ಮಿಥುನ ರಾಶಿಯವರ ಅದೃಷ್ಟದ ಬಣ್ಣ ಮತ್ತು ಸಂಖ್ಯೆ

Krishnaveni K
ಶುಕ್ರವಾರ, 9 ಫೆಬ್ರವರಿ 2024 (09:29 IST)
Photo Courtesy: Twitter
ಬೆಂಗಳೂರು: ಪ್ರತಿಯೊಂದು ರಾಶಿಯವರಿಗೂ ಒಂದೊಂದು ಅದೃಷ್ಟದ ಬಣ್ಣ ಮತ್ತು ಸಂಖ್ಯೆ ಎಂದಿರುತ್ತದೆ. ಹಾಗಿದ್ದರೆ ಮಿಥುನ ರಾಶಿಯವರಿಗೆ ಯಾವುದು ಅದೃಷ್ಟದ ಬಣ್ಣ ಮತ್ತು ಸಂಖ್ಯೆ ಎಂದು ನೋಡೋಣ.

ಮಿಥುನ ರಾಶಿಯವರ ಗುಣಸ್ವಭಾವಗಳು
ಮಿಥುನ ರಾಶಿಯವರು ತಮ್ಮವರನ್ನು ಅತಿಯಾಗಿ ಪ್ರೀತಿಸುತ್ತಾರೆ. ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಾಲ ಕಳೆಯಲು ಇಷ್ಟಪಡುತ್ತಾರೆ. ಈ ರಾಶಿಯವರು ತಮ್ಮ ಹವ್ಯಾಸ, ವೃತ್ತಿ ಎಂದು ಚುರುಕಾಗಿ ಎಲ್ಲದರಲ್ಲಿ ತೊಡಗಿಸಿಕೊಂಡು ಎಲ್ಲರಿಗೂ ಬೇಕಾದವರಾಗಿರುತ್ತಾರೆ.

ಆದರೆ ಇವರ ದೊಡ್ಡ ಅವಗುಣವೆಂದರೆ ಬೇಗನೇ ಬದಲಾವಣೆ ಬಯಸುತ್ತಾರೆ. ಒಬ್ಬರ ಸ್ನೇಹ ಬೋರಾಯಿತು ಎಂದಾದರೆ ಮುಲಾಜಿಲ್ಲದೇ ದೂರವಾಗುತ್ತಾರೆ. ಸಂಬಂಧವಿರಲಿ, ವೃತ್ತಿಯಿರಲಿ ಸ್ಥಿರತೆ ಕಾಪಾಡಿಕೊಳ್ಳುವುದಿಲ್ಲ. ಇನ್ನೊಬ್ಬರ ಮೇಲೆ ಸವಾರಿ ಮಾಡುವುದು, ಇಲ್ಲವೇ ಇನ್ನೊಬ್ಬರ ಬಗ್ಗೆ ಗಾಳಿಮಾತು ಹರಡುವ ಅಭ್ಯಾಸ ಇವರ ಅವಗುಣಗಳು.

ಮಿಥುನ ರಾಶಿಯವರ ಅದೃಷ್ಟ ಸಂಖ್ಯೆ ಮತ್ತು ಬಣ್ಣ
ಈ ರಾಶಿಯವರಿಗೆ 3,5,7,9,11 ಮತ್ತು 22 ಸಂಖ್ಯೆಗಳು ಅದೃಷ್ಟಶಾಲಿಯಾಗಿದ್ದು ಈ ಸಂಖ್ಯೆಯಲ್ಲಿ ಮಾಡುವ ಕೆಲಸಗಳು ಯಶಸ್ವಿಯಾಗುತ್ತದೆ. ಅದೇ ರೀತಿ ಹಳದಿ, ಹಸಿರು, ನೀಲಿ ಬಣ್ಣಗಳು ಮಿಥುನ ರಾಶಿಯವರಿಗೆ ಅದೃಷ್ಟ ತರುತ್ತದೆ. ಬುಧವಾರ, ಗುರುವಾರ, ಶನಿವಾರ ಈ ರಾಶಿಯವರಿಗೆ ಶುಭದಾಯಕ ದಿನಗಳಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೋಮವಾರ ಶಿವನ ಕುರಿತ ಈ ಸ್ತೋತ್ರವನ್ನು ತಪ್ಪದೇ ಓದಿ

ಮನೆಯಲ್ಲಿ ಶಂಖ ಊದುತ್ತಿದ್ದರೆ ತಿಳಿದುಕೊಳ್ಳಬೇಕಾದ ಅಂಶಗಳು

ಶನಿ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ

ಶುಕ್ರವಾರ ಈ ವಸ್ತುಗಳನ್ನು ಮನೆಗೆ ತರಬೇಡಿ

ದೀಪ ಹಚ್ಚುವಾಗ ಗೊತ್ತಿಲ್ಲದೆ ಈ ತಪ್ಪು ಮಾಡಬೇಡಿ, ಶ್ರೇಯಸ್ಸಲ್ಲ

ಮುಂದಿನ ಸುದ್ದಿ
Show comments