Webdunia - Bharat's app for daily news and videos

Install App

ಈ ರಾಶಿಯ ಯುವತಿಯರನ್ನು ಮದುವೆಯಾದ್ರೆ ನೀವು ಲಕ್ಕಿ

Krishnaveni K
ಮಂಗಳವಾರ, 20 ಫೆಬ್ರವರಿ 2024 (13:02 IST)
ಬೆಂಗಳೂರು: ಮದುವೆಯಾಗಬೇಕಿರುವ ಹುಡುಗರಲ್ಲಿ ನಿಮ್ಮ ಹೆಂಡತಿ ಹೇಗಿರಬೇಕು ಎಂದು ಕೇಳಿದರೆ ಇಷ್ಟುದ್ದದ ಲಿಸ್ಟ್ ಕೊಡುತ್ತಾರೆ. ತಾವು ಮದುವೆಯಾಗಬೇಕಿರುವ ಯುವತಿ ಬಗ್ಗೆ ಎಷ್ಟೋ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ.

ಆದರೆ ಜ್ಯೋತಿಷ್ಯದ ಪ್ರಕಾರ ಎಲ್ಲಾ ರಾಶಿಯವರೂ ಐಡಿಯಲ್ ಹೆಂಡತಿಯಾಗಲು ಸಾಧ್ಯವಿಲ್ಲ. ರಾಶಿಗುಣ ಪ್ರಕಾರ ಕೆಲವೊಂದು ರಾಶಿಯವರು ನೀವು ಬಯಸಿದ ರೀತಿಯಲ್ಲಿ ಉತ್ತಮ ಜೀವನ ಸಂಗಾತಿಗಳಾಗುತ್ತಾರೆ. ಅಂತಹ ರಾಶಿ ಯಾವುದು ಎಂದು ನೋಡೋಣ.

ಮೇಷ: ಈ ರಾಶಿಯವರು ಒಮ್ಮೆ ನಿಮ್ಮನ್ನು ಪ್ರೀತಿಸಲು ಶುರು ಮಾಡಿದರೆ ಯಾವತ್ತೂ ಯಾರ ಮುಂದೆಯೂ ತಲೆತಗ್ಗಿಸಲು ಬಿಡಲ್ಲ. ಈ ರಾಶಿಯವರು ಪತ್ನಿಯಾದರೆ ಗಂಡನನ್ನು ತುಂಬಾ ಪ್ರೀತಿ, ಕೇರ್ ಮಾಡುತ್ತಾರೆ.
ಮಿಥುನ ರಾಶಿ: ಈ ರಾಶಿಯವರು ಹೆಂಡತಿಯಾದರೆ ತುಂಬಾ ಕೇರಿಂಗ್ ಜೊತೆಗೆ ಕರುಣಾಮಯಿಗಳಾಗಿರುತ್ತಾರೆ. ನೈಜ ಪ್ರೀತಿಯನ್ನು ಹುಡುಕುತ್ತಾರೆ. ಅದು ಸಿಕ್ಕರೆ ಯಾವತ್ತೂ ನಿಮ್ಮನ್ನು ಬಿಟ್ಟುಕೊಡಲ್ಲ. ಯಾವುದೇ ಕೆಲಸ ಮಾಡುವುದಿದ್ದರೂ ತಮ್ಮ ಸಂಗಾತಿಯನ್ನು ಗಮನದಲ್ಲಿಟ್ಟುಕೊಂಡೇ ಮಾಡುತ್ತಾರೆ.
ಸಿಂಹ ರಾಶಿಯವರು: ಈ ರಾಶಿಯ ಪತ್ನಿಯರು ಸಂಬಂಧದಲ್ಲಿ ವಿಧೇಯರಾಗಿರುತ್ತಾರೆ. ನಿಮ್ಮ ಹಣಕಾಸಿನ ವಿಚಾರವನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಅನಗತ್ಯ ಖರ್ಚು ವೆಚ್ಚ ಮಾಡಲು ಬಿಡುವುದಿಲ್ಲ. ಯಾವತ್ತೂ ಸಂಗಾತಿಗೆ ಮೋಸ ಮಾಡುವವರಲ್ಲ. ಈ ರಾಶಿಯವರು ಹೆಂಡತಿಯಾದರೆ ವಿಶ್ವಾಸಾರ್ಹರಾಗಿರುತ್ತಾರೆ.
ತುಲಾ: ಈ ರಾಶಿಯವರು ಮಾತುಗಾರರು ಮತ್ತು ಆಕರ್ಷಕವಾಗಿರುತ್ತಾರೆ. ಎಲ್ಲಾ ಕೆಲಸಗಳನ್ನು ನಿಮಗೆ ಬೇಕಾದ ರೀತಿಯಲ್ಲೇ ಮಾಡುತ್ತಾರೆ. ನಿಮ್ಮ ಆರ್ಥಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಂಬಲಿಸುವವರಾಗಿರುತ್ತಾರೆ.
ಧನು ರಾಶಿ: ಈ ರಾಶಿಯವರು ಕರುಣಾಮಯಿಗಳು ಮತ್ತು ಪಾರದರ್ಶಕವಾಗಿರುತ್ತಾರೆ. ನಿಮ್ಮನ್ನು ತಾಯಿಯಂತೆ ನೋಡಿಕೊಳ್ಳುವ ಕರುಣಾಮಯಿಗಳಾಗಿರುತ್ತಾರೆ. ನಿಮ್ಮ ಜೀವನಕ್ಕೆ ಧನಾತ್ಮಕತೆ ತುಂಬಲು ಪ್ರಯತ್ನಿಸುತ್ತಾರೆ.
ಕುಂಭ ರಾಶಿ: ಈ ರಾಶಿಯ ಜೀವನ ಸಂಗಾತಿಗಳು ಭಾವುಕರು ಮತ್ತು ಸೂಕ್ಷ್ಮ ಸಂವೇದಿಗಳಾಗಿರುತ್ತಾರೆ. ತಮ್ಮ ಸಂಗಾತಿಗೆ ಹೆಚ್ಚು ಭಾವನಾತ್ಮಕವಾಗಿ ಅಂಟಿಕೊಳ್ಳುತ್ತಾರೆ. ನಿಮ್ಮ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಸ್ವಭಾವದವರಾಗಿರುತ್ತಾರೆ. ಸದಾ ನಿಮಗೆ ಬೆಂಬಲವಾಗಿರುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ

ಶಿವನ ಅನುಗ್ರಹಕ್ಕಾಗಿ ಇಂದು ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments