Publish Date: Wed, 07 Oct 2020 (09:12 IST)
Updated Date: Wed, 07 Oct 2020 (09:13 IST)
ಬೆಂಗಳೂರು: ಒಂದೊಂದು ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಒಂದೊಂದು ರೀತಿಯಲ್ಲಿ ಪ್ರಯತ್ನ ಪಡಬೇಕು. ಯಾವ ರಾಶಿಯವರ ಮನಸ್ಸನ್ನು ಏನು ಮಾಡಿದರೆ ಗೆಲ್ಲಬಹುದು ಮತ್ತು ಸಂತೋಷಪಡಿಸಬಹುದು ಎಂದು ನೋಡೋಣ.
ವೃಶ್ಚಿಕಾ
ಈ ರಾಶಿಯವರು ಕೊಂಚ ಸ್ವಾರ್ಥಿಗಳು, ಚುಚ್ಚು ಮಾತನಾಡುವವರೂ ಆಗಿರುತ್ತಾರೆ. ಹೊರಗೆ ಎಷ್ಟೇ ಆಕ್ರಮಣಕಾರಿಗಳಾಗಿದ್ದರೂ ಒಳಗೊಳಗೇ ಪುಕ್ಕಲುತನವೂ ಇರುತ್ತದೆ. ಹೀಗಾಗಿ ಇವರನ್ನು ಗೆಲ್ಲಬೇಕಾದರೆ ಅವರಿಗೆ ಅವರ ಭಯ ಹೋಗಲಾಡಿಸಲು ನೀವೇ ಸರಿ ಎಂದು ಮನದಟ್ಟು ಮಾಡಿಸಬೇಕು. ನಿಮ್ಮೊಂದಿಗೆ ಅವರಿಗೆ ನಂಬಿಕೆ ಹುಟ್ಟಿದರೆ ನಿಧಾನವಾಗಿ ತಮ್ಮನ್ನು ತಾವು ತೆರೆದುಕೊಳ್ಳುತ್ತಾರೆ.