Webdunia - Bharat's app for daily news and videos

Install App

ಈ ರಾಶಿಯವರು ಬೆಸ್ಟ್ ಅಪ್ಪಂದಿರಾಗುತ್ತಾರೆ

Krishnaveni K
ಗುರುವಾರ, 1 ಫೆಬ್ರವರಿ 2024 (12:51 IST)
ಬೆಂಗಳೂರು: ಅಮ್ಮನಂತೆ ಒಂದು ಮಗುವಿನ ಬೆಳವಣಿಗೆಯಲ್ಲಿ ತಂದೆಯ ಪಾತ್ರವೂ ಮುಖ್ಯವಾಗಿದೆ. ಒಳ್ಳೆಯ ಅಪ್ಪ ತನ್ನ ಮಕ್ಕಳನ್ನು ಸರಿದಾರಿಯಲ್ಲಿ ನಡೆಸುತ್ತಾನೆ. ಹಾಗಿದ್ದರೆ ಜ್ಯೋತಿಷ್ಯ ಪ್ರಕಾರ ಬೆಸ್ಟ್ ಅಪ್ಪಂದಿರಾಗಬಹುದಾದ ರಾಶಿಯವರು ಯಾರು ನೋಡೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ನಾಯಕತ್ವದ ಗುಣ ಹುಟ್ಟಿನಿಂದಲೇ ಬಂದಿರುತ್ತದೆ. ತಂದೆಯಾದವನು ಉತ್ತಮ ನಾಯಕನಾಗಿರಬೇಕು. ತನ್ನ ಕುಟುಂಬವನ್ನು ಮುಂದೆ ನಿಂತು ನಡೆಸುವ ಗುಣ ಹೊಂದಿರಬೇಕು. ಈ ರಾಶಿಯ ಅಪ್ಪಂದಿರು ಪ್ರಾಮಾಣಿಕ, ಅತಿಯಾಗಿ ಪ್ರೀತಿಸುವ, ಭದ್ರತೆಯ ಭಾವ ಒದಗಿಸುವವರಾಗಿರುತ್ತಾರೆ.
ಸಿಂಹ ರಾಶಿ
ಸಿಂಹ ಎಂದರೆ ಕೇಳಬೇಕೇ? ಕಾಡಿನಲ್ಲಿದ್ದರೂ ರಾಜನಂತೆ ಮೆರೆಯುವ ಗುಣ. ಈ ರಾಶಿಯ ಅಪ್ಪಂದಿರು ಕುಟುಂಬಕ್ಕೆ ಶಕ್ತಿಯಾಗಿ ನಿಲ್ಲುತ್ತಾರೆ ಮತ್ತು ಹೃದಯದಿಂದ ಪ್ರೀತಿ ಮಾಡುವವರಾಗಿರುತ್ತಾರೆ. ಈ ರಾಶಿಯ ಅಪ್ಪಂದಿರು ಒಂದು ರೀತಿಯ ಧೈರ್ಯ ಕೊಡುತ್ತಾರೆ.
ಕನ್ಯಾ ರಾಶಿ
ಈ ರಾಶಿಯ ಅಪ್ಪಂದಿರು ಸಮಸ್ಯೆಗಳನ್ನು ನಿವಾರಿಸುವ ಆಪತ್ಬಾಂಧವರಾಗಿರುತ್ತಾರೆ. ಹಾಗೆಯೇ ತಮ್ಮ ಮಕ್ಕಳ ಮೇಲೆ ಅತಿಯಾಗಿ ಪ್ರೀತಿ, ಸೂಕ್ಷ್ಮ ಸಂವೇದಿಗಳಾಗಿರುತ್ತಾರೆ. ಆರ್ಥಿಕ ವಿಚಾರದಲ್ಲಿ ಮಕ್ಕಳಿಗೆ ಸರಿಯಾದ ಸಲಹೆ ಕೊಡುತ್ತಾರೆ.
ಕರ್ಕಟಕ ರಾಶಿ
ತಮ್ಮ ಮಕ್ಕಳನ್ನು ಅತಿಯಾಗಿ ಪ್ರೀತಿಸುವ ಅಪ್ಪಂದಿರಾಗಿರುತ್ತಾರೆ. ಹಾಗೆಯೇ ಮಕ್ಕಳನ್ನು ಕೇರ್ ಮಾಡುವುದರಲ್ಲಿ ನಿಸ್ಸೀಮರು. ಈ ರಾಶಿಯವರು ಅಪ್ಪಂದಿರಾಗಿ ಮಾತ್ರವಲ್ಲ, ಕುಟುಂಬದ ವ್ಯಕ್ತಿಯಾಗಿ ಎಲ್ಲರ ಮನ ಗೆಲ್ಲುತ್ತಾರೆ.
ಮಕರ ರಾಶಿ
ಈ ರಾಶಿಯ ಅಪ್ಪಂದಿರು ಜವಾಬ್ಧಾರಿ ತೆಗೆದುಕೊಳ್ಳುವುದರಲ್ಲಿ ಎತ್ತಿದ ಕೈ ಆಗಿರುತ್ತಾರೆ.  ಆ ಮೂಲಕ ಮಕ್ಕಳಿಗೆ ಅಭದ್ರತೆ ಕಾಡದಂತೆ ನೋಡಿಕೊಳ್ಳುತ್ತಾರೆ. ಮಕ್ಕಳಿಗೆ ನಾಯಕತ್ವದ ಗುಣ ಕಲಿಸಿಕೊಡುತ್ತಾರೆ. ಹಾಗೆಯೇ ಭಾವನಾತ್ಮಕ ವ್ಯಕ್ತಿಯಾಗಿರುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

ಮುಂದಿನ ಸುದ್ದಿ
Show comments