Publish Date: Tue, 16 Jan 2024 (10:58 IST)
Updated Date: Tue, 16 Jan 2024 (11:02 IST)
ಬೆಂಗಳೂರು: ಯಾರಾದರೂ ಏನಾದರೂ ಕೆಡುಕು ಮಾಡುತ್ತಿದ್ದರೆ ಅವರಿಗೆ ರಾಹು-ಕೇತುಗಳು ಎಂದು ಹಿಡಿಶಾಪ ಹಾಕುತ್ತೇವೆ. ಹಾಗಿದ್ದರೆ ಕೇತು ಗ್ರಹನ ಪರಿಣಾಮ ನಮ್ಮ ಮೇಲೆ ಯಾವ ರೀತಿ ಇರುತ್ತದೆ ನೋಡೋಣ.
ಜಾತಕದಲ್ಲಿ ಕೇತು ಗ್ರಹ ಪ್ರಬಲನಾಗಿದ್ದಾಗ ನಮ್ಮ ಜೀವನದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಅನೇಕ ತೊಂದರೆ, ಕಷ್ಟ-ನಷ್ಟಗಳನ್ನು ಎದುರಿಸಬೇಕಾದೀತು. ಉದ್ಯೋಗದಲ್ಲಿ ತೊಂದರೆ, ಉದ್ಯೋಗ ನಷ್ಟ ಸಾಧ‍್ಯತೆಯಿದೆ. ಅಥವಾ ನಮ್ಮ ವೃತ್ತಿ ಜೀವನದಲ್ಲಿ ನಾವು ಅಂದುಕೊಂಡಂತೇ ಬೆಳವಣಿಗೆ ಸಾಧ್ಯವಾಗದೇ ಹೋಗಬಹುದು. ಕೆಲವೊಂದು ಅಡೆತಡೆಗಳು ಬರುವ ಸಾಧ‍್ಯತೆಯಿದೆ.
ಮಾನಸಿಕವಾಗಿಯೂ ಕೇತು ಗ್ರಹ ನಮಗೆ ಕಷ್ಟಗಳನ್ನು ಕೊಡುತ್ತಾನೆ. ಕೇತುವಿನ ಕಾರಣದಿಂದ ಮನಸ್ಸಿಗೆ ಒಂದು ರೀತಿಯ ಅಶಾಂತಿ, ನೆಮ್ಮದಿಯ ಕೊರತೆ, ಕೌಟುಂಬಿಕ ಸಮಸ್ಯೆಗಳು ಬರಬಹುದು. ಅಥವಾ ಮಾನಸಿಕವಾಗಿ ಕಾಡುವ ಆತಂಕ, ಒತ್ತಡ ಮುಂತಾದ ಮನೋವ್ಯಾದಿಗಳಿಗೂ ಕೇತು ಕಾರಣವಾಗುತ್ತಾನೆ.
ಇಂತಹ ಸಂದರ್ಭದಲ್ಲಿ ನಾವು ಮುಖ್ಯವಾಗಿ ಪೂಜೆ ಮಾಡಬೇಕಾಗಿರುವುದು ವಿಘ‍್ನ ವಿನಾಶಕ ಗಣೇಶನನ್ನು. ಅಲ್ಲದೆ, ಕೇತುವಿನ ಮಂತ್ರ ಅಥವಾ ಕೇತು ಶಾಂತಿ ಮಾಡಿಸಿದರೆ ಪರಿಹಾರ ಕಂಡುಕೊಳ್ಳಬಹುದು.