Publish Date: Fri, 22 Feb 2019 (08:51 IST)
Updated Date: Fri, 22 Feb 2019 (08:53 IST)
ಬೆಂಗಳೂರು: ನಮ್ಮ ದೇಹದ ಆರೋಗ್ಯಕ್ಕೂ ಹುಟ್ಟಿದ ತಿಂಗಳಿಗೂ ಸಂಬಂಧವಿದೆ ಎನ್ನುವುದು ಕೇವಲ ಜ್ಯೋತಿಷ್ಯ ಮಾತ್ರವಲ್ಲ, ಹಲವು ವೈಜ್ಞಾನಿಕ ಅಧ್ಯಯನಗಳಿಂದಲೂ ತಿಳಿದುಬಂದಿದೆ. ಇಂದು ಮಾರ್ಚ್ ತಿಂಗಳನ್ನು ನೋಡೋಣ.
ಮಾರ್ಚ್
ಮಾರ್ಚ್ ತಿಂಗಳಲ್ಲಿ ಹುಟ್ಟಿದವರು ತಮ್ಮ ಹೃದಯ ಜೋಪಾನವಾಗಿಟ್ಟುಕೊಳ್ಳಬೇಕು. ಯಾಕೆಂದರೆ ಈ ತಿಂಗಳಲ್ಲಿ ಹುಟ್ಟಿದವರಿಗೆ ಹೃದಯ ಸಂಬಂಧೀ ಸಮಸ್ಯೆಗಳು ಕಾಡುವುದು ಹೆಚ್ಚು.
ಹೀಗಾಗಿ ಈ ತಿಂಗಳಲ್ಲಿ ಜನಿಸಿದವರು ಆದಷ್ಟು ಹೃದಯದ ಆರೋಗ್ಯ ಕಾಪಾಡುವಂತಹ ವ್ಯಾಯಾಮ, ಆಹಾರ ಸೇವನೆ ಮಾಡುವುದು ಮುಖ್ಯ. ಧ್ಯಾನ, ಯೋಗ ಮಾಡುತ್ತಿರಬೇಕು. ಹಾಗೆಯೇ ನಿಷೇಧಿತ, ಉದ್ದೀಪನಾ ಮದ್ದಿನ ಸೇವನೆಗಳಿಂದ ದೂರವಿರುವುದು ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ