ಇಂದು ರಾತ್ರಿ ಚಂದ್ರಗ್ರಹಣ: ಯಾವ ರಾಶಿಯವರಿಗೆ ತೊಂದರೆ?

Webdunia
ಶನಿವಾರ, 28 ಅಕ್ಟೋಬರ್ 2023 (09:10 IST)
ಬೆಂಗಳೂರು: ಇಂದು ತಡರಾತ್ರಿ ಪೂರ್ಣ ಚಂದ್ರನಿಗೆ ರಾಹುಗ್ರಸ್ತ ಗ್ರಹಣವಾಗಲಿದೆ. ಭಾರತ ಸೇರಿದಂತೆ ಏಷ್ಯಾ, ಆಫ್ರಿಕಾ, ಯುರೋಪ್, ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಈ ಚಂದ್ರಗ್ರಹಣದ ದರ್ಶನವಾಗಲಿದೆ.

ಇದು ಈ ವರ್ಷದ ಕೊನೆಯ ಗ್ರಹಣವಾಗಲಿದೆ. ತಡರಾತ್ರಿ 11.36 ಕ್ಕೆ ಆರಂಭವಾಗುವ ಗ್ರಹಣ, 3.35 ಕ್ಕೆ ಪೂರ್ಣಪ್ರಮಾಣದಲ್ಲಿ ಗೋಚರವಾಗಲಿದೆ. ಭಾರತದಲ್ಲಿ ಈ ಗ್ರಹಣವನ್ನು ಸ್ಪಷ್ಟವಾಗಿ ನೋಡಬಹುದಾಗಿದೆ.

30 ವರ್ಷದ ಬಳಿಕ ಶರದ್ ಹುಣ್ಣಿಮೆಯಂದು ಚಂದ್ರಗ್ರಹಣ ಸಂಭವಿಸುತ್ತಿದೆ. ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ಗ್ರಹಣ ಸಂಭವಿಸಲಿದ್ದು, ಈ ರಾಶಿಯವರಿಗೆ ಅರಿಷ್ಟವಿದೆ. ಈ ಚಂದ್ರಗ್ರಹಣವು ಪಾರ್ಶ್ವ ಅಥವಾ ಪಾಕ್ಷಿಕ ಚಂದ್ರಗ್ರಹಣವಾಗಿದೆ.

ಚಂದ್ರಗ್ರಹಣ ನಿಮಿತ್ತ ಇಂದು ತಿರುಪತಿ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ರಾತ್ರಿ ದೇವರ ದರ್ಶನ ನಿಷೇಧಿಸಲಾಗಿದೆ. ತಿರುಪತಿಯಲ್ಲಿ ರಾತ್ರಿ 7 ರಿಂದ ಬೆಳಗ್ಗಿನ ತನಕ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಮೈಸೂರಿನ ಚಾಮುಂಡಿ ಬೆಟ್ಟದಲ್ಲೂ ರಾತ್ರಿ 6 ರ ಬಳಿಕ ದೇವರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments