Select Your Language

Notifications

webdunia
webdunia
webdunia
webdunia

ಉತ್ತಮ ಸಂಗಾತಿ ಬೇಕೆಂದರೆ ಈ ರಾಶಿಯವನ್ನು ಮದುವೆಯಾಗಿ

Astrology

Krishnaveni K

ಬೆಂಗಳೂರು , ಬುಧವಾರ, 10 ಜನವರಿ 2024 (08:20 IST)
ಬೆಂಗಳೂರು: ನಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡುವಾಗ ಪ್ರತಿಯೊಬ್ಬರಿಗೂ ಅನೇಕ ಕನಸುಗಳಿರುತ್ತವೆ. ಅದರಲ್ಲೂ ಕೆಲವರು ನನ್ನ ಬಾಳ ಸಂಗಾತಿ ಐಡಿಯಲ್ ಗಂಡ ಅಥವಾ ಐಡಿಯಲ್ ಹೆಂಡತಿಯಾಗಿರಬೇಕು ಎಂದು ಬೇಡಿಕೆಯಿಡುತ್ತಾರೆ.

ಹಾಗಿದ್ದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ಯಾವ ರಾಶಿಯವರನ್ನು ಮದುವೆಯಾದರೆ ನಿಮ್ಮ ಜೀವನ ಚೆನ್ನಾಗಿರುತ್ತದೆ. ಯಾವ ರಾಶಿಯ ಗಂಡ/ಹೆಂಡತಿ ತಕ್ಕ ಸಂಗಾತಿಯಾಗುತ್ತಾರೆ ನೋಡೋಣ.

ಕನ್ಯಾ, ಮಕರ, ಕರ್ಕಟಕ ಮತ್ತು ತುಲಾ ರಾಶಿಯಲ್ಲಿ ಜನಿಸಿದ ಗಂಡು ಅಥವಾ ಹೆಣ್ಣು ಉತ್ತಮ ಬಾಳಸಂಗಾತಿಯಾಗುತ್ತಾರೆ. ಕರ್ಕಟಕ ರಾಶಿಯವರು ಪ್ರೀತಿ, ಕಾಳಜಿ ತೋರಿಸುವುದರಲ್ಲಿ ಮುಂದು. ಇವರು ಮನೆಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ.

ತುಲಾ ರಾಶಿ: ಈ ರಾಶಿಯವರು ಸಮಾಧಾನ ಚಿತ್ತರು. ಇವರು ಸಮತೋಲನದಲ್ಲಿ ಜೀವನವನ್ನು ಮುನ್ನಡೆಸುತ್ತಾರೆ. ಸಂಗಾತಿಯೊಂದಿಗೆ ಶಾಂತ ಚಿತ್ತರು. ಸಂಗಾತಿಯ ಮಾತುಗಳಿಗೆ ಕಿವಿಯಾಗುತ್ತಾರೆ.

ಕನ್ಯಾ ರಾಶಿ: ಕನ್ಯಾ ರಾಶಿಯವರು ಏನೇ ಆದರೂ ಸಂಗಾತಿಯ ಕೈ ಬಿಡರು. ಈ ರಾಶಿಯವರು ರೊಮ್ಯಾಂಟಿಕ್ ಆಗಿರುತ್ತಾರೆ. ತಮ್ಮ ಜೀವನವನ್ನು ಸಂಗಾತಿಗಾಗಿಯೇ ಮುಡಿಪಾಗಿಡಬಲ್ಲರು.

ಮಕರ ರಾಶಿ: ಮಕರ ರಾಶಿಯವರು ಸಂಬಂದ, ಮದುವೆ, ಸಂಗಾತಿ ವಿಚಾರದಲ್ಲಿ ಅಳೆದು ತೂಗಿ ನಿರ್ಧಾರಕ್ಕೆ ಬರುತ್ತಾರೆ. ಅವರು ಸಂಬಂಧಕ್ಕೆ ಕಟ್ಟುಬಿದ್ದ ಮೇಲೆ ಅದಕ್ಕೆ ಬದ್ಧರಾಗಿರುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?