ಎಲ್ಲಾ ಸಂಕಷ್ಟಗಳ ನಿವಾರಣೆಗೆ ಲಾಲ್ ಕಿತಾಬ್

ಗುರುವಾರ, 23 ಜೂನ್ 2016 (12:37 IST)
ನಿಮ್ಮ ಎಲ್ಲಾ ಸಂಕಷ್ಟಗಳು ನಿಮಗೆ ಮತ್ತು ಕುಟುಂಬಕ್ಕೆ ಸಲೀಸಾಗಿ ಪರಿಹಾರವಾಗುವುದಕ್ಕೆ ಉತ್ತರವು ಲಾಲ್ ಕಿತಾಬ್‌ನಲ್ಲಿ ನೀಡಿರುವ ಪ್ರಾಯೋಗಿಕ ಪರಿಹಾರಗಳಲ್ಲಿ ಅಡಕವಾಗಿವೆ. ಲಾಲ್ ಕಿತಾಬ್ ಪರಿಹಾರಗಳ ಸಂಗ್ರಹವಾಗಿದ್ದು ಗ್ರಹಗಳು ಮತ್ತು ನಕ್ಷತ್ರಗಳ ನಕಾರಾತ್ಮಕ ಪರಿಣಾಮಗಳ ನಿವಾರಣೆಯಾಗಿದೆ.
 
ಲಾಲ್ ಕಿತಾಬ್ ವಾಸ್ತವವಾಗಿ ಏನು ಎಂಬ ಪ್ರಶ್ನೆ ಬರುತ್ತದೆ. ಲಾಲ್ ಕಿತಾಬ್ ಜ್ಯೋತಿಷ್ಯದ ಕ್ಷೇತ್ರವಾ3ಗಿದ್ದು ವ್ಯಕ್ತಿ ಮತ್ತು ನಕ್ಷತ್ರಗಳ ನಡುವೆ ವಿಸ್ತೃತ ಸಂಬಂಧವನ್ನು ವಿವರಿಸುತ್ತದೆ. ಇದಲ್ಲದೇ ಭಿನ್ನ ಗ್ರಹಗಳು ಮತ್ತು ನಕ್ಷತ್ರಗಳ ಕೆಟ್ಟ ಪರಿಣಾಮಗಳನ್ನು ಕುಂದಿಸಲು ಇದು ಪ್ರಾಯೋಗಿಕ ಪರಿಹಾರಗಳಾಗಿವೆ. 
 
7 ಪರಿಣಾಮಕಾರಿ ಲಾಲ್ ಕಿತಾಬ್ ಟಿಪ್ಸ್
ಮಂಗಳನ ನಕಾರಾತ್ಮಕ ಪರಿಣಾಮವು ಜಗಳಗಳನ್ನು, ರೋಗಗಳನ್ನು ಮತ್ತು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪ್ರತಿ ತಿಂಗಳು ಸಿಹಿ ಬ್ರೆಡ್ಡಿನ ಚೂರುಗಳನ್ನು ವಿಶೇಷವಾಗಿ ತಂಡೂರ್‌ನಲ್ಲಿ ಬೇಯಿಸಿದ ಬ್ರೆಡ್ಡನ್ನು ಪ್ರಾಣಿಗಳಿಗೆ ಹಾಕಬೇಕು.
ರಾತ್ರಿವೇಳೆಯಲ್ಲಿ ನಿಮ್ಮ ಹಾಸಿಗೆಯ ತಲೆಯ ಭಾಗದಲ್ಲಿ ನೀರಿನ ಮಡಕೆಯನ್ನು ಇರಿಸಿ. ಬೆಳಿಗ್ಗೆ ಎದ್ದ ನಂತರ ಸಸ್ಯ ಅಥವಾ ಮರಕ್ಕೆ ನೀರನ್ನು ಹಾಕಿ.
 
ಆಹಾರ ಸೇವನೆ ಮತ್ತು ಕುಡಿಯುವುದಕ್ಕೆ ಬೆಳ್ಳಿಯ ಪಾತ್ರೆಗಳನ್ನು ಬಳಸಿ, ಇದು ನಿಮ್ಮ ಚಂದ್ರನನ್ನು ಬಲಪಡಿಸುತ್ತದೆ ಮತ್ತು ರಾಹುವಿನ ಕೆಟ್ಟ ಪರಿಣಾಮ ಕುಂದಿಸುತ್ತದೆ.
 
ನಿಮ್ಮ ಗುರುವನ್ನು ಬಲಪಡಿಸಲು ನೀವು ಹಿರಿಯರಿಗೆ ಮತ್ತು ಸನ್ಯಾಸಿಗಳಿಗೆ ಗೌರವಿಸಬೇಕು. ನಿಮ್ಮ ತಂದೆಗೆ ಗೌರವ ನೀಡಿ ಅವರಿಗೆ ಬೇಸರ ಮಾಡದಿದ್ದರೆ ಅದು ತುಂಬಾ ಸಹಾಯಕ.
 
ಒಬ್ಬರು ಹಾಸಿಗೆ ಮೇಲೆ ಮತ್ತು ಅಡುಗೆ ಮನೆಯಲ್ಲಿ ಊಟ ಮಾಡುವುದನ್ನು ತಪ್ಪಿಸಬೇಕು. ಅನೇಕ ವರ್ಷಗಳವರೆಗೆ ಬಳಸದೇ ಇರುವ ವಸ್ತುಗಳನ್ನು ಸಂಗ್ರಹಿಸಬೇಡಿ. ಕೆಲವು ಅನವಶ್ಯಕ ವಸ್ತುಗಳನ್ನು ಮನೆಯಲ್ಲಿ ಮತ್ತು ಕಚೇರಿಯಲ್ಲಿ ಇಡಬೇಡಿ. ರಾಹು ಅನವಶ್ಯಕ ಹೆದರಿಕೆಗಳನ್ನು ಮತ್ತು ಚಿಂತೆಗಳನ್ನು ಉಂಟುಮಾಡುತ್ತದೆ.
 
ನಾಯಿಗಳಿಗೆ ಹಾನಿ ಅಥವಾ ಗಾಯ ಮಾಡಬೇಡಿ. ಬದಲಿಗೆ ಅವಕ್ಕೆ ಆಹಾರ ಉಣಿಸಿ. ಪುತ್ರ ಮತ್ತು ಐಷಾರಾಮಿ ಜೀವನದ ಸಂಕೇತವಾದ ಕೇತು ಬಲಪಡುತ್ತದೆ.
ಒಟ್ಟಾರೆ ಸಂಪತ್ತು ಮತ್ತು ಸಂತೋಷಕ್ಕಾಗಿ ಇತರೆ ಜೀವಿಗಳ ಜತೆ ಆಹಾರ ಹಂಚಿಕೊಂಡು ತಿನ್ನಬೇಕು. ನಿಮ್ಮ ಆಹಾರದಿಂದ ಹಸುಗಳು, ಕೋತಿಗಳು, ನಾಯಿಗಳು ಮತ್ತು ಕಾಗೆಗಳಿಗೆ ಚೂರು ಆಹಾರವನ್ನು ನೀಡಿ.
ನಾವು ಸರ್ವಶಕ್ತನಿಂದ ಆಶೀರ್ವಾದ ಪಡೆಯಲು ದೇವಾಲಯಗಳಿಗೆ ಭೇಟಿ ನೀಡುತ್ತೇವೆ. ಇದು ಅನುಸರಿಸುವ ಮತ್ತು ರಕ್ಷಿಸುವ ಸಂಪ್ರದಾಯವಾಗಿದೆ. ಆದರೆ ಉಪದ್ರವಕಾರಿ ಗ್ರಹವಿರುವ ಜನರು, ವಿಶೇಷವಾಗಿ ಶನಿ 8 ನೇ ಮನೆ ಮತ್ತು 2ನೇ ಮನೆ ಖಾಲಿಯಿದ್ದರೆ, ದೇವಾಲಯಗಳಿಗೆ ಮತ್ತು ಪೂಜಾಸ್ಥಳಗಳಿಗೆ ಭೇಟಿ ನೀಡಬಾರದು. 6, 8 ಮತ್ತು 12ನೇ ಮನೆಯಲ್ಲಿನ ಗ್ರಹಗಳು   ನಕಾರಾತ್ಮಕ ಸಂಬಂಧ ಹೊಂದಿದ್ದು, 2ನೇ ಮನೆ ಖಾಲಿಯಿದ್ದರೆ, ಸ್ಥಳೀಯರು ಯಾವುದೇ ಪೂಜಾ ಮಂದಿರಕ್ಕೆ ಭೇಟಿ ನೀಡದೇ ಮಂದಿರದ ಹೊರಗೆ ತಲೆಯನ್ನು ಬಗ್ಗಿಸಿ ಪ್ರಾರ್ಥನೆ ಸಲ್ಲಿಸಬೇಕು.
 
ನಾವು ಸಮಯವನ್ನು ವ್ಯರ್ಥಮಾಡುವ ಪರಿಹಾರಕ್ಕೆ ಅವಕಾಶವಿಲ್ಲದ ಜೀವನ ನಡೆಸುತ್ತೇವೆ. ಈ ಪರಿಹಾರವನ್ನು ವಿಶ್ಲೇಷಣೆ ಮಾಡಿದಾಗ ಅವು ಪ್ರಾಯೋಗಿಕವೆಂದು ಕಂಡುಬರುತ್ತದೆ.
 
ಲಾಲ್ ಕಿತಾಬ್ ವಂಡರ್ ಬುಕ್ ಎಂದೇ ಹೆಸರಾಗಿದೆ. ಈ ವಂಡರ್ ಪುಸ್ತಕವು ಜೀವನ ಸುಲಭಗೊಳಿಸುತ್ತದೆ ಮತ್ತು ಸರಳಗೊಳಿಸುತ್ತದೆ. ಲಾಲ್ ಕಿತಾಬ್ ನಿಮ್ಮ ಜೀವನದಲ್ಲಿ ಅಳವಡಿಸಿ ಸಂತೋಷ ಪಡೆಯಿರಿ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಿಮ್ಮ ವ್ಯಕ್ತಿತ್ವದ ಆಕರ್ಷಣೆ ವೃದ್ಧಿಗೆ ಜ್ಯೋತಿಷ್ಯದ ಟಿಪ್ಸ್