Webdunia - Bharat's app for daily news and videos

Install App

ನಿಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ಲವ್ ಲೈಫ್ ಹೇಗಿರುತ್ತದೆ ತಿಳಿಯಬಹುದು!

Webdunia
ಮಂಗಳವಾರ, 29 ಜನವರಿ 2019 (09:03 IST)
ಬೆಂಗಳೂರು: ಜನ್ಮದಿನಾಂಕಕ್ಕೆ ಅನುಗುಣವಾಗಿ ನಿಮ್ಮ ಲವ್ ಲೈಫ್, ವಿವಾಹ ಜೀವನ ಮತ್ತು ನಿಮ್ಮ ಸಂಗಾತಿ ಹೇಗಿರುತ್ತಾರೆ, ಸಂಗಾತಿಯಾಗಿ ನೀವು ಹೇಗಿರುತ್ತೀರಿ ಎಂದು ತಿಳಿಯಬಹುದು.


ನಂಬರ್ 1,10, 19, 28 : ನಿಮ್ಮ ಜನ್ಮ ದಿನಾಂಕ ಇವುಗಳಲ್ಲಿ ಯಾವುದಾದರೂ ಆಗಿದ್ದರೆ ನಿಮ್ಮ ಪ್ರೀತಿ ಪ್ರಾಮಾಣಿಕವಾಗಿರುತ್ತದೆ. ನೀವು ಯಾವುದೇ ಕಾರಣಕ್ಕೂ, ಎಂತಹದ್ದೇ ಸಂದರ್ಭದಲ್ಲೂ ಪ್ರೇಮಿಯನ್ನು ಬಿಟ್ಟುಕೊಡಲ್ಲ. ಸಂಗಾತಿಯ ಮೇಲೆ ಡಾಮಿನೇಟ್ ಮಾಡುತ್ತೀರಿ. ಹಾಗೆಯೇ ಪರಿಚಿತರನ್ನೇ ಮದುವೆಯಾಗಲು ಬಯಸುತ್ತೀರಿ.

ನಂಬರ್ 2,11, 20, 29 : ಈ ದಿನಾಂಕದಂದು ಹುಟ್ಟಿದವರು ಹೆಚ್ಚು ಮೂಡಿಗಳಾಗಿರುತ್ತಾರೆ. ಇವರು ಭಾವಜೀವಿಗಳು. ಇವರು ಪ್ರೇಮಿಗಳ ಜತೆ ಭಾವನಾತ್ಮಕವಾಗಿ ಹೆಚ್ಚು ಸಂಬಂಧ ಹೊಂದಿರುತ್ತಾರೆ. ಸಂಬಂಧವನ್ನು ಭಾವುಕತೆಯಿಂದಲೇ ನೋಡುತ್ತಾರೆ. ಸಂಗಾತಿ ಜತೆಗೆ ಹೆಚ್ಚಿನ ನಿರೀಕ್ಷೆ ಹೊಂದಿರುತ್ತಾರೆ. ಇವರು ದೈಹಿಕ ಸಂಬಂಧಕ್ಕಿಂತ ಮಾನಸಿಕ ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಇವರು ಹೆಚ್ಚು ಮೂಡಿಗಳಾಗಿರುವುದರಿಂದ ಸಂಗಾತಿಗೆ ಇವರನ್ನು ನಿಭಾಯಿಸುವುದು ಕಷ್ಟವಾಗುತ್ತದೆ.

ನಂಬರ್ 3, 12, 21, 30: ಈ ತಾರೀಖಿನಿಂದ ಹುಟ್ಟಿದ ವ್ಯಕ್ತಿಗಳ ಲವ್ ಲೈಫ್ ಹೆಚ್ಚು ಕಡಿಮೆ ಒಂದನೇ ಜನ್ಮದಿನಾಂಕದವರಂತೇ ಇರುತ್ತದೆ. ಇವರೂ ಸಂಗಾತಿಯನ್ನು ಡಾಮಿನೇಟ್ ಮಾಡಲು ಬಯಸುತ್ತಾರೆ. ಆದರೆ ಪ್ರೀತಿ ವಿಚಾರದಲ್ಲಿ ಅಷ್ಟೇ ಪ್ರಾಮಾಣಿಕರು. ತುಂಬಾ ಮಹತ್ವಾಕಾಂಕ್ಷಿಗಳು. ಪ್ರೀತಿಯನ್ನು ಭಾವುಕರಾಗಿ ನೋಡದೇ ಪ್ರಾಕ್ಟಿಕಲ್ ಆಗಿ ನೋಡುತ್ತಾರೆ. ಇಂತಹವರು ರೊಮ್ಯಾಂಟಿಕ್ ವ್ಯಕ್ತಿಗಳೊಂದಿಗೆ ಮದುವೆಯಾದರೆ ಜೀವನ ಚೆನ್ನಾಗಿರುತ್ತದೆ.

ನಂಬರ್ 4,13, 22, 31: ಈ ತಾರೀಖಿನಂದು ಹುಟ್ಟಿದವರು ಸಾಂಪ್ರದಾಯಿಕ ವಿಚಾರಗಳನ್ನು ಬಿಟ್ಟು ತಮ್ಮದೇ ಹಾದಿಯಲ್ಲಿ ನಡೆಯುವವರು. ಇವರು ಪ್ರೀತಿ, ಮದುವೆ ವಿಚಾರದಲ್ಲೂ ತಮ್ಮದೇ ನಿಲುವು ಹೊಂದಿರುತ್ತಾರೆ. ಮತ್ತು ಅದರಂತೇ ನಡೆಯುತ್ತಾರೆ. ಭಾವುಕತೆ ಕಡಿಮೆ, ಆದರೆ ಸೆಕ್ಸ್ ವಿಚಾರದಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಇವರಲ್ಲಿ ಪ್ರಾಮಾಣಿಕತೆ ನಿರೀಕ್ಷಿಸುವುದು ತಪ್ಪಾಗುತ್ತದೆ! ಈ ಜನ್ಮ ದಿನಾಂಕದವರನ್ನು ಮದುವೆಯಾದರೆ ನಿಮ್ಮ ಹಿಡಿತದಲ್ಲಿಟ್ಟುಕೊಳ್ಳುವುದು ಮುಖ್ಯ!

ನಂಬರ್ 5, 14, 23: ಈ ಸಂಖ್ಯೆಯ ಜನ್ಮದಿನಾಂಕ ಹೊಂದಿದವರಿಗೆ ಮದುವೆಗಿಂತ ಮೊದಲು ಹಲವು ಸಂಬಂಧಗಳನ್ನು ಮಾಡಿದ ಅನುಭವವಿರುತ್ತದೆ. ಇವರು ಬೇಗನೇ ಸಂಗಾತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಒಂಥರಾ ದುಂಬಿಗಳು! ಇವರಿಗೆ ದೈಹಿಕ ಸಂಬಂಧವೇ ಮುಖ್ಯ. ಇವರಿಗೆ ಶಿಸ್ತಿನ ಸ್ವಭಾವದ ಸಂಗಾತಿಯೇ ಬೇಕು.

ನಂಬರ್ 6, 15,24: ಈ ಜನ್ಮದಿನಾಂಕದವರು ಶಾಂತಿ ಪ್ರಿಯರು. ಇವರು ಪ್ರೀತಿ ಮಾಡಲು ಹೇಳಿ ಮಾಡಿಸಿದ ಗುಣವಂತರು. ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಆದರೆ ಕೆಲವೊಮ್ಮೆ ರೊಮ್ಯಾಂಟಿಕ್ ಸ್ವಭಾವವೇ ಮುಳುವಾಗಿ ಬೇರೆ ಸಂಬಂಧದ ಕಡೆ ವಾಲಲೂಬಹುದು! ಆದರೆ ಭಾವನಾತ್ಮಕವಾಗಿ ಸಂಗಾತಿಗೆ ಹೆಚ್ಚು ಹತ್ತಿರವಾಗಿರುತ್ತಾರೆ.

ನಂಬರ್ 7, 16,25: ಈ ಜನ್ಮ ದಿನಾಂಕದವರಿಗೆ ಮಾತು ಕಡಿಮೆ. ಇವರು ತುಂಬಾ ರೊಮ್ಯಾಂಟಿಕ್ ಆಗಿರಲ್ಲ. ಯಾವಾಗಲೂ ಕನಸಿನ ಲೋಕದಲ್ಲಿರುತ್ತಾರೆ. ಆದರೆ ಒಂದು ಸಂಬಂಧಕ್ಕೆ ಕಮಿಟ್ ಆದರೆ ಪ್ರಾಮಾಣಿಕವಾಗಿರುತ್ತಾರೆ. ಆದರೆ ವಾದ ಮಾಡುವುದು ಜಾಸ್ತಿ. ಸಣ್ಣ ವಿಚಾರವನ್ನೂ ದೊಡ್ಡದು ಮಾಡುವ ಸ್ವಭಾವ ದಾಂಪತ್ಯಕ್ಕೆ ಅಡ್ಡಿಯಾಗಲೂ ಬಹುದು!

ನಂಬರ್ 8, 17,26: ಇವರು ಭಾವುಕ ಜೀವಿಗಳು. ಆದರೆ ಅಷ್ಟೇ ಪ್ರಾಮಾಣಿಕರು. ಆದರೆ ಇವರ ಭಾವನಾ ಪ್ರಪಂಚದಿಂದ ಸಂಗಾತಿಯೊಂದಿಗೆ ಹೊಂದಾಣಿಕೆ ಕೊರತೆ, ತಪ್ಪು ಕಲ್ಪನೆ ಮಾಡಿಕೊಳ್ಳುವುದು ಇತ್ಯಾದಿ ಮಾಡುತ್ತಿರುತ್ತಾರೆ. ಆದರೆ ಹೃದಯದ ಮಾತಿಗೆ ಹೆಚ್ಚು ಬೆಲೆ ಕೊಡುವವರು. ಇವರಿಗೆ ಶಿಸ್ತಿನ ಸಂಗಾತಿಯೇ ಬೇಕು.

ನಂಬರ್ 9, 18,27: ಇವರು ತುಂಬಾ ಆಕ್ರಮಣಕಾರಿ ಸ್ವಭಾವದವರು. ಆದರೆ ಒಳಗೊಳಗೇ ತುಂಬಾ ಭಾವುಕರು. ತಮ್ಮ ಜತೆ ದೈಹಿಕ ಸಂಬಂಧಕ್ಕೆ ಸರಿ ಹೊಂದುವವರನ್ನೇ ಇವರು ಸಂಗಾತಿಯಾಗಿ ಆರಿಸಿಕೊಳ್ಳುತ್ತಾರೆ. ಕೆಲವೊಮ್ಮೆ ವಿವಾಹೇತರ ಸಂಬಂಧದ ಕಡೆಗೂ ವಾಲಬಹುದು! ಆದರೆ ಕುಟುಂಬದ ಬಗ್ಗೆ ತುಂಬಾ ಅನ್ಯೋನ್ಯತೆ ಬೆಳೆಸಿಕೊಂಡಿರುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶ್ರೀ ಗುರು ದತ್ತಾತ್ರೇಯ ಗಾಯತ್ರಿ ಮಂತ್ರ ಯಾವುದು, ಫಲವೇನು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಈ ಎರಡು ಗಣೇಶ ಮಂತ್ರ ಜಪಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments