ಕುಂಭ ಮದುವೆ ಯಾಕೆ ಮಾಡುತ್ತಾರೆ ತಿಳಿಯಿರಿ

Krishnaveni K
ಮಂಗಳವಾರ, 30 ಜನವರಿ 2024 (10:01 IST)
WD
ಬೆಂಗಳೂರು: ವಿವಾಹ ಸಂದರ್ಭದಲ್ಲಿ ಕೆಲವರು ಜ್ಯೋತಿಷಿಗಳ ಸಲಹೆ ಪ್ರಕಾರ ಕುಂಭ ಮದುವೆ ಮಾಡುತ್ತಾರೆ. ಹೀಗಂದರೆ ಏನು? ಯಾಕೆ ಮಾಡಬೇಕು? ನೋಡೋಣ.

ಜಾತಕದಲ್ಲಿ ಕುಜ ದೋಷ ಅಥವಾ ಎರಡು ಮದುವೆಯ ಯೋಗವಿದ್ದಾಗ ಕುಂಭ ವಿವಾಹ ಮಾಡುವುದು ಪದ್ಧತಿ. ವಿಶೇಷವಾಗಿ ಎರಡನೇ ಮದುವೆ ಯೋಗವಿರುವ ಕನ್ಯೆಗೆ ದೋಷ ಪರಿಹಾರಕ್ಕಾಗಿ ಕುಂಭ ಮದುವೆ ಮಾಡಿಸಲಾಗುತ್ತದೆ. ಮಣ್ಣಿನ ಮಡಕೆಯನ್ನು ಮದುಮಗನಂತೆ ಸಿಂಗರಿಸಿ ತಾಳಿ ಕಟ್ಟಿ ಶಾಸ್ತ್ರೋಸ್ತ್ರಕವಾಗಿ ಮದುವೆ ಶಾಸ್ತ್ರ ಮಾಡಿಸಲಾಗುತ್ತದೆ.

ಮದುವೆ ಸಂದರ್ಭದಲ್ಲಿ ಮಾಡುವ ಎಲ್ಲಾ ವಿಧಿ ವಿಧಾನಗಳನ್ನು ಈ ಸಂದರ್ಭದಲ್ಲಿ ಮಡಕೆಯೊಂದಿಗೆ ಮಾಡಲಾಗುತ್ತದೆ. ಕನ್ಯಾ ದಾನ, ಹೂ ಹಾರ ಬದಲಾವಣೆ, ತಾಳಿ ಶಾಸ್ತ್ರ ಇತ್ಯಾದಿ ಮದುವೆಯ ಎಲ್ಲಾ ಶಾಸ್ತ್ರಗಳನ್ನೂ ಮಾಡಲಾಗುತ್ತದೆ. ಮದುವೆಯ ಶಾಸ್ತ್ರ ಮುಗಿದ ಮೇಲೆ ಮಡಕೆಯನ್ನು ಒಡೆದು ನೀರಿನಲ್ಲಿ ಬಿಟ್ಟರೆ ಮದುವೆ ಶಾಸ್ತ್ರ ಮುಗಿದಂತೆ.

ಈ ಶಾಸ್ತ್ರದ ಬಳಿಕ ದೋಷ ಪರಿಹಾರವಾದಂತೆ. ಹಾಗೂ ದೋಷವಿದ್ದ ಯುವತಿ ತಾನು ಬಯಸಿದ ವರನನ್ನು ನಿರಾತಂಕವಾಗಿ ಮದುವೆಯಾಗಬಹುದು. ಒಂದು ವೇಳೆ ಈ ಪರಿಹಾರ ಮಾಡದೇ ಮದುವೆಯಾದಲ್ಲಿ ಅಂತಹ ಕನ್ಯೆಗೆ ದಾಂಪತ್ಯ ಜೀವನದಲ್ಲಿ ತೊಂದರೆ ಎದುರಾಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಉತ್ತಮ ಆರೋಗ್ಯಕ್ಕಾಗಿ ಹೇಳಬೇಕಾದ ಆಂಜನೇಯ ಮಂತ್ರ

ಮುಂದಿನ ಸುದ್ದಿ
Show comments