Webdunia - Bharat's app for daily news and videos

Install App

ವೃಷಭ ರಾಶಿಯವರ ಅದೃಷ್ಟದ ಬಣ್ಣ ಮತ್ತು ಸಂಖ್ಯೆ

Krishnaveni K
ಬುಧವಾರ, 7 ಫೆಬ್ರವರಿ 2024 (08:20 IST)
ಬೆಂಗಳೂರು: ಪ್ರತಿಯೊಂದು ರಾಶಿಯವರಿಗೂ ಅವರ ರಾಶಿಗನುಗುಣವಾಗಿ ಅದೃಷ್ಟದ ಬಣ‍್ಣ ಮತ್ತು ಸಂಖ್ಯೆ ಯಾವುದು ಎಂದಿರುತ್ತದೆ. ವೃಷಭ ರಾಶಿಯವರಿಗೆ ಯಾವ ಬಣ್ಣ ಮತ್ತು ಸಂಖ್ಯೆ ಅದೃಷ್ಟಶಾಲಿ ಎಂದು ನೋಡೋಣ.

ವೃಷಭ ರಾಶಿಯವರ ಗುಣ ಸ್ವಭಾವ
ವೃಷಭ ರಾಶಿಯವರನ್ನು ನೀವು ಕಣ್ಣು ಮುಚ್ಚಿ ನಂಬಬಹುದು. ಅವರು ಇತರರಿಗೆ ಮೋಸ ಮಾಡುವ ವಿಶ್ವಾಸಘಾತುಕರಲ್ಲ. ಇನ್ನೊಬ್ಬರ ಏಳಿಗೆಯನ್ನು ಕಂಡು ಸಂತೋಷ ಪಡುವಂತಹ ಉದಾರಿಗಳಾಗಿರುತ್ತಾರೆ. ಈ ರಾಶಿಯವರು ಬ್ಯಾಂಕಿಂಗ್, ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಾರೆ. ಆದರೆ ಇವರ ದೌರ್ಬಲ್ಯವೆಂದರೆ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಜಾಯಮಾನದವರಲ್ಲ. ಕೆಲವೊಮ್ಮೆ ಅತಿಯಾದ ಹಠವೇ ಅವರಿಗೆ ಮುಳುವಾಗಿರುತ್ತದೆ.

ಇವರು ಕರ್ಕಟಕ, ಮೀನ, ಮಕರ ರಾಶಿಯವರೊಂದಿಗೆ ಹೊಂದಾಣಿಕೆಯಿಂದಿರುತ್ತಾರೆ. ಆದರೆ ಕುಂಭ, ಧನು, ಮಿಥುನ ರಾಶಿಯವರ ಜೊತೆಗೆ ಇವರು ವೈರತ್ವ ಕಟ್ಟಿಕೊಳ್ಳುತ್ತಾರೆ. ಸಂಗಾತಿಯ ವಿಚಾರಕ್ಕೆ ಬಂದರೆ ಹೊಂದಿಕೊಳ್ಳಲು ಕೆಲವು ಸಮಯಾವಕಾಶ ತೆಗೆದುಕೊಳ್ಳುತ್ತಾರೆ.

ಅದೃಷ್ಟ ಸಂಖ್ಯೆ, ಬಣ್ಣ
ಈ ರಾಶಿಯವರಿಗೆ ಅದೃಷ್ಟದ ಸಂಖ್ಯೆಗಳೆಂದರೆ 2,6,9,12 ಮತ್ತು 24. ಈ ಸಂಖ್ಯೆ, ದಿನಾಂಕ ಇತ್ಯಾದಿಗಳಲ್ಲಿ ಅವರು ಮಾಡುವ ಕೆಲಸಗಳು ಯಶಸ್ವಿಯಾಗುತ್ತದೆ. ಇನ್ನು ಬಣ್ಣದ ವಿಚಾರಕ್ಕೆ ಬಂದರೆ ಹಸಿರು ಮತ್ತು ಗುಲಾಬಿ ವರ್ಣ ಈ ರಾಶಿಯವರಿಗೆ ಅದೃಷ್ಟ ತಂದುಕೊಡುತ್ತದೆ. ಹೀಗಾಗಿ ಈ ರಾಶಿಯವರು ಒಳ್ಳೆಯ ಕೆಲಸಕ್ಕೆ ಹೋಗುವಾಗ ಈ ಬಣ‍್ಣದ ಬಟ್ಟೆ ಧರಿಸಿದರೆ ಶುಭವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಹಣಕಾಸಿನ ಸಮಸ್ಯೆ ನಿವಾರಣೆಗೆ ಇಂದು ಈ ಸ್ತೋತ್ರ ಓದಿ

ಶ್ರೀ ವೆಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ

ವಿಘ್ನ ವಿನಾಯಕನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ತಪ್ಪದೇ ಓದಿ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments