Select Your Language

Notifications

webdunia
webdunia
webdunia
webdunia

ನಿಮ್ಮ ವಿವಾಹ ಜೀವನ ಸುಮಧುರವಾಗಿಲ್ಲವೇ? ಯಾಕೆ ಗೊತ್ತಾ ?

ನಿಮ್ಮ ವಿವಾಹ ಜೀವನ ಸುಮಧುರವಾಗಿಲ್ಲವೇ? ಯಾಕೆ ಗೊತ್ತಾ ?
, ಮಂಗಳವಾರ, 4 ಅಕ್ಟೋಬರ್ 2016 (14:12 IST)
ವಿವಾಹ ಜೀವನ ಸುಖಮಯವಾಗಿಲ್ಲದಿದ್ದರೆ ಮನೆ, ಮನಸ್ಸು ಹೇಗೆ ತಾನೇ ಸೌಖ್ಯವಾಗಿರಲು ಸಾಧ್ಯ? ಆದರೆ, ವಿವಾಹದ ನಂತರ ದಾಂಪತ್ಯ ಜೀವನ ಸುಖಕರವಾಗಿಲ್ಲದಿದ್ದರೆ, ಅದಕ್ಕೆ ಕೆಲವು ನಿಮ್ಮದಲ್ಲದ ಕಾರಣಗಳೂ ಇವೆ ಎಂಬುದನ್ನು ನೆನಪಿಟ್ಟುಕೊಳ್ಳಿ. ವಾಸ್ತವದಲ್ಲಿ ನಿಮ್ಮಿಬ್ಬರ ಮದುವೆಯಾಗಿದ್ದರೂ, ನಿಮ್ಮಿಬ್ಬರ ಜಾತಕಗಳಿಗೆ ಮದುವೆಯೇ ಆಗಿರುವುದಿಲ್ಲ. ಕಾರಣ ಅವೆರಡು ಹೊಂದಿಕೊಂಡೇ ಇರುವುದಿಲ್ಲ. ಹೀಗಾಗಿ ಇಬ್ಬರ ಜಾತಕದಲ್ಲಿ ಒಬ್ಬರದ್ದರಲ್ಲಿ ಏನಾದರೊಂದು ವ್ಯತಿರಿಕ್ತ ದೃಷ್ಟಿಯಿದ್ದರೂ ಸಾಕು ನಿಮ್ಮ ಜೀವನ ಹದಗೆಡುವ ಸಂಭವವಿದೆ.
ವೈವಾಹಿಕ ಜೀವನದಲ್ಲಿ ನಿಮ್ಮ ಜಾತಕದಲ್ಲಿ ಮಂಗಳ ಪ್ರಭಾವವೂ ಮುಖ್ಯವೆನಿಸುತ್ತದೆ. ಮಂಗಳ ಯಾವಾಗಲೂ ತಾಮಸ ಗುಣಗಳನ್ನು ಹೊಂದಿದವನು. ಮಂಗಳ ಯಾವ ಸ್ಥಾನದಲ್ಲಿ ಹೋಗಿ ಕೂರುತ್ತಾನೋ, ಅಲ್ಲಿ ಮಾತ್ರ ಆತ ನಾಶ ಮಾಡುವುದಿಲ್ಲ. ಅಲ್ಲಿ ನಾಶವನ್ನು ತರುವ ಜತೆಗೆ ಎಲ್ಲಿ ಆತ ನೋಡುತ್ತಾನೋ ಅಲ್ಲಿಯೂ ವಿನಾಶ ತಂದೊಡ್ಡುತ್ತಾನೆ. ಆದರೆ ಮಂಗಳ ಮೇಷ ಹಾಗೂ ವೃಶ್ಚಿಕ ರಾಶಿಯಲ್ಲಿದ್ದರೆ ಮಾತ್ರ ಆತ ತೊಂದರೆ ಮಾಡುವುದಿಲ್ಲ. 
 
ಪ್ರಥಮ ಸ್ಥಾನದಲ್ಲಿ ಮಂಗಳ ಯಾವಾಗಲೂ ಏಳನೇ ದೃಷ್ಟಿಯಿಂದ ಸಪ್ತಮನನ್ನ ಅಥವಾ ನಾಲ್ಕನೇ ಮನೆಯತ್ತ ದೃಷ್ಟಿಹರಿಸಿರುತ್ತಾನೆ. ಈ ದೃಷ್ಟಿಯ ಪರಿಣಾಮ ವೈವಾಹಿಕ ಜೀವನ ಹಾಗೂ ಮನೆಯ ಮೇಲೆ ಸದಾ ಬೀರುತ್ತದೆ.
 
ನಾಲ್ಕನೇ ಸ್ಥಾನದ್ಲಲಿ ಮಂಗಳನಿದ್ದರೆ, ಮಾನಸಿಕ ಕ್ಷೋಭೆ ಹೆಚ್ಚಾಗುತ್ತದೆ. ಮನೆಯಲ್ಲಿ ನೆಮ್ಮದಿ ಇಲ್ಲದಿರುವುದು, ಹಾಗೂ ಜೀವನದಲ್ಲಿ ಸದಾ ಸಂಘರ್ಷಗಳೇ ಏಳುವುದು ಇದರ ಪರಿಣಾಮಗಳು. ವೈವಾಹಿಕ ಜೀವನದ ಮೇಲೆಯೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ.
 
ಸಪ್ತಮ ಸ್ಥಾನದಲ್ಲಿ ಮಂಗಳನಿರುವ ಸಂಗಾತಿಯನ್ನು ಹೊಂದಿದ್ದರೆ ಅಂಥವರ ನಡುವೆ ಯಾವಾಗಲೂ ಭಿನ್ನಾಭಿಪ್ರಾಯಗಳು ಮೂಡುತ್ತದೆ. ಇಂಥ ಗಂಡಹೆಂಡಿರಲ್ಲಿ ಯಾವತ್ತೂ ಒಮ್ಮತಾಭಿಪ್ರಾಯ ಮೂಡುವುದೇ ಇಲ್ಲ. ಭಿನ್ನಾಭಿಪ್ರಾಯ ಕೆಲವೊಮ್ಮೆ ವಿಚ್ಛೇದನದವರೆಗೂ ತಲುಪುವ ಸಂಭವವಿವೆ.
 
ಅಷ್ಟಮದಲ್ಲಿ ಮಂಗಳ ಯಾವಾಗಲೂ ಸಂತಾನದ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ ಇಂಥವರ ಜೀವನ ಸಂಗಾತಿಯ ಆಯುಸ್ಸು ಕಡಿಮೆಯಾಗುತ್ತದೆ.
 
ದ್ವಾದಶದಲ್ಲಿ ಮಂಗಳನಿರುವುದರಿಂದ ದಂಪತಿಗಳಿಗೆ ಶಯನ ಸುಖ ಸಿಗುವುದಿಲ್ಲ. ವಿವಾಹದ ನಂತರ ಯಾವಾಗಲೂ ಶೋಕಮಯ ಜೀವನವಾಗುತ್ತದೆ.
 
ಕಷ್ಟ ಉಂಟಾದರೆ ಈ ದೋಷಗಳಿರುವ ಸಂಭವವಿವೆ.
 
1. ಮಂಗಳ ಗುರುವಿನ ಶುಭದೃಷ್ಟಿಯಲ್ಲಿದ್ದರೆ
 
2. ಕರ್ಕ ಅಥವಾ ಸಿಂಹ ಲಗ್ನದಲ್ಲಿ ಮಂಗಳನಿದ್ದರೆ
 
3. ಮಕರ ರಾಶಿಯಲ್ಲಿದ್ದರೆ,
 
4. ಸ್ವಯಂರಾಶಿಯ ಮೇಲೆ ಮಂಗಳನಿದ್ದರೆ
 
5. ಶುಕ್ರ, ಗುರು ಅಥವಾ ಚಂದ್ರನಿದ್ದರೆ
 
ಸಂಗಾತಿಗಳಾಗುವ ಇಬ್ಬರ ಕುಂಡಲಿಗಳನ್ನು ತಾಳೆ ಮಾಡಿ ನೋಡುವಾಗ ಈ ಸ್ಥಾನಗಳಲ್ಲಿ ಮಂಗಳ, ಶನಿ, ರಾಹು ಇದ್ದರೆ ಈ ದೋಷ ಕಡಿಮೆಯಾಗುತ್ತದೆ.
 
ಗಮನಿಸಿ: ಜಾತಕದಲ್ಲಿ ಹೊಂದಾಣಿಕೆಯಾದ ತಕ್ಷಣ ಇಬ್ಬರ ಗುಣ ಸ್ವಭಾವಗಳೇ ಬದಲಾವಣೆಯಾಗುತ್ತದೆ ಎಂಬುದು ತಪ್ಪು. ಅವರವರ ಜಾತಕದ ಗುಣಗಳು ಹಾಗೆಯೇ ಇರುತ್ತದೆ. ಹಾಗಾಗಿ ದಂಪತಿಗಳಲ್ಲಿ ಯಾವಾಗಲೂ ಭಿನ್ನಾಭಿಪ್ರಾಯ ಬರುವುದು ಸಹಜವೇ. ಆದರೆ, ಸಾಮರಸ್ಯದಿಂದ ಬದುಕುವುದು ನೆಮ್ಮದಿಯ ಜೀವನಕ್ಕಾಗಿ ಅತೀ ಅಗತ್ಯ ಎಂಬುದನ್ನು ನೆನಪಿಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಗುರುಬಲವೊಂದಿದ್ದರೆ ಸಾಕು ನಿಮ್ಮ ಇಷ್ಠಾರ್ಥ ಸಿದ್ದಿಯಾಗುತ್ತದೆ