ಜೂರ - ನಮ್ಮ ದೇಹದಲ್ಲಿ ಕಬ್ಬಿಣ ಸತ್ವದ ಬೆಳವಣಿಗೆಗೆ ಇದು ಸಹಕಾರಿ, ರಕ್ತ ಸಂಚಲನೆ ಹಾಗೂ ಹೊಳೆಯುವ ತ್ವಚೆಯೊಂದಿಗೆ ರಕ್ತದ ಉತ್ಪಾದನೆಗೆ ಇದು ಉತ್ತಮ.

ಈ ಹಣ್ಣು ಹಾಗೂ ತರಕಾರಿಗಳ ಬಳಕೆಯೊಂದಿಗೆ ನಾವು ನಮ್ಮ ಚರ್ಮದ ಸ್ವಚ್ಛತೆಗೂ ಹೆಚ್ಚಿನ ಗಮನವನ್ನು ನೀಡಬೇಕು. ಚರ್ಮವನ್ನು ಸ್ವಚ್ಛಗೊಳಿಸುವುದು, ನಾಜೂಕು ಮಾಡುವುದು ಹಾಗೂ ತೇವಗೊಳಿಸಿವುದು ಈ ಮೂರು ವಿಧಾನಗಳು ಸಹಕಾರಿಯಾದುದು. ಅದೇ ರೀತಿ ನಿಮ್ಮ ತ್ವಚೆಗೆ ಹೊಂದಿಕೆಯಾಗುವ ಉತ್ತಮ ವಸ್ತುಗಳನ್ನೇ ನೀವು ಬಳಸಬೇಕು ಅದರಲ್ಲೂ ನೈಸರ್ಗಿಕ ಪರಿಹಾರಗಳನ್ನು ನಿಮ್ಮ ತ್ವಚೆಯ ಸಮಸ್ಯೆಗಳಿಗೆ ಕಂಡುಕೊಳ್ಳಿ. ಆರೋಗ್ಯಕರ ತ್ವಚೆಗಾಗಿ ಜಂಕ್ ಆಹಾರಗಳನ್ನು ತ್ಯಜಿಸಿ ಮತ್ತು ಹಸಿರು ತರಕಾರಿ ಹಾಗೂ ಹಣ್ಣುಗಳನ್ನು ಧಾರಾಳವಾಗಿ ಸೇವಿಸಿ. ಸನ್ ಸ್ಕ್ರೀನ್ ಲೋಶನ್ ಅಥವಾ ಸನ್ ಬ್ಲೋಕ್ ಲೋಶನ್‪ಗಳನ್ನು ಬಳಸಿ. ಮನೆಗೆ ಮರಳಿದ ನಂತರ ನಿಮ್ಮ ಮೇಕಪ್ ಅನ್ನು ಶುಭ್ರಕಾರಕದಿಂದ ಸ್ವಚ್ಛಗೊಳಿಸಿ. ಹಣ್ಣಿನ ರಸ ಮತ್ತು ನೀರನ್ನು ಯಥೇಚ್ಛವಾಗಿ ಸೇವಿಸಿ.

ಶ್ವೇತಾ ಪಿ.ಎಸ್
ಕುಕ್ಕೆ ಸುಬ್ರಹ್ಮಣ್ಯ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ