ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಠಮಿಯಾದ ಇಂದು ಹಿಂದೂ ಧರ್ಮೀಯರು ಭಕ್ತಿಯಿಂದ ಇಂದು ಶ್ರೀಕೃಷ್ಣನ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.
ಗಣೇಶ ಭೋಜನ ಪ್ರಿಯ ಎಂಬ ಮಾತಿದೆ. ಆದರೆ ಶ್ರೀಕೃಷ್ಣನೂ ತಿಂಡಿ ಪ್ರಿಯನೇ. ಬಾಲ್ಯದಲ್ಲಿ ಅವನ ತುಂಟಾಟಗಳಲ್ಲಿ ಬೆಣ್ಣೆ ಕದ್ದು ತಿನ್ನುತ್ತಿದ್ದ. ಹೀಗಾಗಿ ತುಂಟ ಕೃಷ್ಣನನ್ನು ಬೆಣ್ಣೆ ಕಳ್ಳ ಎಂದೇ ಕರೆಯಲಾಗುತ್ತಿತ್ತು.
ಹೀಗಾಗಿ ಶ್ರೀಕೃಷ್ಣ ಜನ್ಮಾಷ್ಠಮಿಯಂದು ಕೃಷ್ಣನಿಗೆ ಪ್ರಿಯವಾದ ತಿಂಡಿಗಳನ್ನು ನೈವೇದ್ಯವಾಗಿ ಇಟ್ಟು ಪೂಜೆ ಮಾಡಲಾಗುತ್ತದೆ. ಬೆಣ್ಣೆ ಮಾತ್ರವಲ್ಲದೆ, ಚಕ್ಕುಲಿ, ಹೆಸರು ಬೇಳೆ ಉಂಡೆ, ಅವಲಕ್ಕಿ, ಪಾಯಸಗಳನ್ನು ತಯಾರಿಸಿ ಕೃಷ್ಣನಿಗೆ ನೈವೇದ್ಯ ಮಾಡಲಾಗುತ್ತದೆ. ವಿವಿಧ ಭಕ್ಷ್ಯ ಭೋಜ್ಯಗಳಿಂದ ಕೃಷ್ಣನ ಪೂಜೆ ಮಾಡಿದರೆ ಅವನಿಗೂ ಸಂತೃಪ್ತಿಯಾಗುತ್ತದೆ ಎಂಬ ನಂಬಿಕೆ.