Publish Date: Wed, 19 Aug 2020 (08:57 IST)
Updated Date: Wed, 19 Aug 2020 (09:02 IST)
ಬೆಂಗಳೂರು: ಪ್ರತಿಯೊಂದು ರಾಶಿಯವರ ಗುಣ ಸ್ವಭಾವ ಬೇರೆ ಬೇರೆಯದ್ದಾಗಿರುತ್ತದೆ. ಅದೇ ರೀತಿ ಪ್ರತಿಯೊಂದು ರಾಶಿಯವರಿಗೂ ಒಂದೊಂದು ಋಣಾತ್ಮಕ ಅಂಶ ಅಥವಾ ಈ ವಿಚಾರ ನನಗೆ ಕಷ್ಟ ಎನ್ನುವುದು ಇದ್ದೇ ಇರುತ್ತದೆ. ಯಾವ ರಾಶಿಯವರಿಗೆ ಯಾವ ವಿಚಾರಗಳು ವೀಕ್ನೆಸ್ ಆಗಿರುತ್ತದೆ ಎಂದು ನೋಡುತ್ತಾ ಸಾಗೋಣ.
ಮಕರ
ಕೆಲಸ ಮಾಡುತ್ತಲೇ ಇರುವುದು, ನಿಲ್ಲಿಸಿದರೆ ಎಲ್ಲಿ ತನ್ನ ಆದಾಯಕ್ಕೆ ಪೆಟ್ಟು ಬೀಳುವುದೋ ಎಂದು ಕೊರಗುವುದು ಇವರ ಸ್ವಭಾವ. ವೈಯಕ್ತಿಕ ಮತ್ತು ವೃತ್ತಿ ಬದುಕಿನ ನಡುವೆ ಹೊಂದಾಣಿಕೆ ಮಾಡಿಕೊಳ್ಳಲು ಇವರಿಗೆ ಸಾಧ‍್ಯವಾಗುವುದಿಲ್ಲ. ಇದರಿಂದ ಸಂಬಂಧ ಉಳಿಸಿಕೊಳ್ಳಲು ಕಷ್ಟಪಡುತ್ತಾರೆ. ತಮ್ಮೊಳಗೇ ಹತಾಶೆಯಿಟ್ಟುಕೊಂಡಿರುತ್ತಾರೆ. ಅದನ್ನು ಹೊರ ಹಾಕಲು ಇವರಿಗೆ ಮಾರ್ಗ ತೋಚುವುದಿಲ್ಲ.