Publish Date: Thu, 22 Aug 2019 (08:52 IST)
Updated Date: Thu, 22 Aug 2019 (08:55 IST)
ಬೆಂಗಳೂರು: ಮನೆಯಲ್ಲಿ ಮಗು ಹುಟ್ಟಿದ ಕೂಡಲೇ ಎಲ್ಲರಿಗೂ ಇಷ್ಟವಾಗುವಂತಹ ಆಕರ್ಷಣೀಯವಾದಂತಹ, ಹಾಗೆಯೇ ಹೊಸ ಹೆಸರು ಯಾವುದಿದೆ ಎಂದು ಹುಡುಕಾಟ ನಡೆಸುತ್ತೇವೆ. ಆಸ್ತಿಕ ನಂಬಿಕೆ, ಶ್ರದ್ಧೆಯುಳ್ಳವರು ನಕ್ಷತ್ರಕ್ಕನುಗುಣವಾಗಿ ತಮ್ಮ ಮಗುವಿಗೆ ಯಾವ ಹೆಸರು ಸೂಕ್ತ ಎಂದು ಹುಡುಕಾಟ ನಡೆಸುತ್ತಾರೆ. ಇಂದು ಆರ್ದ್ರಾ ನಕ್ಷತ್ರದವರಿಗೆ ಯಾವ ಅಕ್ಷರ ಸೂಕ್ತ ನೋಡೋಣ.
ಆರ್ದ್ರಾ
ಆರ್ದ್ರಾ ನಕ್ಷತ್ರದಲ್ಲಿ ಜನಿಸಿದ ಮಕ್ಕಳಿಗೆ ಕು, ಘ,ನ ಅಥವಾ ಚ ಹೆಸರಿನಿಂದ ಆರಂಭವಾಗುವ ಹೆಸರಿಡಬೇಕು. ಆರ್ದ್ರಾ ಒಂದನೇ ಪಾದದಲ್ಲಿ ಜನಿಸಿದರೆ ಕು, ಎರಡನೇ ಪಾದದಲ್ಲಾದರೆ ಘ, ಮೂರನೇ ಪಾದದಲ್ಲಿ ನ, ನಾಲ್ಕನೇ ಪಾದದಲ್ಲಿ ಜನಿಸಿದರೆ ಚ ದಿಂದ ಆರಂಭವಾಗುವ ಹೆಸರಿಡಬೇಕು.